Home
ಮೊಬೈಲ್

ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ Motorola ಸ್ಟೈಲಿಶ್‌ ಫೋನ್‌ಗಳು ಇವೇ ನೋಡಿ!

ಮೊಟೊರೊಲಾ ಮೊಬೈಲ್‌ (Motorola) ಸಂಸ್ಥೆಯು ಭಿನ್ನ ಪ್ರೈಸ್‌ ರೇಂಜ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ತನ್ನದೇ ಗ್ರಾಹಕ ವರ್ಗವನ್ನು ಹೊಂದಿದೆ. ಮೊಟೊರೊಲಾ ಕಂಪನಿಯ ಬಹುತೇಕ ಮೊಬೈಲ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಆ ಸಾಲಿನಲ್ಲಿ ಮೊಟೊರೊಲಾ ಎಡ್ಜ್ ಸರಣಿಯ ಮೊಬೈಲ್‌ಗಳು ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ಮೊಟೊ ಎಡ್ಜ್ ಸರಣಿಯ ಫೋನ್‌ಗಳು ಸ್ಲಿಮ್‌ ರಚನೆ, ಕರ್ವ್ಡ್‌ ಮಾದರಿಯ ಡಿಸ್‌ಪ್ಲೇ ಆಯ್ಕೆಗಳಿಂದ ಹೈಲೈಟ್‌ ಆಗಿವೆ.

ಹೌದು, ಮೊಟೊರೊಲಾ ಮೊಬೈಲ್‌ ಕಂಪನಿಯ ಮೊಟೊರೊಲಾ ಎಡ್ಜ್ ಸರಣಿಯಲ್ಲಿ ಇತ್ತೀಚಿಗೆ ಕೆಲವು ಸ್ಮಾರ್ಟ್‌ಫೊನ್‌ಗಳು ಭಾರೀ ಸದ್ದು ಮಾಡಿವೆ. ಅವುಗಳ ಪೈಕಿ ಇತ್ತೀಚಿನ ಮೊಟೊರೊಲಾ ಎಡ್ಜ್ 50, ಮೊಟೊರೊಲಾ ಎಡ್ಜ್ 50 ಅಲ್ಟ್ರಾ, ಮೊಟೊರೊಲಾ ಎಡ್ಜ್‌ 50 ಫ್ಯೂಶನ್‌ ಸ್ಮಾರ್ಟ್‌ಫೋನ್‌ಗಳು ಕೂಡಾ ಸೇರಿವೆ. ಇದಲ್ಲದೇ ಮೊಟೊರೊಲಾ ರೇಜರ್‌ ಸರಣಿಯ ಮೊಬೈಲ್‌ಗಳು ಹೈ ಎಂಡ್‌ ಮಾದರಿಯಲ್ಲಿ ಆಕರ್ಷಕ ಫೀಚರ್ಸ್‌ಗಳೊಂದಿಗೆ ಗ್ರಾಹಕರನ್ನು ಸೆಳೆದಿವೆ. ಹಾಗಾದರೇ ಸದ್ಯ ಜನಪ್ರಿಯತೆ ಪಡೆದಿರುವ ಮೊಟೊರೊಲಾ ಎಡ್ಜ್ ಸರಣಿಯ ಕೆಲವು ಬೆಸ್ಟ್‌ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ Motorola ಸ್ಟೈಲಿಶ್‌ ಫೋನ್‌ಗಳು ಇವೇ ನೋಡಿ!

ಮೊಟೊರೊಲಾ ಎಡ್ಜ್‌ 50

ಮೊಟೊರೊಲಾ ಎಡ್ಜ್‌ 50 ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇಯು 1200 x 2780 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಪೋರ್ಟ್‌ ಮಾಡಲಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 7 ಜೆನ್‌ 1 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲ ಇದೆ.

ಇನ್ನು ಈ ಫೋನ್‌ ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಆಗಿದೆ. ಅಲ್ಲದೇ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದಕ್ಕೆ ಪೂರಕವಾಗಿ 68 W ಫಾಸ್ಟ್‌ ಟರ್ಬೋ ಚಾರ್ಜಿಂಗ್‌ ಸೌಲಭ್ಯ ಪಡೆದಿದೆ.

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ ಮೊಬೈಲ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಪಡೆದಿದ್ದು, ಈ ಡಿಸ್‌ಪ್ಲೇಯು 1200 x 2780 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಬೆಂಬಲ ಇದೆ. ಇದಲ್ಲದೆ ಡಿಸ್‌ಪ್ಲೇ 144 ಟ್ರೂ ಕಲರ್‌ ಡಿಸ್‌ಪ್ಲೇ ಸೌಲಭ್ಯ ಪಡೆದಿದ್ದು, ಇದರೊಂದಿಗೆ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8s ಜೆನ್‌ 3 ಪ್ರೊಸೆಸರ್‌ ಸಪೋರ್ಟ್‌ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲ ಒಳಗೊಂಡಿದೆ.

ಹಾಗೆಯೇ ಈ ಫೋನ್‌ ಮೂರು ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಆಗಿದೆ. ಇದರೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 125W ಫಾಸ್ಟ್‌ ಟರ್ಬೋ ಚಾರ್ಜಿಂಗ್‌ ಸೌಲಭ್ಯ ಒಳಗೊಂಡಿದೆ.

ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌

ಮೊಟೊರೊಲಾ (Motorola) ಎಡ್ಜ್‌ 50 ಫ್ಯೂಜನ್‌ ಮೊಬೈಲ್‌ 6.7 ಇಂಚಿನ 3D ಕರ್ವ್ಡ್‌ pOLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದರ ಡಿಸ್‌ಪ್ಲೇಯು 2400 × 1080p ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಇನ್ನು ಈ ಫೋನ್‌ ಕ್ವಾಲ್ಕಮ್‌ ಸ್ನಾಪ್ಡ್ರಾಗನ್ 7s ಜೆನ್ 3 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಸಹ ಇದೆ.

ಇದರ ಜೊತೆಗೆ ಇದು ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಹಾಗೆಯೇ ಇದು 5,000 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದರ ಜೊತೆಗೆ 68W ಟರ್ಬೋ ಪವರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

Best Mobiles in India

English summary
Few Best Moto Edge Series Smartphones list 2024. check out all phones and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+