ಕೀ ಪ್ಯಾಡ್ ಮೊಬೈಲ್ ಖರೀದಿಸಬೇಕೆ?..ಹಾಗಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
ಸದ್ಯ ಸ್ಮಾರ್ಟ್‌ಫೊನ್ ಜಮಾನ ಜೋರಾಗಿದ್ದು, ಸಾಕಷ್ಟು ಅಪ್‌ಡೇಟ್ ಆಗಿರುವ ಫೋನ್‌ಗಳು ಮಾರುಕಟ್ಟೆಯಲ್ಲಿವೆ. ಆದರೆ ಸ್ಮಾರ್ಟ್‌ಫೋನ್ ಬರುವುದಕ್ಕೂ ಮುಂಚೆ ಕೀ ಪ್ಯಾಡ್ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದಂತೂ ಸುಳ್ಳಲ್ಲ ಅಲ್ಲವೇ?. ಹಾಗಂತ ಇತ್ತೀಚಿಗೆ ಕೀ ಪ್ಯಾಡ್ ಸೈಡ್‌ಲೈನ್‌ಗೆ ಸರಿದಿವೆ ಎನ್ನವಂತಿಲ್ಲ. ಏಕೆಂದರೆ ಇನ್ನು ಬಹುತೇಕರು ಕೀ ಪ್ಯಾಡ್ ಇಷ್ಟಪಡುತ್ತಾರೆ.!
ಹೌದು, ಮೊಬೈಲ್ ಮಾರುಕಟ್ಟೆಯಲ್ಲಿ ಕೀ ಪ್ಯಾಡ್ ಮೊಬೈಲ್‌ಗಳಿ ಇಂದಿಗೂ ಆಕರ್ಷಕ ಸ್ಥಾನ ಉಳಿಸಿಕೊಂಡಿವೆ. ಇನ್ನು ಸಾಮಾನ್ಯವಾಗಿ ಕೀ ಪ್ಯಾಡ್ ಫೋನ್‌ಗಳ ಗಟ್ಟಿ ಮುಟ್ಟಾದ ರಚನೆ ಹೊಂದಿರುತ್ತವೆ. ಅಲ್ಲದೇ ಇವುಗಳ ಬಾಳಿಕೆ ಸಹ ದೀರ್ಘಾವಧಿ ಆಗಿರುತ್ತದೆ. ಕೆಲವು ಕೀ ಪ್ಯಾಡ್ ಫೋನ್‌ಗಳು ವಾಟ್ಸಾಪ್ ಸೇರಿದಂತೆ ಜನಪ್ರಿಯ ಆಪ್ಸ್ ಸಪೋರ್ಟ್ ಸಹ ಪಡೆದಿವೆ.

ಇನ್ನು ಕೀ ಪ್ಯಾಡ್ ಫೋನ್‌ಗಳ ಪ್ರೈಸ್ ಸಹ ಗ್ರಾಹಕ ಸ್ನೇಹಿ ಆಗಿದ್ದು, ಭಿನ್ನ ಫೀಚರ್ಸ್‌ಗಳ ಆಯ್ಕೆಯಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ. ಮುಖ್ಯವಾಗಿ ನೋಕಿಯಾ, ಮೊಟೊ, ಸ್ಯಾಮ್‌ಸಂಗ್ ಸಂಸ್ಥೆಗಳ ಫೋನ್‌ಗಳು ಹೆಚ್ಚಿನ ಆಕರ್ಷಕ ಉಳಿಸಿಕೊಂಡಿವೆ. ಹಾಗಾದರೇ ಐದು ಅತ್ಯುತ್ತಮ ಕೀ ಪ್ಯಾಡ್ ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.
ನೋಕಿಯಾ ಫ್ಲಿಪ್ 4G : ನೋಕಿಯಾ ಫ್ಲಿಪ್ 4G (Nokia 2660 Flip 4G) ಮೊಬೈಲ್ ಕಳೆದ ವರ್ಷ ಆಗಸ್ಟ್‌ನಲ್ಲಿ ಲಾಂಚ್ ಆದಾಗ, ಭಾರೀ ಗಮನ ಸೆಳೆದಿತ್ತು. ಅದಕ್ಕೆ ಮುಖ್ಯವಾದ ಕಾರಣ ವೆಂದರ ಇದು ಕ್ಲಾಸಿಕ್ ನೋಕಿಯಾ ಫ್ಲಿಪ್ ಫೋನ್ ಆಗಿದೆ. ಅಲ್ಲದೇ ಇದು ಈಗ 4G ಯೊಂದಿಗೆ ನವೀಕರಿಸಲಾಗಿದೆ. ರಿಯರ್ ಸಿಂಗಲ್ ಕ್ಯಾಮೆರಾ, ಆಂಡ್ರಾಯ್ಡ್ ಓಎಸ್ ಸಪೋರ್ಟ್ ಈ ಫೋನ್ ಪಡೆದಿದೆ.

ನೋಕಿಯಾ 110 4G : ನೋಕಿಯಾ 110 4G ಕೀ ಪ್ಯಾಡ್ ಫೋನ್ ಅಗ್ಗದ ಬೆಲೆ ಪಡೆದಿದೆ. ಇದು 1.8 ಇಂಚಿನ ಡಿಸ್‌ಪ್ಲೇ ಪಡೆದಿದ್ದು, Unisoc T107 ಪ್ರೊಸೆಸರ್ ಪವರ್ ಪಡೆದಿದೆ. ಹಿಂಬದಿಯಲ್ಲಿ ಸಿಂಗಲ್ ಕ್ಯಾಮೆರಾ ರಚನೆ ಪಡೆದಿದ್ದು, ಜೊತೆಗೆ 1020 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಪಡೆದಿದೆ. ಸ್ಟೈಲಿಶ್ ಲುಕ್ ಹೊಂದಿರುವ ಈ ಫೋನ್ 4G ಕನೆಕ್ಟಿವಿಟಿ ಸೌಲಭ್ಯ ಒಳಗೊಂಡಿದೆ.
ನೋಕಿಯಾ 8210 4G : ನೋಕಿಯಾ 8210 4G (Nokia 8210 4G) ಸಹ ಅತ್ಯುತ್ತಮ ಕೀ ಪ್ಯಾಡ್ ಫೋನ್ ಆಗಿದೆ. ಇದು ಡ್ಯುಯಲ್ ಡಿಐಎಂ ಸಾಮರ್ಥ್ಯ ಹೊಂದಿದ್ದು, ಹೆಚ್ಚುವರಿಯಾಗಿ, ಕ್ಯಾಮೆರಾವನ್ನು ಸಹ ಲಭ್ಯ. ಇದರ ಬ್ಯಾಟರಿ ಬ್ಯಾಕಪ್ ಕೂಡ ಸಾಕಷ್ಟು ಉತ್ತಮವಾಗಿದೆ. ಒಟ್ಟಾರೆ ಯೋಗ್ಯವಾದ 4G ಕೀಪ್ಯಾಡ್ ಮೊಬೈಲ್ ಫೋನ್. ಆಂಡ್ರಾಯ್ಡ್ ಓಎಸ್ ಸಪೋರ್ಟ್ ಇಲ್ಲ.
ನೋಕಿಯಾ 215 4G : ನೋಕಿಯಾ 215 4G ಫೋನ್ ನಯವಾದ, ಹಗುರವಾದ ಮತ್ತು ಅಲ್ಟ್ರಾ ಬಾಳಿಕೆ ಸೌಲಭ್ಯ ಪಡೆದಿದೆ. ಇದು 4G ಸಂಪರ್ಕ ಬೆಂಬಲ ಪಡೆದಿದೆ. ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಸಹ ಪಡೆದಿದೆ. ತನ್ನ ವರ್ಗದಲ್ಲೇ ಉತ್ತಮ ಡಿಸ್‌ಪ್ಲೇ ಎನ್ನಬಹುದು. ಸಾಧಾರಣ ಕ್ಯಾಮೆರಾ ಕ್ವಾಲಿಟಿ ಪಡೆದಿದೆ.

ಸ್ಯಾಮ್‌ಸಂಗ್ ಗುರು ಮ್ಯೂಸಿಕ್ 2 : ಈ ಕೀ ಪ್ಯಾಡ್ ಫೋನ್ (Samsung Guru Music 2) ಇದು 2.0 ಇಂಚಿನ ಡಿಸ್‌ಪ್ಲೇ ಪಡೆದಿದ್ದು, ಸಿಂಗಲ್ ಕೋರ್ ಪ್ರೊಸೆಸರ್ ಪವರ್ ಪಡೆದಿದೆ. ಹಿಂಬದಿಯಲ್ಲಿ ಸಿಂಗಲ್ ಕ್ಯಾಮೆರಾ ರಚನೆ ಪಡೆದಿದ್ದು, ಜೊತೆಗೆ 800 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಪಡೆದಿದೆ. ಸ್ಟೈಲಿಶ್ ಲುಕ್ ಹೊಂದಿರುವ ಈ ಫೋನ್ 4G ಕನೆಕ್ಟಿವಿಟಿ ಸೌಲಭ್ಯ ಒಳಗೊಂಡಿದೆ.


Click it and Unblock the Notifications








