Home
ಮೊಬೈಲ್

ಬಜೆಟ್‌ ಬೆಲೆಯಲ್ಲಿ ಲಭ್ಯವಿರುವ ಸ್ಟೈಲಿಶ್‌ ಟೆಕ್ನೋ ಫೋನ್‌ಗಳ ಲಿಸ್ಟ್‌ ಇಲ್ಲಿದೆ!

ಭಾರತದಲ್ಲಿ ಮೊಬೈಲ್‌ ಮಾರುಕಟ್ಟೆಯಲ್ಲಿ ಟೆಕ್ನೋ (Tecno) ಸಂಸ್ಥೆ ತನ್ನ ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗಮನ ಸೆಳೆದಿದೆ. ಟೆಕ್ನೋ ಸಂಸ್ಥೆಯು ಬಜೆಟ್‌ ದರದ, ಮೀಡ್‌ರೇಂಜ್‌ ಬೆಲೆಯ ಹಾಗೂ ಹೈ ಎಂಡ್‌ ಪ್ರೈಸ್‌ಟ್ಯಾಗ್‌ನ ಫೋನ್‌ಗಳ ಆಯ್ಕೆಯನ್ನು ಪಡೆದಿದೆ. ಅದಾಗ್ಯೂ, ಟೆಕ್ನೋ ಸಂಸ್ಥೆಯ ಕೆಲವು ಫೋನ್‌ಗಳು ಮಾರುಕಟ್ಟೆಯ ಆಕರ್ಷಣೆ ಗಳಿಸುವಲ್ಲಿ ಸಫಲ ಆಗಿವೆ. ಬಜೆಟ್‌ ದರದಲ್ಲಿ ಅಗತ್ಯ ಫೀಚರ್ಸ್‌ ಹಾಗೂ ಸ್ಟೈಲಿಶ್‌ ಲುಕ್‌ ಇರುವ ರಚನೆ ಖರೀದಿದಾರರನ್ನು ಸೆಳೆಯುವ ಜೊತೆಗೆ ತನ್ನ ವರ್ಗದಲ್ಲೇ ಇತರೆ ಬ್ರ್ಯಾಂಡ್‌ ಫೋನ್‌ಗಳಿಗೆ ಪೈಪೋಟಿ ನೀಡುವಂತೆ ಇವೆ.

ಹೌದು, ಟೆಕ್ನೋ ಮೊಬೈಲ್‌ ಕಂಪನಿಯು ಹಲವು ಫೋನ್‌ಗಳ ಆಯ್ಕೆ ಪಡೆದುಕೊಂಡಿದೆ. ಅವುಗಳಲ್ಲಿ ಇತ್ತೀಚಿನ ಟೆಕ್ನೋ ಪೋವಾ 6 ಪ್ರೊ 5G ಫೋನ್‌, ಟೆಕ್ನೋ ಸ್ಪಾರ್ಕ್‌ 20 ಸರಣಿ ಹಾಗೂ ಟೆಕ್ನೋ ಕ್ಯಾಮೆನ್ ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಗಮನ ಸೆಳೆದಿವೆ. ಈ ಫೋನ್‌ಗಳು ಬಜೆಟ್‌ ಪ್ರೈಸ್‌ಟ್ಯಾಗ್‌ ಹೊಂದಿರುವ ಜೊತೆಗೆ ಬಿಗ್ ಡಿಸ್‌ಪ್ಲೇ, ಬಿಗ್ ಬ್ಯಾಟರಿ, ವೇಗದ ಪ್ರೊಸೆಸರ್‌ ಮತ್ತು ಇತರೆ ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಹಾಗಾದರೆ ಸದ್ಯ ಗಮನ ಸೆಳೆದ ಕೆಲವು ಟೆಕ್ನೋ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬಜೆಟ್‌ ಬೆಲೆಯಲ್ಲಿ ಲಭ್ಯವಿರುವ ಸ್ಟೈಲಿಶ್‌ ಟೆಕ್ನೋ ಫೋನ್‌ಗಳ ಲಿಸ್ಟ್‌ ಇಲ್ಲಿದೆ!

ಟೆಕ್ನೋ ಸ್ಪಾರ್ಕ್ 20C ಮೊಬೈಲ್‌

ಟೆಕ್ನೋ ಸ್ಪಾರ್ಕ್ 20C ಮೊಬೈಲ್‌ 6.6 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇನ್ನು ಡಿಸ್‌ಪ್ಲೇಯು 720 × 1612 ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ ಆಯ್ಕೆ ಪಡೆದಿದೆ. ಅಲ್ಲದೇ ಇದು ಮೀಡಿಯಾ ಟೆಕ್‌ ಹಿಲಿಯೋ P35 SoC ಪ್ರೊಸೆಸರ್‌ ಬಲದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್ ಜೊತೆಗೆ ಕಾರ್ಯ ನಿರ್ವಹಿಸಲಿದೆ.

ಇದರೊಂದಿಗೆ ಈ ಫೋನ್‌ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಹಾಗೆಯೇ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದು 18W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ.

ಟೆಕ್ನೋ ಪೋವಾ 6 ಪ್ರೊ 5G ಮೊಬೈಲ್‌

ಟೆಕ್ನೋ ಪೋವಾ 6 ಪ್ರೊ 5G ಸ್ಮಾರ್ಟ್‌ಫೋನ್‌ 6.78 ಇಂಚಿನ FHD+ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1,300 ನಿಟ್ಸ್‌ ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಅಲ್ಲದ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್‌ ಬಲದೊಂದಿಗೆ ಕೆಲಸ ನಿರ್ವಹಿಸಲಿದ್ದು, 12GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಆಯ್ಕೆ ಪಡೆದಿದೆ.

ಇನ್ನು ಈ ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್‌ ಸೆನ್ಸಾರ್‌ದಲ್ಲಿ ಇದೆ. ಇದಲ್ಲದೇ 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದು 70W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.

ಟೆಕ್ನೋ ಸ್ಪಾರ್ಕ್‌ 20 ಪ್ರೊ ಪ್ಲಸ್‌ ಮೊಬೈಲ್‌

ಟೆಕ್ನೋದ ಈ ಸ್ಮಾರ್ಟ್‌ಫೋನ್‌ 6.82 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 1080 x 2460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದು ಮೀಡಿಯಾ ಟೆಕ್‌ ಹಿಲಿಯೋ G99SoC ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಇದು ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಜೊತೆಗೆ ಕಾರ್ಯ ನಿರ್ವಹಿಸಲಿದೆ.

ಇನ್ನು ಈ ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್‌ ಸೆನ್ಸಾರ್‌ದಲ್ಲಿ ಇದೆ. ಇದಲ್ಲದೇ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದು 18W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ.

ಟೆಕ್ನೋ ಪೋವಾ 5 ಪ್ರೊ ಮೊಬೈಲ್‌

ಟೆಕ್ನೋ ಪೋವಾ 5 ಪ್ರೊ ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅಲ್ಲದೆ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್‌ ಪವರ್ ಅನ್ನು ಹೊಂದಿದೆ. ಇದರ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದು 68W ಫಾಸ್ಟ್‌ ಚಾರ್ಜಿಂಗ್‌ ಅನ್ನು ಸಪೋರ್ಟ್‌ ಪಡೆದಿದೆ.

Best Mobiles in India

English summary
Few Best Tecno Phones under Rs 20000 in India 2024. check phones list, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+