ಅತ್ಯುತ್ತಮ Curved Display ಮೊಬೈಲ್ ಬೇಕಿದ್ರೆ, ಇಲ್ಲಿ ಒಮ್ಮೆ ಗಮನಿಸಿ!
ಪ್ರಸ್ತುತ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಹಲವು ನೂತನ ಅಪ್‌ಡೇಟ್ ಆಗುತ್ತಾ ಸಾಗಿದ್ದು, ಮಾರುಕಟ್ಟೆಗೆ ಬರುತ್ತಿರುವ ಹೊಸ ಸ್ಮಾರ್ಟ್‌ಫೋನ್‌ಗಳು ಅಚ್ಚರಿ ಫೀಚರ್ಸ್‌ಗಳೊಂದಿಗೆ ಎಂಟ್ರಿ ಕೊಡುತ್ತಿವೆ. ಆ ಪೈಕಿ ಮೊಬೈಲ್ ಡಿಸ್‌ಪ್ಲೇ ಆಯ್ಕೆಯು ಇತ್ತೀಚಿಗೆ ಹೆಚ್ಚಿನ ಅಪ್‌ಗ್ರೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭಿನ್ನ ಮಾದರಿಯ ಡಿಸ್‌ಪ್ಲೇ ಫೋನ್‌ಗಳು ಪರಿಚಿತವಾಗುತ್ತಿವೆ. ಇದೀಗ ಅಮೋಲೆಡ್, ಸೂಪರ್ ಅಮೋಲೆಡ್, OLED ಮಾದರಿಯ ಡಿಸ್‌ಪ್ಲೇಗಳು ಹೆಚ್ಚು ಮುನ್ನಲೆಯಲ್ಲಿ ಇದ್ದು, ಅದರೊಟ್ಟಿಗೆ ಇದೀಗ ಕರ್ವ್ಡ್ ಮಾದರಿಯ (curved display) ಡಿಸ್‌ಪ್ಲೇಗಳು ಗ್ರಾಹಕರ ಗಮನ ಸೆಳೆದಿವೆ.
ಹೌದು, ಇತ್ತೀಚಿಗೆ ಕರ್ವ್ಡ್ ಮಾದರಿಯ (curved display) ಡಿಸ್‌ಪ್ಲೇಗಳು ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ಸು, ಜೊತೆಗೆ ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಈ ಮಾದರಿಯ ಡಿಸ್‌ಪ್ಲೇಗಳು ರೆಸಲ್ಯೂಶನ್ ಅಧಿಕ ಪಡೆದಿದ್ದು, ವೀಕ್ಷಣೆಯ ನೋಟಕ್ಕೂ ಹೊಸತನ ನೀಡುತ್ತವೆ. ಸ್ಕ್ರೀನ್ ಗ್ಲಾಸ್ ಸಹ ಉತ್ತಮ ಗುಣಮ್ಟಟದಲ್ಲಿ ಇರುತ್ತದೆ. ಈ ನಿಟ್ಟಿನಲ್ಲಿ ಬಳಕೆದಾರರಿಗೆ ಕರ್ವ್ಡ್ ಮಾದರಿಯ ಡಿಸ್‌ಪ್ಲೇಗಳು ಸೆಳೆಯುತ್ತಿವೆ. ಹಾಗಾದರೇ ಕರ್ವ್ಡ್ ಡಿಸ್‌ಪ್ಲೇ ಪಡೆದ ಕೆಲವು ಅತ್ಯುತ್ತಮ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಮೊಟೊರೊಲಾ ಎಡ್ಜ್ 50 ಅಲ್ಟ್ರಾ
ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಮೊಬೈಲ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಪಡೆದಿದ್ದು, ಈ ಡಿಸ್‌ಪ್ಲೇಯು 1200 x 2780 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಬೆಂಬಲ ಇದೆ. ಇದಲ್ಲದೆ ಡಿಸ್‌ಪ್ಲೇ 144 ಟ್ರೂ ಕಲರ್ ಡಿಸ್‌ಪ್ಲೇ ಸೌಲಭ್ಯ ಪಡೆದಿದ್ದು, ಇದರೊಂದಿಗೆ ಡಿಸ್‌ಪ್ಲೇ 2500 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಪಡೆದಿದ್ದು, 3D ಕರ್ವ್ ಡಿಸ್‌ಪ್ಲೇ ರಚನೆ ಅನ್ನು ಹೊಂದಿದೆ.
ಅಲ್ಲದೇ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್ ಸಪೋರ್ಟ್ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಬೆಂಬಲ ಒಳಗೊಂಡಿದೆ. 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 125W ಫಾಸ್ಟ್ ಟರ್ಬೋ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ.
ವಿವೋ V30e ಮೊಬೈಲ್
ವಿವೋ V30e ಈ ಫೋನ್ 6.78 ಇಂಚಿನ ಫುಲ್ ಹೆಚ್‌ಡಿ + ಕರ್ವ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್ ಬಲದಲ್ಲಿ ಕೆಲಸ ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಸಹ ಪಡೆದಿದೆ.
ಹಾಗೆಯೇ ಈ ಫೋನ್ 8GB + 128GB ಹಾಗೂ 8GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಜೊತೆಗೆ 5500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ.
ಇನ್ಫಿನಿಕ್ಸ್ ಜಿರೋ 30 5G
ಇನ್ಫಿನಿಕ್ಸ್ ಜಿರೋ 30 5G (Infinix Zero 30 5G) ಈ ಫೋನ್ 6.78 ಇಂಚಿನ 1080 x 2400 px, 144 Hz ರಿಫ್ರೆಶ್ ರೇಟ್ ಇರುವ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಇದರೊಂದಿಗೆ ಡೈಮೆನ್ಸಿಟಿ 8020 ಪ್ರೊಸೆಸರ್‌ನೊಂದಿಗೆ 12 GB RAM, 256 GB ಇಂಟರ್ ಸ್ಟೋರೇಜ್ ಬೆಂಬಲ ಪಡೆದಿದೆ. ಇದರ ಜೊತೆಗೆ 108 MP + 13 MP + 2 MP ಟ್ರಿಪಲ್ ರಿಯರ್ ಹಾಗೂ 50 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಅಲ್ಲದೇ ಈ ಮೊಬೈಲ್ 68W ಫಾಸ್ಟ್ ಚಾರ್ಜಿಂಗ್ ಬೆಂಬಲದ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ.


Click it and Unblock the Notifications








