Home
ಮೊಬೈಲ್

ನಿಮ್ಮ ಸ್ಯಾಮ್‌ಸಂಗ್‌ ಫೋನಿನಲ್ಲಿ ಈ ರಹಸ್ಯ ಫೀಚರ್ಸ್‌ ಇವೆಯಾ?..ಒಮ್ಮೆ ಚೆಕ್ ಮಾಡಿ!

ಮೊಬೈಲ್‌ ಮಾರುಕಟ್ಟೆಯಲ್ಲಿ ಹಲವು ಬ್ರ್ಯಾಂಡ್‌ಗಳು ಇದ್ದರೂ, ಸ್ಯಾಮ್‌ಸಂಗ್‌ ಸಂಸ್ಥೆ ಜನಪ್ರಿಯತೆ ಸ್ವಲ್ಪ ಹೆಚ್ಚಿದೆ. ಸ್ಯಾಮ್‌ಸಂಗ್‌ ತನ್ನ ಗ್ಯಾಲಕ್ಸಿ ಸರಣಿಯಲ್ಲಿ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಗಮನ ಸೆಳೆದಿದೆ. ಇನ್ನು ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಕೆಲವು ರಹಸ್ಯ ಶಾರ್ಟ್‌ಕಟ್‌ ಆಯ್ಕೆಗಳ ಬಗ್ಗೆ ಬಹುತೇಕ ಬಳಕೆದಾರರಿಗೆ ತಿಳಿದಿಲ್ಲ.!

ಹೌದು, ಸ್ಯಾಮ್‌ಸಂಗ್‌ ಸಂಸ್ಥೆಯ ಗ್ಯಾಲಕ್ಸಿ ಫೋನ್‌ಗಳು ಆಕರ್ಷಕ ಫೀಚರ್ಸ್‌ಗಳ ಆಯ್ಕೆ ಒಳಗೊಂಡಿವೆ. ಅದಾಗ್ಯೂ, ಗ್ಯಾಲಕ್ಸಿ ಫೋನ್‌ಗಳಲ್ಲಿ ಕೆಲವು ಹಿಡೆನ್‌ ಶಾರ್ಟ್‌ಕಟ್‌ ಆಯ್ಕೆ ಇದ್ದು, ಇವು ಬಳಕೆದಾರರಿಗೆ ಅಚ್ಚರಿ ಮೂಡಿಸುವಂತಿವೆ. ಹಾಗೆಯೇ ಈ ಆಯ್ಕೆಗಳು ಬಳಕೆದಾರರಿಗೆ ನೆರವಾಗಲಿವೆ. ಹಾಗಾದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಕೆಲವು ರಹಸ್ಯ ಶಾರ್ಟ್‌ಕಟ್‌ ಕೀ ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನಿಮ್ಮ ಸ್ಯಾಮ್‌ಸಂಗ್‌ ಫೋನಿನಲ್ಲಿ ಈ ರಹಸ್ಯ ಫೀಚರ್ಸ್‌ ಇವೆಯಾ?..ಒಮ್ಮೆ ಚೆಕ್ ಮಾಡಿ!

ಸೈಡ್‌ ಬಟನ್‌ನಿಂದ ಯಾವುದೇ ಆಪ್‌ ತೆರೆಯಿರಿ : ಸಾಮಾನ್ಯವಾಗಿ ಬಹುತೇಕ ಫೋನಿನ ಸೈಡ್‌ ಬಟನ್‌ ಕ್ಲಿಕ್ ಮಾಡಿದರೆ, ಕ್ಯಾಮೆರಾ ತೆರೆಯುತ್ತದೆ. ಆದರೆ ಸೈಡ್‌ ಬಟನ್‌ ಕ್ಲಿಕ್ ಮಾಡಿ, ಬೇರೆ ಯಾವುದೇ ಆಪ್‌ ತೆರೆಯುವಂತೆ ಸೆಟ್ ಮಾಡಬಹುದು. ಅದಕ್ಕಾಗಿ ಹೀಗೆ ಮಾಡಿ :
* ಸೆಟ್ಟಿಂಗ್‌ ತೆರೆಯಿರಿ > ಅಡ್ವಾನ್ಸ್‌ ಫೀಚರ್ಸ್‌ > ಸೈಡ್ ಕೀ
* ಎರಡು ಬಾರಿ ಕ್ಲಿಕ್‌ ಮಾಡಿ ಕ್ಯಾಮರಾ ತೆರೆಯಿರಿ ಅಥವಾ ಯಾವುದೇ ಆಪ್‌ ಅನ್ನು ಆಯ್ಕೆ ಮಾಡಿ
* Bixby ಜೊತೆಗೆ ಮಾತನಾಡಲು ಹೋಲ್ಡ್ ಮಾಡಿ ಅಥವಾ ಪವರ್ ಮೆನು ತೆರೆಯಿರಿ

ಬಳಕೆ ಮಾಡದ ಆಪ್‌ ಹೈಡ್‌ ಮಾಡಬಹುದು : ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವು ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿರುತ್ತಾರೆ. ಆದರೆ ಎಲ್ಲ ಆಪ್‌ಗಳನ್ನು ಬಳಕೆ ಮಾಡುವುದು ಕಡಿಮೆ. ಈ ನಿಟ್ಟಿನಲ್ಲಿ ಹೆಚ್ಚು ಬಳಕೆ ಮಾಡದ ಆಪ್‌ಗಳನ್ನು ಸ್ಕ್ರೀನ್‌ನಿಂದ ಹೈಡ್ ಮಾಡಬಹುದು. ಅದಕ್ಕಾಗಿ ಹೀಗೆ ಮಾಡಿ. ಸೆಟ್ಟಿಂಗ್ ತೆರೆಯಿರಿ > ಹೋಮ್ ಸ್ಕ್ರೀನ್ ಸೆಟ್ಟಿಂಗ್‌ > ಹೋಮ್ ಮತ್ತು ಸ್ಕ್ರೀನ್‌ನಿಂದ ಆಪ್‌ ಹೈಡ್‌ ಮಾಡಿ ಆಯ್ಕೆ.

ವಾಯಿಸ್‌ ಮೂಲಕ ಫೋಟೋ ಕ್ಲಿಕ್ ಮಾಡಬಹುದು : ಹೌದು, ಗ್ಯಾಲಕ್ಸಿ ಫೋನ್‌ ಬಳಕೆದಾರರು ತಮ್ಮ ಧ್ವನಿ ಮೂಲಕ ಫೋಟೋ ಕ್ಲಿಕ್‌ ಮಾಡಬಹುದಾಗಿದೆ. ಅದಕ್ಕಾಗಿ ಸೆಟ್ಟಿಂಗ್‌ನಲ್ಲಿ ವಾಯಿಸ್‌ ಕಮಾಂಡ್‌ ಆಯ್ಕೆ ಸಕ್ರಿಯ ಮಾಡಬೇಕಿದೆ. ಅದನ್ನು ಹೀಗೆ ಮಾಡಬಹುದು. ಕ್ಯಾಮೆರಾ ತೆರೆಯಿರಿ > ನಂತರ ಕ್ಯಾಮೆರಾ ಸೆಟ್ಟಿಂಗ್ ಆಯ್ಕೆ > ಆ ಬಳಿಕ ಆಕ್ಟಿವ್‌ ವಾಯಿಸ್‌ ಕಮಾಂಡ್ ಆಯ್ಕೆ > ಚಿಸ್‌ ಅಥವಾ ಶೂಟ್‌ ಎಂದು ಹೇಳಿರಿ.

ಕ್ಯಾಮೆರಾ ಮೂಲಕ ಸ್ವಂತ GIF ಕ್ರಿಯೆಟ್‌ ಮಾಡಬಹುದು : ಹೌದು, ಬಳಕೆದಾರರು ಕ್ಯಾಮೆರಾ ಮೂಲಕ ಸ್ವಂತ GIF ಕ್ರಿಯೆಟ್ ಮಾಡಬಹುದಾಗಿದೆ. ಅದಕ್ಕಾಗಿ ಈ ರೀತಿ ಈ ಹಂತಗಳನ್ನು ಫಾಲೋ ಮಾಡಿ. ಕ್ಯಾಮೆರಾ ತೆರೆಯಿರಿ > ನಂತರ ಕ್ಯಾಮೆರಾ ಸೆಟ್ಟಿಂಗ್ ಆಯ್ಕೆ > ಆ ನಂತರ ಕ್ರಿಯೆಟ್‌ GIF ಅನ್ನು ಆಯ್ಕೆ ಮಾಡಿರಿ > GIF ಕಳುಹಿಸಬಹುದು.

ಸೇವ್‌ RAW ಪಿಚ್ಚರ್ಸ್‌ ಆಯ್ಕೆ ಇದೆ : ಸಾಮಾನ್ಯವಾಗಿ ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳಲ್ಲಿ ಕಾಣಬಹುದಾದ ಸೇವ್‌ RAW ಪಿಚ್ಚರ್ಸ್‌ ಆಯ್ಕೆಯನ್ನು ಗ್ಯಾಲ್ಯಾಕ್ಸಿ S10 ಪ್ಲಸ್‌ ಫೋನಿನಲ್ಲಿಯೂ ಕಾಣಬಹುದಾಗಿದೆ. ಈ ಫೋನಿನ ಕ್ಯಾಮೆರಾದಲ್ಲಿ ಪ್ರೊ ಮೋಡ್‌ ಆಯ್ಕೆಯ ಮೂಲಕ ಕ್ಲಿಕ್ ಮಾಡಿರುವ ಫೋಟೊಗಳು RAW ಪಿಚ್ಚರ್ಸ್‌ನಲ್ಲಿ ಸೇವ್‌ ಆಗುತ್ತವೆ. ಆಯ್ಕೆ ಅನ್ನು ಸಕ್ರಿಯ ಮಾಡಲು ಬಳಕೆದಾರರು ಈ ಹಂತಗಳನ್ನು ಅನುಸರಿಸಬೇಕಿದೆ. ಮೊದಲಿಗೆ ಕ್ಯಾಮೆರಾ ಸೆಟ್ಟಿಂಗ್ > ನಂತರ ಸೇವ್‌ ಆಯ್ಕೆಗಳು > RAW ಕಾಪಿಸ್‌ (ಪ್ರೊ) ಆಯ್ಕೆ.

Best Mobiles in India

English summary
Few hidden Samsung Galaxy Features You should know: details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+