ಬಜೆಟ್ ಬೆಲೆಯಲ್ಲಿ 12GB RAM ಸೌಲಭ್ಯದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಇವು!
ಪ್ರಸ್ತುತ ಮೊಬೈಲ್‌ಗಳು ಎಲ್ಲರಿಗೂ ಅವಶ್ಯ ಡಿವೈಸ್ ಎನಿಸಿಕೊಂಡಿದ್ದು, ಅನೇಕ ಕೆಲಸಗಳು ಸ್ಮಾರ್ಟ್‌ಫೋನ್ ಮೂಲಕವೇ ನಡೆಯುತ್ತವೆ. ಈ ನಿಟ್ಟಿನಲ್ಲಿ ಅನೇಕರು ಅಧಿಕ RAM ಸೌಲಭ್ಯ ಇರುವ ಮೊಬೈಲ್ ಖರೀದಿಸಲು ಮುಂದಾಗುತ್ತಾರೆ. ಹೀಗಾಗಿ ಕೆಲವು ಮೊಬೈಲ್ ಬ್ರ್ಯಾಂಡ್‌ಗಳು ಕೂಡಾ ಅಧಿಕ RAM ಇರುವ ಫೋನ್‌ಗಳ ಆಯ್ಕೆಗಳನ್ನು ಹೊಂದಿವೆ. ಅದರಲ್ಲಿಯೂ ಸದ್ಯ ಅನೇಕರು 12GB RAM ಫೋನ್‌ಗಳಿಗೆ ಮನಸೋಲುತ್ತಿದ್ದಾರೆ.
ಹೌದು, ಮೊಬೈಲ್ ಮಾರುಕಟ್ಟೆಯಲ್ಲಿ 12GB RAM ಮೊಬೈಲ್‌ಗಳು ಹೆಚ್ಚು ಬೇಡಿಕೆಯಲ್ಲಿ ಕಾಣಿಸಿಕೊಂಡಿವೆ. ಹೈ ಎಂಡ್ RAM ಫೋನ್‌ಗಳು ಮಲ್ಟಿ ಟಾಸ್ಕ್ ಕೆಲಸ ಮಾಡುವಾಗ ಮತ್ತು ಅಪ್ಲಿಕೇಶನ್ ಇನ್ ಸ್ಟಾಲ್ ಮಾಡುವಾಗ ಯಾವುದೇ ಅಡೆ ತಡೆ ಇಲ್ಲದೇ ಸಾಗುತ್ತವೆ. ಇನ್ನು ಸ್ಯಾಮ್‌ಸಂಗ್, ಶಿಯೋಮಿ, ಒನ್‌ಪ್ಲಸ್, ಐಕ್ಯೂ, ವಿವೋ ಹಾಗೂ ಒಪ್ಪೋ ಮೊಬೈಲ್ ಕಂಪನಿಗಳು ಸಹ ಅಧಿಕ RAM ಆಯ್ಕೆಯಲ್ಲಿ ಸ್ಟೋರೇಜ್ ಫೋನ್‌ಗಳನ್ನು ಪರಿಚಯಿಸಿವೆ. ಹಾಗಾದರೇ 12GB RAM ಸಾಮರ್ಥ್ಯದ ಕೆಲವು ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಮೊಟೊರೊಲಾ ಎಡ್ಜ್ 50 ಫ್ಯೂಜನ್
ಮೊಟೊರೊಲಾ ಎಡ್ಜ್ 50 ಫ್ಯೂಜನ್ ಮೊಬೈಲ್ 6.7 ಇಂಚಿನ 3D ಕರ್ವ್ಡ್ pOLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಡಿಸ್‌ಪ್ಲೇಯು 2400 × 1080p ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಹೊಂದಿದೆ. ಅಲ್ಲದೇ ಕ್ವಾಲ್ಕಮ್ ಸ್ನಾಪ್ಡ್ರಾಗನ್ 7s ಜೆನ್ 3 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಪಡೆದಿದ್ದು, ಈ ಫೋನ್ 8GB + 128GB ಹಾಗೂ 12GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಒಳಗೊಂಡಿದೆ.
ಹಾಗೆಯೇ ಮೊಟೊರೊಲಾ ಎಡ್ಜ್ 50 ಫ್ಯೂಜನ್ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇನ್ನು ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 5,000 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದೆ.
ರಿಯಲ್‌ಮಿ ನಾರ್ಜೊ 70 ಟರ್ಬೊ 5G
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಮೊಬೈಲ್ 6.67 ಇಂಚಿನ ಸ್ಯಾಮ್‌ಸಂಗ್ E4 OLED ಡಿಸ್ಪ್ಲೇ ಅನ್ನು ಹೊಂದಿದ್ದು, ಇದು 120 Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಪಡೆದಿದೆ. ಅಲ್ಲದೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ 5G 4nm ಪ್ರೊಸೆಸರ್ ಪವರ್ ಅನ್ನು ಒಳಗೊಂಡಿದೆ. ಹಾಗೆಯೇ ಇದು 8GB + 128GB ಹಾಗೂ 12GB + 256GB ವೇರಿಯಂಟ್ ಆಯ್ಕೆ ಪಡೆದಿದೆ.
ಹಾಗೆಯೇ ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಆಗಿದೆ. ಇದರ ಜೊತೆಗೆ ಇದರ ಸೆಲ್ಫಿ ಕ್ಯಾಮೆರಾ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 5,000 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದೆ.
ಪೊಕೊ X6 5G
ಪೊಕೊ X6 5G ಮೊಬೈಲ್ 6.67 ಇಂಚಿನ ಡಿಸ್‌ಪ್ಲೇ ಸೌಲಭ್ಯವನ್ನು ಹೊಂದಿದ್ದು, ಜೊತೆಗೆ ಅಮೋಲೆಡ್ ಮಾದರಿಯ ಸ್ಕ್ರೀನ್ ಪಡೆದಿದೆ. ಇದು ಸ್ನ್ಯಾಪ್‌ಡ್ರ್ಯಾಗನ್ 7 ಜೆನ್ 2 ಪ್ರೊಸೆಸರ್ ಪವರ್ ಪಡೆದಿದ್ದು, ಆಂಡ್ರಾಯ್ಡ್ 14 ಓಎಸ್ ಜೊತೆಗೆ 8 GB RAM + 256 GB ಹಾಗೂ 12 GB RAM + 512 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಸಹ ಪಡೆದಿದೆ. ಇನ್ನು ಈ ಫೋನಿನ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದ್ದು, ಜೊತೆಗೆ 5,100mAh ಬ್ಯಾಟರಿ ಬ್ಯಾಕ್‌ಅಪ್ ಹಾಗೆಯೇ ಅದಕ್ಕೆ ಸಪೋರ್ಟ್ ಆಗಿ 67W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದೆ.


Click it and Unblock the Notifications








