ಪಬ್‌ಜಿ ಆಟಕ್ಕೆ ಬಜೆಟ್‌ ಬೆಲೆಯ 5 ಬೆಸ್ಟ್ ಸ್ಮಾರ್ಟ್‌ಫೋನ್ ಯಾವುವು ಗೊತ್ತಾ..?!

|

ಗೇಮ್ಸ್‌ ಪ್ರಿಯರ ನೆಚ್ಚಿನ ಪಬ್‌ಜಿ ಗೇಮ್ ದಿನೇ ದಿನೇ ಜನಪ್ರಿಯವಾಗುತ್ತಿದ್ದು, ಈ ಆನ್‌ಲೈನ್ ಗೇಮ್ ಯುವಜನರಿಗೆ ಗುಂಗು ಹಿಡಿಸಿದೆ ಎಂದರೇ ತಪ್ಪಾಗಲಾರದು. ಅಧಿಕ ಡೇಟಾ ಬೇಡುವ ಪಬ್‌ಜಿ ಗೇಮ್ ಅನ್ನು ಅಡೆತಡೆ ಇಲ್ಲದೇ ಆಡಲು ಹೈ ಎಂಡ್‌ RAM ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳ ಅಗತ್ಯವಾಗಿದ್ದು, ಆದರೆ ಕೆಲವು ಕೈಗೆಟಕುವ ಬೆಲೆಯ ಸ್ಮಾರ್ಟ್‌ಫೋನ್‌ಗಳು ಪಬ್‌ಜಿ ಆಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತವೆ.

ಪಬ್‌ಜಿ ಆಟಕ್ಕೆ ಬಜೆಟ್‌ ಬೆಲೆಯ 5 ಬೆಸ್ಟ್ ಸ್ಮಾರ್ಟ್‌ಫೋನ್ ಯಾವುವು ಗೊತ್ತಾ..?!

ಗೇಮ್ಸ್‌ಆಡುವ ಉದ್ದೇಶಕ್ಕಾಗಿಯೇ ಹಲವು ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳು 'ಗೇಮಿಂಗ್ ಸ್ಮಾರ್ಟ್‌ಫೋನ್‌'ಗಳು ತಯಾರಿಸಿದ್ದು, ಈ ಸ್ಮಾರ್ಟ್‌ಫೋನ್‌ಗಳು ದುಬಾರಿ ದರವನ್ನು ಹೊಂದಿರುವುದರಿಂದ ಬಹುತೇಕ ಗೇಮ್ಸ್ ಪ್ರಿಯರು ಖರೀದಿಸಲು ಹಿಂದೆಟು ಹಾಕುತ್ತಾರೆ. ಆದರೆ ಇತ್ತೀಚಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಕೆಲವು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳು ಪಬ್‌ಜಿ ಆಟಕ್ಕೆ ಸಂಪೂರ್ಣ ಬಲ ನೀಡಲಿವೆ.

ಪಬ್‌ಜಿ ಆಟಕ್ಕೆ ಬಜೆಟ್‌ ಬೆಲೆಯ 5 ಬೆಸ್ಟ್ ಸ್ಮಾರ್ಟ್‌ಫೋನ್ ಯಾವುವು ಗೊತ್ತಾ..?!

ಸ್ಯಾಮ್‌ಸಂಗ್‌, ಶಿಯೋಮಿ, ಹಾನರ್ ಮತ್ತು ರಿಯಲ್ ಮಿ ಸೇರಿದಂತೆ ಪ್ರಮುಖ ಕಂಪನಿಗಳು ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ RAM ಸಾಮರ್ಥ್ಯದ ಜೊತೆಗೆ ವೇಗದ ಕಾರ್ಯದಕ್ಷತೆಯನ್ನು ಒಳಗೊಂಡಿವೆ. ಇದರೊಂದಿಗೆ ಗೇಮ್ಸ್‌ಗಳಿಗೂ ಈ ಸ್ಮಾರ್ಟ್‌ಫೋನ್‌ಗಳು ಸಹಕರಿಸಲಿವೆ. ಹಾಗಾದರೇ ಬಜೆಟ್‌ ದರದಲ್ಲಿ ದೊರೆಯಲಿರುವ ಆ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿರಿ.

ಹಾನರ್‌10 ಲೈಟ್

ಹಾನರ್‌10 ಲೈಟ್

* 6.2 ಇಂಚಿನ ಫುಲ್‌ ಹೆಚ್‌ಡಿ ಡ್ಯುವ್‌ಡ್ರಾಪ್ ಡಿಸ್‌ಪ್ಲೇ
* ಹಿಲಿಸಿಕಾನ್ ಕಿರನ್ 710SoC ಪ್ರೊಸೆಸರ್
* 4GB/6GB RAM + 64GB ಸಂಗ್ರಹ ಸಾಮರ್ಥ್ಯ
* ಹಿಂಬದಿಯಲ್ಲಿ 13+2 ಮೆಗಾಪಿಕ್ಸಲ್‌ನ ಡ್ಯುಯಲ್ ಕ್ಯಾಮೆರಾ ಮತ್ತು 24 ಮೆಗಾಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ.
* 3400mAh ಬ್ಯಾಟರಿ ಶಕ್ತಿ ಇದೆ.

ಶಿಯೋಮಿ ರೆಡ್ಮಿ ನೋಟ್‌ 7 ಪ್ರೋ

ಶಿಯೋಮಿ ರೆಡ್ಮಿ ನೋಟ್‌ 7 ಪ್ರೋ

* 6.3 ಇಂಚಿನ ಫುಲ್‌ ಹೆಚ್‌ಡಿ ಡ್ಯುವ್‌ಡ್ರಾಪ್ ಡಿಸ್‌ಪ್ಲೇ
* ಸ್ನ್ಯಾಪ್‌ಡ್ರಾಗನ್ 660 AIE ಪ್ರೊಸೆಸರ್ ಮತ್ತು ಗ್ರಾಫಿಕ್ 612
* 4GB RAM + 64GB ಮತ್ತು 6GB RAM + 128GB ಸಂಗ್ರಹ ಸಾಮರ್ಥ್ಯ
* ಹಿಂಬದಿಯಲ್ಲಿ 48+5 ಮೆಗಾಪಿಕ್ಸಲ್‌ನ ಡ್ಯುಯಲ್ ಕ್ಯಾಮೆರಾ ಮತ್ತು 13 ಮೆಗಾಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ.
* 4000 mAh ಸಾಮರ್ಥ್ಯದ ಬ್ಯಾಟರಿ ಶಕ್ತಿ ಇದೆ.

ಶಿಯೋಮಿ ರೆಡ್ಮಿ ನೋಟ್‌ 7

ಶಿಯೋಮಿ ರೆಡ್ಮಿ ನೋಟ್‌ 7

* 6.30 ಇಂಚಿನ ಫುಲ್‌ ಹೆಚ್‌ಡಿ ಡ್ಯುವ್‌ಡ್ರಾಪ್ ಡಿಸ್‌ಪ್ಲೇ
* ಸ್ನ್ಯಾಪ್‌ಡ್ರಾಗನ್ 660 AIE ಪ್ರೊಸೆಸರ್
* 4GB RAM + 64GB ಸಂಗ್ರಹ ಸಾಮರ್ಥ್ಯ
* ಹಿಂಬದಿಯಲ್ಲಿ 12+2 ಮೆಗಾಪಿಕ್ಸಲ್‌ನ ಡ್ಯುಯಲ್ ಕ್ಯಾಮೆರಾ ಮತ್ತು ಸೆಲ್ಫಿಗೆ 13 ಮೆಗಾಪಿಕ್ಸಲ್ ಕ್ಯಾಮೆರಾ
* 4000 mAh ಬ್ಯಾಟರಿ ಪವರ್‌ ಇದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30

* 6.4 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ
* ಸ್ಯಾಮ್‌ಸಂಗ್ Exynos 7 ಆಕ್ಟಾಕೋರ್ 7904 ಪ್ರೊಸೆಸರ್ ಮತ್ತು G71 MP2 ಗ್ರಾಫಿಕ್
* 4GB/6GB RAM + 64GB ಸ್ಟೋರೆಜ್ ಸಾಮರ್ಥ್ಯ ಹಾಗೂ ಬಾಹ್ಯ ಸಂಗ್ರಹಕ್ಕೆ 512GB ವರೆಗೂ ವಿಸ್ತರಣೆ ಅವಕಾಶ.
* ಹಿಂಬದಿಯಲ್ಲಿ 13+5+5 ಮೆಗಾಪಿಕ್ಸಲ್‌ನ ತ್ರಿವಳಿ ಕ್ಯಾಮೆರಾ ಮತ್ತು 16 ಮೆಗಾಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ.
* 5000mAh ಶಕ್ತಿಯ ಬ್ಯಾಟರಿ ಇದೆ.

ರಿಯಲ್‌ ಮಿ 3

ರಿಯಲ್‌ ಮಿ 3

* 6.3 ಇಂಚಿನ ಅಂಚು ರಹಿತ ಫುಲ್‌ ಹೆಚ್‌ಡಿ ಡಿಸ್‌ಪ್ಲೇ
* ಮೀಡಿಯಾ ಟೆಕ್ ಹಿಲಿಯೋ P70 ಆಕ್ಟಾಕೋರ್ ಪ್ರೊಸೆಸರ್
* 6GB RAM + 64GB ಸಂಗ್ರಹ ಸ್ಥಳದೊಂದಿಗೆ, ಬಾಹ್ಯ ಸಂಗ್ರಹಕ್ಕೆ 512GB ವರೆಗೂ ವಿಸ್ತರಣೆ ಅವಕಾಶ.
* ಹಿಂಬದಿಯಲ್ಲಿ 16+5 ಮೆಗಾಪಿಕ್ಸಲ್‌ನ ಎರಡು ಕ್ಯಾಮೆರಾ ಮತ್ತು 20 ಮೆಗಾಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ.
* 4500 mAh ಬ್ಯಾಟರಿ ಶಕ್ತಿ ಇದೆ.

Best Mobiles in India

English summary
Here are the best pocket-friendly smartphones to play PlayerUnknown's Battlegrounds (PUBG).to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X