ಅಧಿಕ RAM ಸೌಲಭ್ಯದ ಬೆಸ್ಟ್ ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ಇಲ್ಲಿದೆ!
ಪ್ರಸ್ತುತ ಮೊಬೈಲ್‌ಗಳು ಪ್ರತಿಯೊಬ್ಬರಿಗೂ ಅಗತ್ಯ ಡಿವೈಸ್ ಆಗಿದೆ. ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಸ್ಮಾರ್ಟ್‌ಫೋನ್ಗಳಲ್ಲಿ ಅಪ್‌ಡೇಟ್ ಆಯ್ಕೆಗಳು ಸೇರ್ಪಡೆ ಆಗುತ್ತ ಸಾಗಿವೆ ಅದಾಗ್ಯೂ, ವೇಗದ ಕಾರ್ಯ ವೈಖರಿಯ ಸ್ಮಾರ್ಟ್‌ಫೋನ್‌ಗಳನ್ನು ಅನೇಕರು ಇಷ್ಟಪಡುತ್ತಾರೆ.
ಪಡೆದಿರುವ ವೇಗದ ಪ್ರೊಸೆಸರ್ ಬಲ ಒಳಗೊಂಡಿರುವ ಸ್ಮಾರ್ಟ್‌ಫೋನ್ ಗಳು ಅತ್ಯುತ್ತಮ ಕಾರ್ಯ ವೈಖರಿ ನಿಡುತ್ತವೆ. ಅಲ್ಲದೇ ಇಂತಹ ಫೋನ್‌ಗಳು ಮಲ್ಟಿ ಟಾಸ್ಕ್ ಕೆಲಸ ಮಾಡುವಾಗ ಮತ್ತು ಅಪ್ಲಿಕೇಶನ್ ಇನ್ ಸ್ಟಾಲ್ ಮಾಡುವಾಗ ಯಾವುದೇ ಅಡೆ ತಡೆ ಆಗುವ ಸಾಧ್ಯತೆ ವಿರಳ. ಹೀಗಾಗಿ ಮಲ್ಟಿ ಟಾಸ್ಕ್ ಕೆಲಸಗಳನ್ನು ಹೆಚ್ಚಾಗಿ ಬಳಕೆ ಮಾಡುವ ಗ್ರಾಹಕರು ಅಧಿಕ RAM ಸಾಮರ್ಥ್ಯದ ಫೋನ್‌ಗಳನ್ನು ಖರೀದಿಸಲು ಮುಂದಾಗುತ್ತಾರೆ.

ಜನಪ್ರಿಯ ಮೊಬೈಲ್ ಬ್ರ್ಯಾಂಡ್‌ಗಳು ಸೇರಿದಂತೆ ಇತರೆ ಮೊಬೈಲ್ ಕಂಪನಿಗಳು ಸಹ ಅಧಿಕ RAM ಆಯ್ಕೆ ನೀಡುತ್ತಿವೆ. ಸದ್ಯ ನೀವೇನಾದರೂ 12GB RAM ಸಾಮರ್ಥ್ಯದ ಮೊಬೈಲ್ ಖರೀದಿಸುವ ಯೋಜನೆ ಮಾಡಿದ್ದರೇ, ಅಂತಹ ಕೆಲವು ಫೋನ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಮುಂದೆ ಓದಿರಿ.
ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್
ಈ ಫೋನ್ 6.82 ಇಂಚಿನ QHD+ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1440 x 3168 ಪಿಕ್ಸೆಲ್ ಸ್ಕ್ರೀನ್ ಸೂಪರ್ ಕ್ರಿಸ್ಪ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಅಲ್ಲದೇ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 3 SoC ಪ್ರೊಸೆಸರ್ ವೇಗವನ್ನು ಹೊಂದಿದ್ದು, ಇದು ಆಂಡ್ರಾಯ್ಡ್ 14 ಓಎಸ್ ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM + 256GB ಹಾಗೂ 16GB RAM + 512GB ಸ್ಟೋರೇಜ್ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಗಳನ್ನು ಪಡೆದಿದೆ.
ವಿವೋ X100 ಪ್ರೊ ಫೋನ್
ವಿವೋ ಸಂಸ್ಥೆಯ ಈ ಫೋನ್ 6.78 ಇಂಚಿನ 8T LTPO ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120 Hz ವರೆಗಿನ ರಿಫ್ರೆಶ್ ರೇಟ್ ಮತ್ತು 3,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡಲಿದೆ. ಅಲ್ಲದೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸಲಿದ್ದು, 12GB RAM ಮತ್ತು 256GB ಸ್ಟೋರೇಜ್ ಆಯ್ಕೆ ಮತ್ತು 16GB RAM ಮತ್ತು 512GB ಸ್ಟೋರೇಜ್‌ನ ವೇರಿಯಂಟ್ ಆಯ್ಕೆ ಇವೆ. ಅಲ್ಲದೇ ಅಧಿಕ ಬ್ಯಾಟರಿ ಸೌಲಭ್ಯ ಸಹ ಇದೆ.
ಐಕ್ಯೂ 12 ಫೋನ್
ಐಕ್ಯೂ 12 ಮೊಬೈಲ್ 6.78 ಇಂಚಿನ 1.5K LTPO OLED ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಡಿಸ್‌ಪ್ಲೇ 2800 x 1260 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಅಲ್ಲದೇ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 3 SoC ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಅಧಿಕ ಬ್ಯಾಟರಿ ಸೌಲಭ್ಯ ಇದೆ.
ಒನ್‌ಪ್ಲಸ್ 12R ಫೋನ್
ಒನ್‌ಪ್ಲಸ್‌ನ ಈ ಫೋನ್ 6.78 ಇಂಚಿನ BOE X1 OLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇಯು 1,264 x 2,780 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಪಡೆದುಕೊಂಡಿದೆ. ಅಲ್ಲದೇ ಇದು ಸ್ನ್ಯಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಪಡೆದಿದ್ದು, ಹಾಗೆಯೇ ಈ ಫೋನ್ 8GB RAM + 128GB ಮತ್ತು 16GB RAM + 256GB ಸ್ಟೋರೇಜ್ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಗಳನ್ನು ಒಳಗೊಂಡಿರುವುದು ಆಕರ್ಷಕ ಎನಿಸಿದೆ.


Click it and Unblock the Notifications








