Home
ಮೊಬೈಲ್

ಸದ್ಯ ಎಂಟ್ರಿ ಲೆವೆಲ್‌ನಲ್ಲಿ ಇವೇ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು!..ಫೀಚರ್ಸ್‌ ಏನು?

ಲೀಡಿಂಗ್ ಮೊಬೈಲ್‌ ಬ್ರ್ಯಾಂಡ್‌ಗಳು ಹೈ ಎಂಡ್‌ ಮಾದರಿಯ ಫೋನ್‌ಗಳ ಜೊತೆಗೆ ಎಂಟ್ರಿ ಲೆವೆಲ್‌ ಮಾದರಿಯ ಫೋನ್‌ಗಳನ್ನು ಸಹ ಲಾಂಚ್ ಮಾಡಿ ಗ್ರಾಹಕರ ಗಮನ ಸೆಳೆದಿವೆ. ಇತ್ತೀಚಿನ ಬಹುತೇಕ ಎಂಟ್ರಿ ಲೆವೆಲ್‌ ಫೋನ್‌ಗಳು ಅಧಿಕ ಸ್ಟೋರೇಜ್‌, ಬಿಗ್ ಬ್ಯಾಟರಿ ಹಾಗೂ 50 ಎಂಪಿ ಮುಖ್ಯ ಕ್ಯಾಮೆರಾ ಫೀಚರ್ಸ್‌ ಒಳಗೊಂಡಿದ್ದು, ಬಜೆಟ್‌ ಪ್ರೈಸ್‌ ಟ್ಯಾಗ್‌ನ ಫೋನ್‌ಗಳಿಗೆ ಟಕ್ಕರ್ ನೀಡುವಂತೆ ಇವೆ.

ಹೌದು, ಇಂದಿನ ಅನೇಕ ಎಂಟ್ರಿ ಲೆವೆಲ್‌ ಮೊಬೈಲ್‌ಗಳು ಆಕರ್ಷಕ ಫೀಚರ್ಸ್‌ ಪಡೆದಿದ್ದು, ಪೊಕೊ, ರೆಡ್ಮಿ, ಮೊಟೊ, ರಿಯಲ್‌ಮಿ, ಐಟೆಲ್‌, ಟೆಕ್ನೋ ಸಂಸ್ಥೆಗಳ ಫೋನ್‌ಗಳು ಗಮನ ಸೆಳೆದಿವೆ. ಈ ವಿಭಾಗದ ಫೋನ್‌ಗಳ ಬೆಲೆ 10,000 ರೂ. ಒಳಗೆ ಇದ್ದು, ಸ್ಪರ್ಧಾತ್ಮಕ ಫೀಚರ್ಸ್‌ಗಳನ್ನು ಪಡೆದಿರುವುದು ಪ್ರಮುಖ ಹೈಲೈಟ್‌ ಎನಿಸಿದೆ. ಹಾಗಾದರೇ ಈ ವಿಭಾಗದಲ್ಲಿ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ಕೆಲವು ಬೆಸ್ಟ್‌ ಫೋನ್‌ಗಳ ಬಗ್ಗೆ ಇಲ್ಲಿದೆ ವಿವರ. ಮುಂದೆ ಓದಿರಿ.

ಸದ್ಯ ಎಂಟ್ರಿ ಲೆವೆಲ್‌ನಲ್ಲಿ ಇವೇ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು!..ಫೀಚರ್ಸ್‌ ಏನು?

ಮೊಟೊ G24 ಪವರ್‌

ಮೊಟೊ ಮೊಬೈಲ್‌ ಕಂಪನಿಯ ಈ ಸ್ಮಾರ್ಟ್‌ಫೋನ್ 6.6 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಫೋನ್ 90 Hz ರಿಫ್ರೆಶ್ ರೇಟ್‌ ಆಯ್ಕೆ ಇದೆ. ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G85 12nm ಪ್ರೊಸೆಸರ್ ಮೂಲಕ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್‌ 14 ಅನ್ನು ಸಪೋರ್ಟ್ ಪಡೆದಿದೆ.

ಹಾಗೆಯೇ ಈ ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ. ಅಲ್ಲದೇ ಇದು 6,000 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 33 W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಪಡೆದಿದೆ.

ಪೊಕೊ M6 5G ಫೋನ್‌

ಪೊಕೊ ಸಂಸ್ಥೆಯ ಈ ಮೊಬೈಲ್‌ನ 6.74 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದೆ. ಅಲ್ಲದೇ ಈ ಡಿಸ್‌ಪ್ಲೇ 90 Hz ರಿಫ್ರೆಶ್‌ ರೇಟ್‌ ಸಪೋರ್ಟ್ ಮಾಡಲಿದೆ. ಹಾಗೆಯೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಇದು ಆಂಡ್ರಾಯ್ಡ್‌ 13 ಆಧಾರಿತ MIUI 14 ನಲ್ಲಿ ಕೆಲಸ ಮಾಡುತ್ತದೆ.

ಇದರೊಂದಿಗೆ ಈ ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಈ ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 18 W ಫಾಸ್ಟ್‌ ಚಾರ್ಜಿಂಗ್ ಅನ್ನು ಪಡೆದಿದೆ.

ರೆಡ್ಮಿ 13C ಸ್ಮಾರ್ಟ್‌ಫೋನ್‌

ಈ ಸ್ಮಾರ್ಟ್‌ಫೋನ್‌ 6.74 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 1,600 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಇದು ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ಹೊಂದಿದ್ದು, ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಇದೆ.

ಹಾಗೆಯೇ ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿದ್ದು, ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದರೊಂದಿಗೆ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಈ ಫೋನ್‌ 18W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಕೂಡಾ ಸಪೋರ್ಟ್ ಮಾಡುತ್ತದೆ.

Best Mobiles in India

English summary
Few Best Entry Level Smartphones in india 2024. check phone list and specifications details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+