Home
ಮೊಬೈಲ್

ಒನ್‌ಪ್ಲಸ್‌ 5T ಸ್ಮಾರ್ಟ್‌ಫೋನ್ ಲಾಂಚ್‌ಗೂ ಮುನ್ನ ನೀವು ತಿಳಿಯಲೇ ಬೇಕಾದ ವಿಷಯಗಳು...!

By Srinidhi

ಜಾಗತಿಕ ಮೊಬೈಲ್ ಮಾರುಕಟ್ಟೆ ಕಾಯುತ್ತಿರುವ ಕ್ಷಣವೂ ಹತ್ತಿರವಾಗಿದೆ. ಇಂದು ರಾತ್ರಿ ಒನ್‌ಪ್ಲಸ್ ಕಂಪನಿಯೂ ತನ್ನ ನೂತನ್ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಒನ್‌ಪ್ಲಸ್‌ 5T ಲಾಂಚ್ ಆಗಲಿದ್ದು, ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಎಲ್ಲಾ ಟಾಪ್‌ ಎಂಡ್ ಫೋನ್‌ಗಳು ಇದರಿಂದ ಹೊಡೆತವನ್ನು ತಿನ್ನಲಿದೆ ಎನ್ನಲಾಗಿದೆ.

ಒನ್‌ಪ್ಲಸ್‌ 5T ಸ್ಮಾರ್ಟ್‌ಫೋನ್ ಲಾಂಚ್‌ಗೂ ಮುನ್ನ ನೀವು ತಿಳಿಯಲೇ ಬೇಕಾದ ವಿಷಯಗಳು.

ಓದಿರಿ: ಆನ್‌ಲೈನ್‌ನಲ್ಲಿ ಶಿಯೋಮಿಗೆ ಸೆಡ್ಡು ಹೊಡೆದ ಹೊಸ ಕಂಪನಿ: ಡ್ಯುಯಲ್ ಕ್ಯಾಮೆರಾ ಫೋನ್ ಸೋಲ್ಡ್ ಔಟ್

ಈಗಾಗಲೇ ಆಂಡ್ರಾಯ್ಡ್ ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿರುವ ಒನ್‌ಪ್ಲಸ್ ಈ ಬಾರಿ ಮತ್ತೊಂದು ಬೊಂಬಾಟ್ ಸ್ಮಾರ್ಟ್‌ಫೋನ್‌ಅನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಈ ಒನ್‌ಪ್ಲಸ್‌ 5T ಸ್ಮಾರ್ಟ್‌ಫೋನ್ ಕುರಿತ ಸಂಪೂರ್ಣ ವಿವರವು ಇಲ್ಲಿದೆ.

ಒನ್‌ಪ್ಲಸ್‌ 5T ಬೆಲೆ:

ಒನ್‌ಪ್ಲಸ್‌ 5T ಬೆಲೆ:

ಒನ್‌ಪ್ಲಸ್‌ 5T ಸ್ಮಾರ್ಟ್‌ಫೋನ್ ರೂ.40000ದ ಅಸುಪಾಸಿನಲ್ಲಿ ದೊರೆಯಲಿದೆ ಎನ್ನಲಾಗಿದೆ. ನವೆಂಬರ್ 21 ರಂದು ಮಾರಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಅಂದು ಸಂಜೆ 4:30ರ ನಂತರ ಅಮೆಜಾನ್ ಮತ್ತು ಒನ್‌ಪ್ಲಸ್‌ಸ್ಟೋರ್‌.ಇನ್‌ನಲ್ಲಿ ಸೇಲ್‌ ಆಗಲಿದೆ. ಆಫ್‌ ಲೈನ್‌ ಮಾರುಕಟ್ಟೆಯಲ್ಲಿ ನವೆಂಬರ್ 28ರ ನಂತರದಲ್ಲಿ ಕಾಣಿಸಿಕೊಳ್ಳಲಿದೆ.

ಒನ್‌ಪ್ಲಸ್‌ 5T ವಿಶೇಷತೆಗಳು:

ಒನ್‌ಪ್ಲಸ್‌ 5T ವಿಶೇಷತೆಗಳು:

ಒನ್‌ಪ್ಲಸ್‌ 5T ಸ್ಮಾರ್ಟ್‌ಫೋನ್ 6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಅಲ್ಲದೇ ಫುನ್‌ಸ್ಕ್ರಿನ್‌ ವಿನ್ಯಾಸದಾಗಿದ್ದು, 18:9 ಅನುಪಾತವನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ 3450mAh ಬ್ಯಾಟರಿಯನ್ನು ಇದರಲ್ಲಿ ಕಾಣಬಹುದಾಗಿದೆ. ಜೊತೆಗೆ ಡ್ಯಾಷ್ ಚಾರ್ಜ್ ಸಫೋರ್ಟ್ ಮಾಡಲಿದೆ. ಅಲ್ಲದೇ ಇದು ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದು, 6GB RAM ಮತ್ತು 8GB RAM ಆವೃತ್ತಿಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ. ಅಲ್ಲದೇ 128 GB ಮತ್ತು 64GB ಇಂಟರ್ನಲ್ ಮೊಮೊರಿಯೂ ಇರಲಿದೆ.

ಒನ್‌ಪ್ಲಸ್‌ 5T ಕ್ಯಾಮೆರಾ:

ಒನ್‌ಪ್ಲಸ್‌ 5T ಕ್ಯಾಮೆರಾ:

ಒನ್‌ಪ್ಲಸ್‌ 5T ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದು ಹೊಸ ಮಾದರಿಯಲ್ಲಿ ಕಾಣಿಸಿಕೊಮಡಿದೆ. ಇದಕ್ಕಾಗಿಯೇ ಹೊಸ ಮಾದರಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಕ್ಯಾಮೆರಾ ವಿಭಾಗದಲ್ಲಿ ಈ ಹಿಂದಿಗಿಂತಲೂ ಭಾರಿ ಬದಲಾವಣೆಯನ್ನು ಮಾಡಿಕೊಂಡಿದೆ

ಲಾಂಚ್ ನೋಡಬಹುದು:

ಲಾಂಚ್ ನೋಡಬಹುದು:

ಒನ್‌ಪ್ಲಸ್‌ 5T ಸ್ಮಾರ್ಟ್‌ಫೋನ್ ಲಾಂಚ್ ಹೊಸ ಮಾದರಿಯನ್ನು ಅನುಸರಿಸುತ್ತಿದೆ. ತನ್ನ ಭಾರತೀಯ ಅಭಿಮಾನಿಗಳಿಗಾಗಿಯೇ ಅಮೆರಿಕಾದಲ್ಲಿ ನಡೆಯುವ ಲಾಂಚ್ ಕಾರ್ಯಕ್ರಮವನ್ನು ಪಿವಿಆರ್‌ ಚಿತ್ರಮಂದಿರಗಳಲ್ಲಿ ಲೈವ್ ಪ್ರಸಾರ ಮಾಡಲಿದೆ. ಇಲ್ಲಿ ಸ್ಮಾರ್ಟ್‌ಫೋನ್ ಡೆಮೋವನ್ನು ನೋಡಬಹುದಾಗಿದೆ.

ಅಲ್ಲದೇ ಪ್ರಿಬುಕ್ ಮಾಡಬಹುದು:

ಅಲ್ಲದೇ ಪ್ರಿಬುಕ್ ಮಾಡಬಹುದು:

ಇದಲ್ಲದೇ ಒನ್‌ಪ್ಲಸ್ ಫಾನ್‌ಗಳು ಲಾಂಚ್ ಇವೆಂಟ್‌ನಲ್ಲಿಯೇ ಸ್ಮಾರ್ಟ್‌ಫೋನ್ ಪ್ರೀ ಬುಕ್ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ ಲೈವ್ ಸ್ಕ್ರಿನ್ ನಲ್ಲಿ ಪಾಲ್ಗೊಂಡವರು ಸಹ ಪ್ರೀ ಬುಕ್ ಮಾಡಬಹುದು ಎನ್ನುವ ಮಾಹಿತಿಯೂ ಲಭ್ಯವಿದೆ.

Best Mobiles in India

English summary
Everything you need to know about OnePlus 5T. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+