ಹೊಸ ಶಿಯೋಮಿ ಫೋನ್ ಖರೀದಿಸಬೇಕೆ? ಹಾಗಿದ್ರೆ, ಇಲ್ಲಿ ನೀವು ಗಮನಿಸಿ!
ಭಾರತೀಯ ಟೆಕ್ ಮಾರುಕಟ್ಟೆಯಲ್ಲಿ ಶಿಯೋಮಿ (xiaomi) ಮೊಬೈಲ್ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಆಕರ್ಷಿಸಿವೆ. ಸಂಸ್ಥೆಯು ಭಿನ್ನ ಶ್ರೇಣಿಯಲ್ಲಿ ಹಲವು ಹೈ ಎಂಡ್ ಮಾದರಿಯ ಮೊಬೈಲ್ ಮಾಡೆಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಶಿಯೋಮಿ 14 ಸರಣಿಯ ಇತ್ತೀಚಿನ ಮೊಬೈಲ್‌ಗಳು ಆಕರ್ಷಕ ಫೀಚರ್ಸ್ ಪಡೆದಿದ್ದು, ಸಖತ್ ಡಿಮ್ಯಾಂಡ್‌ನಲ್ಲಿ ಗುರುತಿಸಿಕೊಂಡಿವೆ. ಈ ಸರಣಿಯ ಮೊಬೈಲ್‌ಗಳು ಅತ್ಯುತ್ತಮ ಕ್ಯಾಮೆರಾ, ವೇಗದ ಪ್ರೊಸೆಸರ್ ಆಯ್ಕೆಗಳಿಂದ ಗ್ರಾಹಕರ ಗಮನ ಸೆಳೆದಿವೆ. ಇನ್ನು ಶಿಯೋಮಿ 14 ಸರಣಿಯ ಮೊಬೈಲ್‌ಗಳ ಬೆಲೆಗಳು ಮೀಡ್‌ರೇಂಜ್‌ನಿಂದ ಆರಂಭ ಇದೆ.
ಹೌದು, ಶಿಯೋಮಿ (xiaomi) ಮೊಬೈಲ್ ಸಂಸ್ಥೆಯ ಇತ್ತೀಚಿನ ಶಿಯೋಮಿ 14 CIVI ಹಾಗೂ ಶಿಯೋಮಿ 14 ಫೋನ್ ಮೊಬೈಲ್‌ಗಳು ಆಕರ್ಷಕ ಫೀಚರ್ಸ್‌ನಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಅಲ್ಲದೇ ಸಂಸ್ಥೆಯ ಹಳೆಯ Mi 11X ಪ್ರೊ 5G ಫೋನ್ ಕೂಡಾ ಖರೀದಿಗೆ ಲಭ್ಯ ಇದೆ. ಹಾಗಾದರೇ ಶಿಯೋಮಿ ಸಂಸ್ಥೆಯು ಕೆಲವು ಬೆಸ್ಟ್ ಹೈ ಎಂಡ್ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಶಿಯೋಮಿ 14 CIVI ಮೊಬೈಲ್
ಶಿಯೋಮಿ 14 ಸಿವಿ ಸ್ಮಾರ್ಟ್‌ಫೋನ್ 6.55 ಇಂಚಿನ 1.5K ಕರ್ವ್ಡ್ AMOLED ಡಿಸ್‌ಪ್ಲೇ ಸೌಲಭ್ಯ ಪಡೆದಿದ್ದು, ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಹಾಗೂ 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಸೌಲಭ್ಯ ಇದೆ. ಹಾಗೆಯೇ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8s ಜೆನ್ 3 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್‌ನೊಂದಿಗೆ ಕಾರ್ಯ ನಿರ್ವಹಿಸಲಿದೆ.
ಹಾಗೆಯೇ ಈ ಫೋನ್ 8 GB + 256 GB ಮತ್ತು 12 GB + 512 GB ಸ್ಟೋರೇಜ್ ಸಾಮರ್ಥ್ಯದ ಎರಡು ವೇರಿಯಂಟ್ ಆಯ್ಕೆಯನ್ನು ಒಳಗೊಂಡಿದೆ. ಇದರೊಂದಿಗೆ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿದೆ. ಇದರ ಜೊತೆಗೆ 4,700 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 67W ವೈರ್ಡ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ.
ಶಿಯೋಮಿ 14 ಮೊಬೈಲ್
ಶಿಯೋಮಿ 14 (Xiaomi 14) ಸ್ಮಾರ್ಟ್‌ಫೋನ್ 6.3 ಇಂಚಿನ ಸೆಂಟರ್ ಪಂಚ್-ಹೋಲ್ ಫ್ಲಾಟ್ OLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದರ ಡಿಸ್‌ಪ್ಲೇಯು 2670 x 1200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 SoC ಪ್ರೊಸೆಸರ್ ವೇಗವನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 14 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ.
ಇದರೊಂದಿಗೆ ಈ ಮೊಬೈಲ್ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿ ಇದೆ. ಹಾಗೆಯೇ 4,610mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 90W ವೈರ್ಡ್, 50W ವಾಯರ್‌ಲೆಸ್ ಮತ್ತು 10W ರಿವರ್ಸ್ ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
ಶಿಯೋಮಿ 14 ಅಲ್ಟ್ರಾ ಮೊಬೈಲ್
ಶಿಯೋಮಿ 14 ಅಲ್ಟ್ರಾ ಮೊಬೈಲ್ 6.73 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು LTPO AMOLED ಮೈಕ್ರೋ-ಕರ್ವ್ ಡಿಸ್‌ಪ್ಲೇ ಹೊಂದಿದೆ. ಇನ್ನು ಡಿಸ್‌ಪ್ಲೇಯು 3,200 x 1,440 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಈ ಫೋನ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 ಜೆನ್ 3 SoC ಪ್ರೊಸೆಸರ್ ಅನ್ನು ಪವರ್ ಪಡೆದಿದೆ. ಹಾಗೆಯೇ ಇದು ಆಂಡ್ರಾಯ್ಡ್ 14-ಆಧಾರಿತ ಆಗಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದು 90W ವೈರ್ಡ್, 80W ವಾಯರ್‌ಲೆಸ್ ಮತ್ತು 10W ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.


Click it and Unblock the Notifications








