Home
ಮೊಬೈಲ್

ಇಲ್ಲಿವೆ ನೋಡಿ ಫಾಸ್ಟ್‌ ಚಾರ್ಜಿಂಗ್‌ ಫೋನ್‌ಗಳು!..ಅರ್ಧ ಗಂಟೆಯೊಳಗೆ ಬ್ಯಾಟರಿ ಫುಲ್‌!

ಸದ್ಯ ಮೊಬೈಲ್‌ ಮಾರುಕಟ್ಟೆಗೆ ಭಿನ್ನ ಮಾದರಿಯ ಫೋನ್‌ಗಳು ಲಗ್ಗೆ ಇಡುತ್ತಿವೆ. ಅವುಗಳಲ್ಲಿ ಬಹುತೇಕ ಸ್ಮಾರ್ಟ್‌ಫೋನ್‌ಗಳು ಬಿಗ್ ಬ್ಯಾಟರಿ, ವೇಗದ ಪ್ರೊಸೆಸರ್‌, ಅತ್ಯುತ್ತಮ ಕ್ಯಾಮೆರಾ ಸೇರಿದಂತೆ ಕೆಲವು ಆಕರ್ಷಕ ಫೀಚರ್ಸ್‌ಗಳೊಂದಿಗೆ ಎಂಟ್ರಿ ಕೊಡುತ್ತಿವೆ. ಹಾಗೆಯೇ ಮಾರುಕಟ್ಟೆಯಲ್ಲಿ ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಇರುವ ಫೋನ್‌ಗಳು ಹೆಚ್ಚು ಆಕರ್ಷಕ ಎನಿಸಿಕೊಂಡಿವೆ. ಆ ಪೈಕಿ 100W ಹಾಗೂ ಅದಕ್ಕಿಂತಲೂ ಅಧಿಕ ವೇಗದ ಚಾರ್ಜಿಂಗ್‌ ಸೌಲಭ್ಯದ ಫೋನ್‌ಗಳು ಗಮನ ಸೆಳೆದಿವೆ.

ಹೌದು, ಕೆಲವು ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಫೋನ್‌ಗಳು ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿವೆ. ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆ ಇರುವ ಫೋನ್‌ಗಳು ಸುಮಾರು 30 ನಿಮಿಷಗಳ ಒಳಗಾಗಿ ಫೋನಿನ ಬ್ಯಾಟರಿ ಭರ್ತಿ ಮಾಡಲು ನೆರವಾಗುತ್ತವೆ. ಹೀಗಾಗಿ ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳು ಫಾಸ್ಟ್‌ ಚಾರ್ಜಿಂಗ್ ಇರುವ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚಾಗಿ ಮಾರುಕಟ್ಟೆಗೆ ಪರಿಚಯಿಸುತ್ತ ಸಾಗಿವೆ. ಹಾಗಾದರೇ ಸದ್ಯ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯದ ಕೆಲವು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಇಲ್ಲಿವೆ ನೋಡಿ ಫಾಸ್ಟ್‌ ಚಾರ್ಜಿಂಗ್‌ ಫೋನ್‌ಗಳು!..ಅರ್ಧ ಗಂಟೆಯೊಳಗೆ ಬ್ಯಾಟರಿ ಫುಲ್

ರಿಯಲ್‌ಮಿ GT 6T ಮೊಬೈಲ್‌

ರಿಯಲ್‌ಮಿ GT 6T ಮೊಬೈಲ್‌ 6.78 ಇಂಚಿನ 3D LTPO AMOLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದರ ಡಿಸ್‌ಪ್ಲೇಯು 2,789 x 1,264 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಅಲ್ಲದೇ ಇದು ಸ್ನ್ಯಾಪ್‌ಡ್ರಾಗನ್ 7+ ಜೆನ್‌ 3 ಚಿಪ್‌ಸೆಟ್‌ ಪ್ರೊಸೆಸರ್‌ ಬಲದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಸಹ ಇದೆ.

ಇದರ ಜೊತೆಗೆ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇದರೊಂದಿಗೆ 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದರ ಜೊತೆಗೆ 120W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಒನ್‌ಪ್ಲಸ್‌ 12R ಮೊಬೈಲ್

ಒನ್‌ಪ್ಲಸ್‌ ಸಂಸ್ಥೆಯ ಈ ಫೋನ್‌ 6.78 ಇಂಚಿನ BOE X1 OLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1,264x2,780 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದರೊಂದಿಗೆ ಸ್ನಾಪ್‌ಡ್ರಾಗನ್‌ 8 ಜೆನ್‌ 2 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 14 ಆಧಾರಿತ OxygenOS 14 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.

ಹಾಗೆಯೇ ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾವನ್ನು ಸೆಟ್‌ಅಪ್‌ ಅನ್ನು ಪಡೆದುಕೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೌಲಭ್ಯ ಪಡೆದಿದೆ. ಇದಲ್ಲದೇ ಈ ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಹೊಂದಿದೆ. ಇದಕ್ಕೆ ಪೂರಕವಾಗಿ 100W SuperVOOC ವೈರ್ಡ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ.

ಐಕ್ಯೂ ನಿಯೋ 9 ಪ್ರೊ ಫೋನ್‌

ಐಕ್ಯೂ ನಿಯೋ 9 ಪ್ರೊ ಮೊಬೈಲ್‌ 6.78 ಇಂಚಿನ LTPO AMOLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು 1260 x 2800 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 ಜೆನ್‌ 2 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಆಂಡ್ರಾಯ್ಡ್ 14 ಓಎಸ್‌ ಸಪೋರ್ಟ್‌ನೊಂದಿಗೆ ಕಾರ್ಯ ನಿರ್ವಹಿಸಲಿದೆ.

ಹಾಗೆಯೇ ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಆಗಿದೆ. ಇದರೊಂದಿಗೆ 5160 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 120W FlashCharge ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್ ಪಡೆದಿದೆ.

Best Mobiles in India

English summary
Fastest charging Mobiles under Rs 50,000 in India 2024. check mobile list and specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+