Subscribe to Gizbot

ಮಾರುಕಟ್ಟೆಗೆ ಲಗ್ಗೆ ಇಟ್ಟ ಬೆಂಗಳೂರಲ್ಲಿ ತಯಾರಾದ ಐಫೋನ್..! ಬೆಲೆ ಎಷ್ಟು..?

Written By:

ಭಾರತದಲ್ಲಿ ಐಫೋನ್ ತಯಾರಿಕೆಯನ್ನು ಆರಂಭಿಸಿದ ಆಪಲ್, ಬೆಂಗಳೂರಿನಲ್ಲಿ ನಿರ್ಮಾಣವಾಗಿದ್ದ ಐಪೋನ್ SE ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈಗಾಗಲೇ ಐಪೋನ್ SE ದೇಶದಾದ್ಯಂತ ರೀಟೆಲ್ ಸ್ಟೋರ್ ಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನ ಮೇಲೆ 'ಅಸೆಂಬಲ್ಡ್ ಇನ್ ಇಂಡಿಯಾ' ಎಂಬ ಟ್ಯಾಗ್ ಅನ್ನು ಕಾಣಬಹುದಾಗಿದೆ.

ಮಾರುಕಟ್ಟೆಗೆ ಲಗ್ಗೆ ಇಟ್ಟ ಬೆಂಗಳೂರಲ್ಲಿ ತಯಾರಾದ ಐಫೋನ್..! ಬೆಲೆ ಎಷ್ಟು..?

ಓದಿರಿ: ಮುಗಿತೂ ಜಿಯೋ 4G ಲ್ಯಾಪ್ಟಾಪ್ ಕತೆ: ಫ್ಲಿಪ್ ಕಾರ್ಟ್ ನಿಂದ ರೂ.999ಕ್ಕೆ ಲ್ಯಾಪ್ಟಾಪ್..!

ಆಪಲ್ ಭಾರತದಲ್ಲೇ ಎಂಟ್ರಿ ಲೆವೆಲ್ ಐಪೋನ್ SE ಅನ್ನು ನಿರ್ಮಿಸುವುದಾಗಿ ಹೇಳಿತ್ತು. ಅದರಂತೆ ಬೆಂಗಳೂರಿನಲ್ಲಿ ತಯಾರಿಕಾ ಘಟಕವನ್ನು ಹೊಂದಿತ್ತು. ಸದ್ಯ ಭಾರತದಲ್ಲಿ ನಿರ್ಮಿಸಿದ ಐಪೋನ್ SE ಅನ್ನು ಮಾರುಕಟ್ಟೆಗೆ ಆಪಲ್ ಬಿಡುಗಡೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆಯಲ್ಲಿ ವ್ಯತ್ಯಾಸವಿಲ್ಲ:

ಬೆಲೆಯಲ್ಲಿ ವ್ಯತ್ಯಾಸವಿಲ್ಲ:

ಬೆಂಗಳೂರಿನಲ್ಲಿಯೇ ಐಪೋನ್ SE ಅನ್ನು ತಯಾರಾಗುವದರಿಂದ ಬೆಲೆಯಲ್ಲಿ ಭಾರಿ ಇಳಿಕೆಯನ್ನು ಕಾಣಬಹುದು ಎನ್ನುತ್ತಿದ್ದವರಿಗೆ ನಿರಾಸೆಯಾಗಿದೆ. ಆಪಲ್ ಬೆಲೆಯಲ್ಲಿ ಯಾವುದೇ ಕಡಿತವನ್ನು ಮಾಡದೆ ಈ ಹಿಂದಿನ ಬೆಲೆಗೆ ಭಾರತದಲ್ಲಿ ತಯಾರದ ಐಪೋನ್ SE ಅನ್ನು ಮಾರಾಟ ಮಾಡುತ್ತಿದೆ. ಇದರ ಬೆಲೆ ರೂ.27,000 ಗಳಾಗಿದೆ.

'ಅಸೆಂಬಲ್ಡ್ ಇನ್ ಇಂಡಿಯಾ' ಟ್ಯಾಗ್:

'ಅಸೆಂಬಲ್ಡ್ ಇನ್ ಇಂಡಿಯಾ' ಟ್ಯಾಗ್:

ಬೆಂಗಳೂರಿನಲ್ಲಿ ತಯಾರಾಗಿರುವ ಐಪೋನ್ SE ನ ಮೇಲೆ 'ಡಿಸೈನ್ಡ್ ಇನ್ ಕ್ಯಾಲಿಫೋರ್ನಿಯಾ, ಅಸೆಂಬಲ್ಡ್ ಇನ್ ಇಂಡಿಯಾ' ಎಂಬ ಟ್ಯಾಗ್ ಲೈನ್ ಕಾಣಬಹುದಾಗಿದೆ. ಈ ಪೋನ್‌ಗಳನ್ನು ಆಪಲ್ ಪಾಲುದಾರದಾದ ವೆಸ್ಟ ಕಾರ್ಪ್
ಭಾರತದಲ್ಲಿ ನಿರ್ಮಾಣ ಮಾಡುತ್ತಿದೆ.

ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ:

ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ:

ಭಾರತದಲ್ಲಿ ನಿರ್ಮಾಣ ಮಾಡುವ ಆಪಲ್ ಐಫೋನಿಗೆ ತೆರಿಗೆ ವಿನಾಯಿತಿಯನ್ನು ನೀಡಬೇಕು ಎಂದು ಆಪಲ್ ಕೇಂದ್ರ ಸರಕಾರದ ಬಳಿ ಬೇಡಿಕೆಯನ್ನು ಇರಿಸಿದ್ದು, ಕೇಂದ್ರ ಸರಕಾರವೂ ಈ ಮನವಿಯನ್ನು ಪುರಸ್ಕರಿಸುವ ಸಾಧ್ಯತೆ ಇದೆ. ಒಮ್ಮೆ ಇದು ಒಪ್ಪಿತವಾದರೆ ಬೆಲೆಗಳಲ್ಲಿ ಇಳಿಕೆ ಕಂಡುಬರಲಿದೆ.

ಐಪೋನ್ SE ವಿಶೇಷತೆಗಳು:

ಐಪೋನ್ SE ವಿಶೇಷತೆಗಳು:

ಐಪೋನ್ SE ಒಟ್ಟು ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, 16GB ಮತ್ತು 32GB ಆವೃತ್ತಿಯಲ್ಲಿ ದೊರೆಯಲಿದೆ. 16GB ಆವೃತ್ತಿಯ ಬೆಲೆ ರೂ. 26,990ಕ್ಕೆ ಮಾರಾಟವಾಗುತ್ತಿದೆ. ಇದೇ ಮಾದರಿಯಲ್ಲಿ 32GB ಆವೃತ್ತಿಯ ಬೆಲೆ ರೂ.27,490 ಆಗಲಿದೆ. ಆದರೆ ಫ್ಲಿಪ್ ಕಾರ್ಟ್‌ನಲ್ಲಿ ಈ ಫೋನಿನ ಮೇಲೆ ಆಫರ್ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The first batch of 'Assembled in India' iPhone SE phones has started hitting retail stores across the country. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot