Home
ಮೊಬೈಲ್

ಮೊಬೈಲ್‌ ಪ್ರಿಯರ ಗಮನ ಸೆಳೆದ ಒಪ್ಪೋದ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು ಇವು!

ಒಪ್ಪೋ ಮೊಬೈಲ್‌ (Oppo) ಸಂಸ್ಥೆಯು ಭಿನ್ನ ಪ್ರೈಸ್‌ ರೇಂಜ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ತನ್ನದೇ ಗ್ರಾಹಕ ಬಳಗವನ್ನು ಹೊಂದಿದೆ. ಒಪ್ಪೋ ಕಂಪನಿಯ ಬಹುತೇಕ ಮೊಬೈಲ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸಕತ್ ಸೌಂಡ್‌ ಮಾಡುತ್ತಿವೆ. ಆ ಲಿಸ್ಟ್‌ನಲ್ಲಿ ಒಪ್ಪೋ F ಸರಣಿ, ಒಪ್ಪೋ ರೆನೋ ಸರಣಿ, ಒಪ್ಪೋ A ಸರಣಿಯ ಫೋನ್‌ಗಳು ಕೂಡಾ ಸೇರಿವೆ. ಅದಾಗ್ಯೂ, ಒಪ್ಪೋ A ಸರಣಿಯ ಕೆಲವು ಫೋನ್‌ಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿ ಆಗಿದ್ದು, ಆಕರ್ಷಕ ಫೀಚರ್ಸ್‌ ಸಹ ಪಡೆದಿವೆ.

ಹೌದು, ಒಪ್ಪೋ ಮೊಬೈಲ್‌ ಕಂಪನಿಯ ಒಪ್ಪೋ A ಸರಣಿಯಲ್ಲಿ ಇತ್ತೀಚಿಗೆ ಕೆಲವು ಫೋನ್‌ಗಳು ಹೆಚ್ಚಿನ ಸದ್ದು ಮಾಡಿವೆ. ಅವುಗಳ ಪೈಕಿ ಇತ್ತೀಚಿನ ಒಪ್ಪೋ A3 ಪ್ರೊ ಸ್ಮಾರ್ಟ್‌ಫೋನ್‌ ಕೂಡಾ ಒಂದಾಗಿದೆ. ಇದಲ್ಲದೇ ಇನ್ನು ಕೆಲವು A ಸರಣಿಯ ಮೊಬೈಲ್‌ಗಳು ಆಕರ್ಷಕ ಫೀಚರ್ಸ್‌ಗಳೊಂದಿಗೆ ಅಧಿಕ ಗ್ರಾಹಕರನ್ನು ಸೆಳೆದಿವೆ. ಹಾಗಾದರೇ ಸದ್ಯ ಜನಪ್ರಿಯತೆ ಪಡೆದಿರುವ ಒಪ್ಪೋ A ಸರಣಿಯ ಕೆಲವು ಬೆಸ್ಟ್‌ ಒಪ್ಪೋ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಮೊಬೈಲ್‌ ಪ್ರಿಯರ ಗಮನ ಸೆಳೆದ ಒಪ್ಪೋದ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು ಇವು!

ಒಪ್ಪೋ A3 ಪ್ರೊ ಸ್ಮಾರ್ಟ್‌ಫೋನ್‌

ಒಪ್ಪೋ A3 ಪ್ರೊ ಮೊಬೈಲ್‌ 6.7 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 1080 x 2412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಅಲ್ಲದೇ ಮೀಡಿಯಾಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್‌ 14 ಆಧಾರಿತ ಕಲರ್ ಓಎಸ್‌ 14 ಸಪೋರ್ಟ್ ಜೊತೆಗೆ ಕೆಲಸ ನಿರ್ವಹಿಸಲಿದೆ.

ಅಲ್ಲದೇ ಈ ಮೊಬೈಲ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿದೆ. ಇದರೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು 67W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. ಇದು ಮೂನ್‌ಲೈಟ್‌ ಪರ್ಪಲ್‌ ಹಾಗೂ ಸ್ಟೇರಿ ಬ್ಲ್ಯಾಕ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

ಒಪ್ಪೋ A59 5G ಸ್ಮಾರ್ಟ್‌ಫೋನ್‌

ಒಪ್ಪೋದ ಈ ಮೊಬೈಲ್‌ 6.56 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ ಡ್ಯೂಡ್ರಾಪ್ ನಾಚ್ ಅನ್ನು ಪಡೆದುಕೊಂಡಿದೆ. ಅಲ್ಲದೇ ಇದರ ಡಿಸ್‌ಪ್ಲೇ 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅಲ್ಲದೇ ಮೀಡಿಯಾ ಟೆಕ್‌ ಡೈಮೆನ್ಸಿಟಿ 6020SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಒಳಗೊಂಡಿದೆ.

ಇದರ ಜೊತೆಗೆ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರಲ್ಲಿ ಮೊದಲ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದು 33W SUPERVOOC ಫ್ಲ್ಯಾಶ್ ಚಾರ್ಜಿಂಗ್ ಸಪೋರ್ಟ್‌ ಅನ್ನು ಒಳಗೊಂಡಿದೆ.

ಒಪ್ಪೋ A79 5G ಸ್ಮಾರ್ಟ್‌ಫೋನ್‌

ಒಪ್ಪೋ A79 5G ಮೊಬೈಲ್‌ 6.72 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಅಲ್ಲದೇ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಇದಕ್ಕೆ ಸಪೋರ್ಟ್‌ ಆಗಿ ಆಂಡ್ರಾಯ್ಡ್‌ 13 OS ಆಧಾರಿತ ಕಲರ್ ಓಎಸ್‌ 13 ಸಪೋರ್ಟ್ ನಲ್ಲಿ ಕೆಲಸ ಮಾಡಲಿದೆ.

ಹಾಗೆಯೇ ಈ ಮೊಬೈಲ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿದೆ. ಇದಲ್ಲದೇ ಈ ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಪೂರಕವಾಗಿ 33W ಫಾಸ್ಟ್‌ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇದು ಗ್ಲೋಯಿಂಗ್ ಗ್ರೀನ್ ಮತ್ತು ಮಿಸ್ಟರಿ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Few Popular Oppo A series Phones list 2024. check phone list and specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+