ಅತೀ ಕಡಿಮೆ ಬೆಲೆಗೆ ಹೊಸ ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
ಪ್ರಸಕ್ತ ದಿನಗಳಲ್ಲಿ ಸ್ಮಾರ್ಟ್‌ಫೋನ್ ಅಗತ್ಯ ಡಿವೈಸ್ ಆಗಿದ್ದು, ಅನೇಕ ಆನ್‌ಲೈನ್ ಕೆಲಸಗಳು ಮೊಬೈಲ್ ಮೂಲಕವೇ ಮಾಡುತ್ತಾರೆ. ಅಂದಹಾಗೆ ಮೊಬೈಲ್ ಖರೀದಿಸುವ ಗ್ರಾಹಕರು ಅವರ ಅಗತ್ಯತೆಗಳಿಗೆ ಪೂರಕವಾಗಿ, ಮೊಬೈಲ್ ಖರೀದಿ ಮಾಡಲು ಇಷ್ಟಪಡುತ್ತಾರೆ. ಕೆಲವು ಗ್ರಾಹಕರು ಅಗ್ಗದ ಬೆಲೆಯಲ್ಲಿ ಬೆಸ್ಟ್/ ಹೆಚ್ಚಿನ ಫೀಚರ್ಸ್ ಇರುವ ಮೊಬೈಲ್‌ಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ.
ಹೌದು, ಮೊಬೈಲ್ ಮಾರುಕಟ್ಟೆಯಲ್ಲಿ ಭಿನ್ನ ಪ್ರೈಸ್‌ರೇಂಜ್ ಹಲವು ಸ್ಮಾರ್ಟ್‌ಫೋನ್‌ಗಳ ಆಯ್ಕೆ ಇದೆ. ಸುಮಾರು 7,000ರೂ. ಗಳ ಬೆಲೆಯಲ್ಲಿಯೂ ಕೆಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳು ಖರೀದಿಗೆ ಲಭ್ಯ ಇವೆ. ಈ ಮೊಬೈಲ್‌ಗಳ ಬೆಲೆ ಕಡಿಮೆ ಇದ್ದರೂ, ಆಕರ್ಷಕ ಕ್ಯಾಮೆರಾ, ಸ್ಟೈಲಿಶ್ ಲುಕ್ ಡಿಸೈನ್, ಬಿಗ್ ಬ್ಯಾಟರಿಗಳಂತಹ ಪೂರಕ ಫೀಚರ್ಸ್ ಒಳಗೊಂಡಿವೆ. ಹಾಗಾದರೇ ಸುಮಾರು 7,000ರೂ.ಗಳ ಬೆಲೆಯಲ್ಲಿ ಲಭ್ಯ ಇರುವ ಬೆಸ್ಟ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ A3 ಫೋನ್
ಇತ್ತೀಚಿನ ರೆಡ್ಮಿ A3 ಫೋನ್ 6.71 ಇಂಚಿನ ಹೆಚ್‌ಡಿ ಪ್ಲಸ್ ಐಪಿಎಸ್ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಈ ಡಿಸ್‌ಪ್ಲೇ 1650 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಈ ಫೋನ್ ಮೀಡಿಯಾ ಟೆಕ್ ಹಿಲಿಯೊ G36 SoC ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 13 (ಗೋ ಆವೃತ್ತಿ) ಸಪೋರ್ಟ್ ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದರ ಜೊತೆಗೆ ಇದು 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಕೂಡಾ ಪಡೆದುಕೊಂಡಿದೆ.
ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಫೋನ್
ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಫೋನ್ 6.6 ಇಂಚಿನ ಐಪಿಎಸ್ LCD ಪ್ಯಾನಲ್ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೋ G36 SoC ಪ್ರೊಸೆಸರ್ ಪವರ್ ಅನ್ನು ಹೊಂದಿದೆ. ಅಲ್ಲದೇ 6,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಅನ್ನು ಪಡೆದಿದ್ದು, 18W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಸಪೋರ್ಟ್ ಮಾಡುತ್ತದೆ.
ಟೆಕ್ನೋ ಸ್ಪಾರ್ಕ್ ಗೋ (2024) ಫೋನ್
ಟೆಕ್ನೋ ಕಂಪನಿಯ ಈ ಮೊಬೈಲ್ ಫೋನ್ 6.56 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 720 x 1,612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಈ ಮೊಬೈಲ್ ಆಕ್ಟಾ ಕೋರ್ ಯುನಿಸೊಕ್ T606 SoC ಪ್ರೊಸೆಸರ್ ಪವರ್ ಅನ್ನು ಹೊಂದಿದ್ದು, 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 10W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲ ಇದೆ.
ಐಟೆಲ್ A70 ಫೋನ್
ಐಟೆಲ್ ಸಂಸ್ಥೆಯು ಈ ಮೊಬೈಲ್ 6.6 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 1,612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಇದು ಆಕ್ಟಾ-ಕೋರ್ Unisoc T603 ಚಿಪ್‌ಸೆಟ್ ಪಡೆದಿದ್ದು, ಇದರೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಪಡೆದುಕೊಂಡಿದೆ. ಅಂದಹಾಗೆ ಈ ಫೋನ್ ಕೂಡಾ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದೆ.
ಲಾವಾ O2 ಫೋನ್
ಲಾವಾ ಸಂಸ್ಥೆಯ ಈ ಹೊಸ ಫೋನ್ 6.5 ಇಂಚಿನ ಎಲ್‌ಸಿಡಿ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಡಿಸ್‌ಪ್ಲೇಯು 720 × 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ ಇದು ಯೂನಿಸೋಕ್ T616 ಪ್ರೊಸೆಸರ್ ನಲ್ಲಿ ಕೆಲಸ ನಿರ್ವಹಿಸಲಿದ್ದು, ಇದರೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಪಡೆದುಕೊಂಡಿದೆ. ಅಂದಹಾಗೆ ಇದು ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದೆ.


Click it and Unblock the Notifications








