Home
ಮೊಬೈಲ್

ತಡೆರಹಿತ ಮೊಬೈಲ್‌ ಗೇಮ್‌ ಆಡಬೇಕೆ?..ಹಾಗಿದ್ರೆ, ಈ ಫೋನ್‌ಗಳು ಅತ್ಯುತ್ತಮ!

ಟೆಕ್‌ ಮಾರುಕಟ್ಟೆಯಲ್ಲಿ ಗೇಮಿಂಗ್‌ ಮೊಬೈಲ್‌ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅಧಿಕ ಡೇಟಾ ಬೇಡುವ ಹೈ ಎಂಡ್‌ ಮೊಬೈಲ್ ಗೇಮ್‌ಗಳು ಹೆಚ್ಚು ಡಿಮ್ಯಾಂಡ್‌ ಪಡೆದಿವೆ. ಈ ನಿಟ್ಟಿನಲ್ಲಿ ಮಾರುಕಟ್ಟೆಗೆ ಹಲವು ಹೊಸ ಮಾದರಿಯ ಗೇಮಿಂಗ್‌ ಫೋನ್‌ಗಳು ಎಂಟ್ರಿ ನೀಡುತ್ತ ಸಾಗಿವೆ. ಅದಾಗ್ಯೂ, ಗೇಮಿಂಗ್‌ ಪ್ರಿಯರಿಗೆ ವೇಗದ ಪ್ರೊಸೆಸರ್‌ ಫೋನ್‌ಗಳು ಹೆಚ್ಚು ಆಕರ್ಷಕ ಎನಿಸುತ್ತವೆ.

ಹೌದು, ಅಧಿಕ ಡೇಟಾದ ಮೊಬೈಲ್‌ ಗೇಮ್‌ ಆಡ ಬಯಸುವ ಬಳಕೆದಾರರಿಗೆ ವೇಗದ ಪ್ರೊಸೆಸರ್‌ ಇರುವ ಮೊಬೈಲ್‌ಗಳು ಪೂರಕ ಎನಿಸಿವೆ. ಇತ್ತೀಚಿನ ಕೆಲವು ಮೊಬೈಲ್‌ಗಳು ಗೇಮಿಂಗ್‌ ಸೂಕ್ತ ಸೌಲಭ್ಯ ಪಡೆದಿವೆ. ಹಾಗಾದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಗೇಮಿಂಗ್‌ಗೆ ಪೂರಕ ಎನಿಸಿರುವ ಕೆಲವು ಅತ್ಯುತ್ತಮ ಮೊಬೈಲ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ತಡೆರಹಿತ ಮೊಬೈಲ್‌ ಗೇಮ್‌ ಆಡಬೇಕೆ?..ಹಾಗಿದ್ರೆ, ಈ ಫೋನ್‌ಗಳು ಅತ್ಯುತ್ತಮ!

ನುಬಿಯಾ ರೆಡ್‌ ಮ್ಯಾಜಿಕ್‌ 9 ಪ್ರೊ

ರೆಡ್‌ ಮ್ಯಾಜಿಕ್‌ 9 ಪ್ರೊ ಮೊಬೈಲ್‌ 6.8 ಇಂಚಿನ ಓಎಲ್‌ಇಡಿ BOE Q9+ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಈ ಡಿಸ್‌ಪ್ಲೇಯು, 120Hz ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಅಲ್ಲದೇ ಈ ಫೋನ್‌ ಸ್ನಾಪ್‌ಡ್ರಾಗನ್ 8 ಜೆನ್‌ 3 SoC ಪ್ರೊಸೆಸರ್‌ ಸಾಮರ್ಥ್ಯ ಕೂಡಾ ಪಡೆದಿದೆ. ಹಾಗೆಯೇ ಈ ಫೋನ್‌ 8GB + 256GB, 12GB + 256GB ಹಾಗೂ 12GB + 512GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಕೂಡಾ ಪಡೆದಿದೆ.

ಈ ವೇರಿಯಂಟ್‌ ಕೂಡಾ 50 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಪಡೆದಿದ್ದು, ಹಾಗೆಯೇ 16 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಪಡೆದಿದೆ. ಇದು 6,500mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದ್ದು, ಇದಕ್ಕೆ ಪೂರಕವಾಗಿ 80 ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಅನ್ನು ಸಹ ಒಳಗೊಂಡಿದೆ.

ತಡೆರಹಿತ ಮೊಬೈಲ್‌ ಗೇಮ್‌ ಆಡಬೇಕೆ?..ಹಾಗಿದ್ರೆ, ಈ ಫೋನ್‌ಗಳು ಅತ್ಯುತ್ತಮ!

ಒನ್‌ಪ್ಲಸ್‌ 12

ಒನ್‌ಪ್ಲಸ್‌ 12 ಫೋನ್‌ 6.82 ಇಂಚಿನ ProXDR ಮಾದರಿಯ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಈ ಡಿಸ್‌ಪ್ಲೇ 1440 x 3168 ಪಿಕ್ಸೆಲ್‌ ಸ್ಕ್ರೀನ್‌ ಸೂಪರ್ ಕ್ರಿಸ್ಪ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 8 ಜೆನ್‌ 3 SoC ಪ್ರೊಸೆಸರ್‌ ಪವರ್‌ ಪವರ್‌ ಅನ್ನು ಪಡೆದಿದ್ದು, CPU, 3.2GHz ನಲ್ಲಿ ಪ್ರೈಮ್ ಕೋರ್ ಅನ್ನು ಒಳಗೊಂಡಿದೆ. ಇನ್ನು ಮೊಬೈಲ್‌ ಆಂಡ್ರಾಯ್ಡ್‌ 14 ಓಎಸ್‌ ನಲ್ಲಿ ಕೆಲಸ ನಿರ್ವಹಿಸಲಿದೆ.

ಈ ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸಲ್‌ನ ಸೋನಿ LYT 808 ಸೆನ್ಸಾರ್‌ ಪಡೆದಿದೆ. ಜೊತೆಗೆ 5400mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 100W ಸೂಪರ್‌ವೂಕ್‌ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ

ಸ್ಯಾಮ್‌ಸಂಗ್‌ನ ಈ ನೂತನ ಫೋನ್‌ 6.8 ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಪಡೆದಿದ್ದು, ಇನ್ನು ಡಿಸ್‌ಪ್ಲೇ 3120 x 1440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಫೋನ್‌ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಪಡೆದಿದೆ. ಇದರ ಜೊತೆಗೆ ಇದರ ಪ್ರಾಥಮಿಕ ಕ್ಯಾಮೆರಾವು 200 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ.

ಆಸುಸ್‌ ROG ಫೋನ್ 8 ಪ್ರೊ

ಆಸುಸ್‌ ROG ಫೋನ್ 8 ಪ್ರೊ ಫೋನ್‌ LPTO ತಂತ್ರಜ್ಞಾನದೊಂದಿಗೆ 6.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್ ನಲ್ಲಿ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ ಈ ಫೋನ್‌ 5,500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದೆ.

Best Mobiles in India

English summary
Few best Gaming Mobiles in India 2024. gaming mobiles list here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+