ಯುರೋಪ್‌ನಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಒಂದೇ ರೀತಿಯ ಚಾರ್ಜರ್‌

Posted By:

ಯುರೋಪಿನ ಗ್ರಾಹಕರಿಗೆ ಮೊಬೈಲ್‌ ಚಾರ್ಜರ್‌ ಕಿರಿಕಿರಿ ತಪ್ಪಿಸಲು ಯುರೋಪಿಯನ್‌ ಸಂಸತ್ತು ಮೊಬೈಲ್‌ ಚಾರ್ಜರ್‌ಗೆ ಒಂದೇ ರೀತಿಯ ಮಾನದಂಡವನ್ನು ಅನುಸರಿಸಲು
ರೇಡಿಯೊ ಇಕ್ವಿಪ್‌ಮೆಂಟ್ ಕಾನೂನಿಗೆ ತಿದ್ದುಪಡಿ ತರಲು ಸಿದ್ಧತೆ ನಡೆದಿದೆ.

ಯುರೋಪಿಯನ್‌ ಸಂಸತ್ತಿನ ಎಲ್ಲಾ ಸದಸ್ಯರು ಕಾನೂನು ತಿದ್ದುಪಡಿಗೆ  ಅವಿರೋಧವಾಗಿ ಮತ ಚಲಾಯಿಸಿದ್ದಾರೆ.ಮೊಬೈಲ್‌ಗೆ ಯಾವ ರೀತಿಯ ಚಾರ್ಜರ್‌ನ್ನು ಅಭಿವೃದ್ಧಿ ಪಡಿಸಬೇಕು ಎಂಬುದನ್ನು ಯುರೋಪಿಯನ್ ಕಮಿಷನ್ ಅಂತಿಮಗೊಳಿಸಲಿದ್ದು ಇದರಂತೆ ಕಂಪೆನಿಗಳು ಚಾರ್ಜರ್‌ ರೂಪಿಸಬೇಕು ಎಂದು ಯುರೋಪಿಯನ್‌ ಸಂಸತ್ತು ತಿಳಿಸಿದೆ.

 ಯುರೋಪ್‌ನಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಒಂದೇ ರೀತಿಯ ಚಾರ್ಜರ್‌

ಒಂದೇ ರೀತಿಯ ಮೊಬೈಲ್‌ ಚಾರ್ಜರ್‌ ತಯಾರಿಸಲು ಕಂಪೆನಿಗಳಿಗೆ 2017ಕ್ಕೆ ಡೆಡ್‌ ಲೈನ್‌ ನಿಗದಿ ಪಡಿಸಿದ್ದು,ಈ ಅವಧಿ ಒಳಗಡೆ ಈ ಚಾರ್ಜರ್‌ ಸಮಸ್ಯೆಯನ್ನು ಅಂತಿಮಗೊಳಿಸಿ, ಒಂದೇ ರೀತಿಯ ಮಾನದಂಡವಿರುವ ಚಾರ್ಜರ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಬೇಕು ಎಂದು ಯುರೋಪಿಯನ್‌ ಓಕ್ಕೂಟ ಹೇಳಿದೆ.

ಬಹುತೇಕ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿಗಳು ಮೈಕ್ರೋ ಯುಎಸ್‌ಬಿ ಚಾರ್ಜಿಂಗ್‌ ವ್ಯವಸ್ಥೆಗೆ ಬದಲಾಗಿವೆ.ಆದರೆ ಆಪಲ್‌ ತನ್ನ ಐಫೋನ್‌ಗೆ ಲೈಟ್ನಿಂಗ್‌ ಪವರ್‌‌ ಕನೆಕ್ಟರ್‌ ನೀಡಿದ್ದು ಆಪಲ್‌ ಸಾಧನಗಳನ್ನು ಮಾತ್ರ ಇದರಲ್ಲಿ ಚಾರ್ಜ್‌ ಮಾಡಬಹುದಾಗಿದೆ.

ಇದನ್ನೂ ಓದಿ: ಆಂಡ್ರಾಯ್ಡ್ ವೇರ್‌- ಸ್ಮಾರ್ಟ್‌ವಾಚ್‌‌ಗಳಿಗಾಗಿ ಗೂಗಲ್‌‌ನಿಂದ ಹೊಸ ಓಎಸ್‌

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot