7000ರೂ. ಒಳಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಇವು!
ಸ್ಮಾರ್ಟ್‌ಫೋನ್ ಸಾಧನವು ಪ್ರಸ್ತುತ ಪ್ರತಿಯೊಬ್ಬರಿಗೂ ಅಗತ್ಯ ಎನಿಸಿದೆ. ಜನರ ಅನೇಕ ಆನ್‌ಲೈನ್ ಕೆಲಸಗಳು ಮೊಬೈಲ್ ಮೂಲಕವೇ ನಡೆಯುತ್ತವೆ. ಹೀಗಾಗಿ ಜನರು ಅತ್ಯುತ್ತಮ ಫೋನ್ ಖರೀದಿಗೆ ಮುಂದಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಗ್ಗದ ಬೆಲೆಯಲ್ಲಿಯೂ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಖರೀದಿಗೆ ಲಭ್ಯ ಇವೆ. ಅವುಗಳಲ್ಲಿ ಬಹುತೇಕ ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ, ಬಿಗ್ ಬ್ಯಾಟರಿ, ಉತ್ತಮ ಪ್ರೊಸೆಸರ್ ಸೌಲಭ್ಯ, ಸ್ಟೈಲಿಶ್ ಡಿಸೈನ್ ನಂತಹ ಫೀಚರ್ಸ್‌ಗಳನ್ನು ಪಡೆದು ಗ್ರಾಹಕರನ್ನು ಸೆಳೆದಿವೆ. ಮಾರುಕಟ್ಟೆಯಲ್ಲಿ ಸುಮಾರು 7000ರೂ. ಒಳಗಿನ ಫೋನ್‌ಗಳು ಬೇಡಿಕೆಯಲ್ಲಿ ಕಾಣಿಸಿಕೊಂಡಿವೆ.
ಹೌದು, ಅನೇಕ ಗ್ರಾಹಕರು ನೂತನ ಸ್ಮಾರ್ಟ್‌ಫೋನ್ ಖರೀದಿಸುವಾಗ ಫೋನಿನ ಬೆಲೆಯ ಬಗ್ಗೆಯೂ ಗಮನ ನೀಡುತ್ತಾರೆ. ಬಹುತೇಕರು ಎಂಟ್ರಿ ಲೆವೆಲ್ ಮೊಬೈಲ್‌ಗಳನ್ನು ಖರೀದಿಸಲು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಮೊಬೈಲ್ ಸಂಸ್ಥೆಗಳು ಕೂಡಾ ಅತ್ಯುತ್ತಮ ಎಂಟ್ರಿ ಲೆವೆಲ್ ಫೊನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಹಾಗಾದರೇ ಸುಮಾರು 7000ರೂ. ಗಳ ಆಸುಪಾಸಿನಲ್ಲಿ ಲಭ್ಯ ಇರುವ ಕೆಲವು ಬೆಸ್ಟ್ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಪಾಪ್ 8 ಫೋನ್
ಟೆಕ್ನೋ ಪಾಪ್ 8 ಫೋನ್ 6.56 ಇಂಚಿನ HD+ ಡಾಟ್ ಇನ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1,612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಇದು ಯುನಿಸೋಕ್ T606 SoC ಪ್ರೊಸೆಸರ್ ಪವರ್ ಪಡೆದಿದ್ದು, ಆಂಡ್ರಾಯ್ಡ್ 13 Go ಆವೃತ್ತಿ ಆಧಾರಿತ HiOS 13 ನಲ್ಲಿ ಕೆಲಸ ನಿರ್ವಹಿಸಲಿದೆ.
ಹಾಗೆಯೇ ಈ ಫೋನ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ವ್ಯವಸ್ಥೆ ಅನ್ನು ಹೊಂದಿದೆ. ಇದರ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದ್ದು, ಇದು 10W ವೈರ್ಡ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
ಮೊಟೊ G04s ಫೋನ್
ಇತ್ತೀಚಿಗೆ ಲಾಂಚ್ ಆಗಿರುವ ನೂತನ ಮೊಟೊ G04s ಫೋನ್ 6.6 ಇಂಚಿನ IPS LCD ಇನ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1,612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಈ ಫೋನ್ ಯುನಿಸೋಕ್ T606 SoC ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಪಡೆದಿದ್ದು, ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕೆಲಸ ನಿರ್ವಹಿಸಲಿದೆ.
ಅಲ್ಲದೇ ಈ ಮೊಬೈಲ್ ಹಿಂಭಾಗದಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ವ್ಯವಸ್ಥೆ ಅನ್ನು ಪಡೆದಿದ್ದು, 50 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಇದೆ. ಇದರ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದ್ದು, ಇದು 15W ಚಾರ್ಜಿಂಗ್ ಸೌಲಭ್ಯವನ್ನು ಇದು ಪಡೆದುಕೊಂಡಿದೆ.
ರೆಡ್ಮಿ A3 ಫೋನ್
ರೆಡ್ಮಿ A3 ಮೊಬೈಲ್ 6.71 ಇಂಚಿನ ಹೆಚ್‌ಡಿ ಪ್ಲಸ್ ಐಪಿಎಸ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 1650 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G36 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 13 ಗೋ ಓಎಸ್ ಸಪೋರ್ಟ್ ಸಹ ಪಡೆದಿದೆ.
ಇದರ ಜೊತೆಗೆ ಈ ಫೋನ್ ಹಿಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಅಲ್ಲದೇ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಅನ್ನು ಸಪೋರ್ಟ್ ಒಳಗೊಂಡಿದೆ.
ಪೊಕೊ C65 ಮೊಬೈಲ್
ಪೊಕೊ C65 ಮೊಬೈಲ್ 6.74 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 1650 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದು ಮೀಡಿಯಾಟೆಕ್ ಹಿಲಿಯೋ G85 ಪ್ರೊಸೆಸರ್ ಅನ್ನು ಹೊಂದಿದೆ. ಹಾಗೆಯೇ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಇದರ ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ, 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಹೊಂದಿದೆ.


Click it and Unblock the Notifications




