Home
ಮೊಬೈಲ್

ಜಿಯೋದ ಈ ಐದು ಆಪ್ಸ್‌ಗಳನ್ನು ನೀವು ಬಳಸಿದ್ದಿರಾ?

2016ರಲ್ಲಿ ಟೆಲಿಕಾಂ ವಲಯಕ್ಕೆ ಪ್ರವೇಶ ಮಾಡಿದ ರಿಲಾಯನ್ಸ್ 'ಜಿಯೋ' ಸಂಸ್ಥೆಯು ಭಾರತೀಯ ಟೆಲಿಕಾಂ ಕ್ಷೇತ್ರದ ಚಹರೆಯನ್ನೆ ಬದಲಾಯಿಸಿ ಬಿಟ್ಟಿತು. ಅಗ್ಗದ ಬೆಲೆಯಲ್ಲಿ ಕರೆಗಳು, ಎಸ್‌ಎಮ್‌ಎಸ್‌ ಮತ್ತು ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಮಿಂಚುತ್ತ ಮುಂದೆ ನಡೆದಿದೆ. ಹಾಗೆಯೇ ಜಿಯೋದ ಮನರಂಜನೆಯ ಸೇವೆಗಳು ಗ್ರಾಹಕರಿಗೆ ಅತ್ಯುತ್ತಮ ಎನಿಸಿದ್ದು, ಜಿಯೋದ ಬೇಡಿಕೆಯನ್ನು ಹೆಚ್ಚಿಸಿದೆ.

ಜಿಯೋದ ಈ ಐದು ಆಪ್ಸ್‌ಗಳನ್ನು ನೀವು ಬಳಸಿದ್ದಿರಾ?

ಜಿಯೋ ಕಂಪನಿಯು ಗ್ರಾಹಕ ಸ್ನೇಹಿ ಡೇಟಾ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ನೀಡುತ್ತಿದ್ದು, ಅದರೊಂದಿಗೆ ವಿಡಿಯೊ ಸ್ಟ್ರಿಮಿಂಗ್ ಮತ್ತು ಮ್ಯೂಸಿಕ್ ಆಪ್‌ಗಳ ಚಂದಾದಾರಿಕೆಯಲ್ಲಿಯೂ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಕಂಪನಿಯ ಜಿಯೋ ಸಾವನ್, ಜಿಯೋ ಲೈವ್ ಟಿವಿ, ಜಿಯೋ ಸಿನಿಮಾ, ಜಿಯೊ ಮನಿ ಪೇಮೆಂಟ್ ಮತ್ತು ಜಿಯೋ ಆಪ್‌ಗಳು ಗ್ರಾಹಕರನ್ನು ಸೆಳೆದಿವೆ. ಹಾಗಾದರೇ ಈ ಐದು ಅಪ್ಲಿಕೇಶನ್ ಕುರಿತು ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಮೈ ಜಿಯೋ ಆಪ್‌

ಮೈ ಜಿಯೋ ಆಪ್‌

ಕಂಪನಿಯ 'ಜಿಯೋ ಆಪ್‌' ಗ್ರಾಹಕ ಸೆಲ್ಫ ಸರ್ವಿಸ್‌ ಕೇರ್ ಇದ್ದಂತೆ. ಯಾವುದೇ ಟೈಮ್‌ನಲ್ಲಿ ಬೇಕಾದರೂ ಈ ಆಪ್‌ನಲ್ಲಿ ರೀಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ರೀಚಾರ್ಜ್‌ಗಾಗಿ ಹಲವಾರು ಪೇಮೆಂಟ್ ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಸುಲಭವಾಗಿ ರೀಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ರೀಚಾರ್ಜ್ ಪ್ಲ್ಯಾನ್‌ಗಳ ಕಂಪ್ಲಿಟ್‌ ಮಾಹಿತಿ ಸಹ ಸೀಗಲಿದ್ದು, ರೀಚಾರ್ಜ್‌ ನಂತರ ಕ್ಯಾಶ್‌ಬ್ಯಾಕ್ ಸಹ ದೊರೆಯುವ ಸಾಧ್ಯತೆಗಳಿವೆ.

ಜಿಯೋ ಸಾವನ್

ಜಿಯೋ ಸಾವನ್

ಜಿಯೋ ಸಾವನ್ ಒಂದು ಮ್ಯೂಸಿಕ್ ಸ್ಟ್ರಿಮಿಂಗ್ ಅಪ್ಲಿಕೇಶನ್ ಆಗಿದ್ದು, ಬಳಕೆದಾರರು ಅವರಿಗಿಷ್ಟವಾದ ಹಾಡುಗಳನ್ನು ಕೇಳಬಹುದಾಗಿದೆ. ಕನ್ನಡ ಸೇರಿದಂತೆ ಮಲ್ಟಿಪಲ್ ಲಾಗ್ವೇಜ್‌ ಆಯ್ಕೆಗಳಲ್ಲಿ ಲಭ್ಯ ಇರುವ ಈ ಆಪ್‌ನಲ್ಲಿ ಹಾಡುಗಳು, ಲಿರಿಕ್ಸ್, ಪ್ಲೇಲಿಸ್ಟ್‌ ಮತ್ತು ಆರ್ಟಿಸ್ಟ್‌ ಕ್ಯಾಟಗರಿ ಆಯ್ಕೆಗಳು ಇವೆ. ಜಾಹಿರಾತು ಮುಕ್ತವಾದ ಮತ್ತು ಆಫ್‌ಲೈನ್‌ ಮೋಡ್‌ನಲ್ಲಿಯೂ ಸಹ ಆಪ್‌ ಬಳಸಬಹುದಾಗಿದೆ.

ಜಿಯೋ ಟಿವಿ

ಜಿಯೋ ಟಿವಿ

ಜಿಯೋ ಕಂಪನಿಯು ತನ್ನ ಬಳಕೆದಾರರಿಗಾಗಿ ಜಿಯೋ ಟಿವಿ ಆಪ್ ಆಯ್ಕೆಯನ್ನು ನೀಡಿದ್ದು, ಸ್ಮಾರ್ಟ್‌ಫೋನ್‌ನಲ್ಲಿ ಜನಪ್ರಿಯ ಟಿವಿ ಶೋಗಳನ್ನು, ಸ್ಪೋರ್ಟ್ಸ್‌, ನ್ಯೂಸ್‌ಗಳನ್ನು ಮತ್ತು ಕಾರ್ಯಕ್ರಮಗಳನ್ನು ನೇರವಾಗಿ ವೀಕ್ಷಿಸಬಹುದಾದಿದೆ. ಪ್ರಾದೇಶಿಕ ಭಾಷೆಗಳ ಆಯ್ಕೆಗಳು ಸಹ ಲಭ್ಯವಿದ್ದು, ಹಾಗೆಯೇ ಜನಪ್ರಿಯ ಚಾನಲ್‌ಗಳು ಸಹ ಬಳಕೆದಾರರಿಗೆ ದೊರೆಯಲಿವೆ.

ಜಿಯೋ ಸಿನಿಮಾ

ಜಿಯೋ ಸಿನಿಮಾ

ಬಳಕೆದಾರರು ಹಲವಾರು ಟಿವಿ ಶೋಗಳನ್ನು ಮತ್ತು ಸಿನಿಮಾಗಳನ್ನು ವೀಕ್ಷಿಸಲು ಅನುಕೂವಿದ್ದು, ಬೇಡಿಕೆ ಆಧಾರದ ಮೇಲೆ ಸಿನಿಮಾ ವೀಕ್ಷಿಸುವ ಸೌಲಭ್ಯವು ಸಹ ಇದೆ. ವಾಚ್‌ಲಿಸ್ಟ್‌, ಡಾಕ್ ಪ್ಲೇಯರ್, ವಾಯಿಸ್‌ ಸರ್ಚ್‌, ಬಿಟ್ರೆಟ್‌ ಸೆಲೆಕ್ಷನ್ ಮತ್ತು ಇನ್ನಿತರೆ ಫೀಚರ್ಸ್‌ಗಳನ್ನು ಸಹ ಕಾಣಬಹುದಾಗಿದೆ. ಜಿಯೋ ಟಿವಿಯೊಂದಿಗೆ ಈ ಸೌಲಭ್ಯಗಳನ್ನು ಬಳಕೆದಾರರಿಗೆ ದೊರಕಿಸಿವೆ.

ಜಿಯೋ ಮನಿ

ಜಿಯೋ ಮನಿ

ಜಿಯೋ ಮನಿ ಸೇವೆಯು ಬಳಕೆದಾರರಿಗೆ ಆನ್‌ಲೈನ್‌ ಮೂಲಕ ಸುಲಭವಾಗಿ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಒದಗಿಸಲಿದೆ. ಈ ಸೇವೆಯಲ್ಲಿ ಬಳಕೆದಾರರು ಬಿಲ್ ಪೇಮೆಂಟ್, ಹಣ ಸ್ವೀಕರಿಸುವುದು ಮತ್ತು ಕಳುಹಿಸುವುದು, ರೀಚಾರ್ಜ್, ರೀಟೈಲ್‌ ಶಾಪ್‌ಗಳ ಪೇಮೆಂಟ್ ಹಲವು ಆನ್‌ಲೈನ್‌ ಪೇಮೆಂಟ್ ಆಯ್ಕೆಗಳು ಇವೆ. ಕೆಲವೊಮ್ಮೆ ಕೋಪನ್‌ ಸಹ ಲಭ್ಯವಾಗಲಿವೆ.

Best Mobiles in India

English summary
if you are a Jio subscriber, then you can make use of these apps for utility or entertainment. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+