Just In
- 14 hrs ago
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 15 hrs ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 15 hrs ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 16 hrs ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
Don't Miss
- News
15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ರದ್ದುಗೊಳಿಸಿದ ಹೈಕೋರ್ಟ್
- Automobiles
ಅತಿಹೆಚ್ಚು ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಸಿಎನ್ಜಿ ಲಾಂಚ್
- Sports
ಆಧ್ಯಾತ್ಮದತ್ತ ವಿರಾಟ್ ಕೊಹ್ಲಿ ಒಲವು: ಟೆಸ್ಟ್ ಸರಣಿಗೆ ಮುನ್ನ ಅನುಷ್ಕಾ ಶರ್ಮಾ ಜೊತೆ ರಿಷಿಕೇಶಕ್ಕೆ ಭೇಟಿ
- Movies
ಕೆಜಿಎಫ್ to ಕಾಂತಾರ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 100 ಕೋಟಿ ಕ್ಲಬ್ ಸೇರಿರುವ 7 ಚಿತ್ರಗಳಿವು!
- Lifestyle
Horoscope Today 31 Jan 2023: ಮಂಗಳವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
Budget 2023 Live: ಕೇಂದ್ರ ಬಜೆಟ್ನ ಲೈವ್ ಅಪ್ಡೇಟ್ಸ್ ಇಲ್ಲಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ : ಸ್ಮಾರ್ಟ್‌ಫೋನ್ ಖರೀದಿಗೆ ಬೆಸ್ಟ್ ತಾಣ!
ದಸರಾ, ದೀಪಾವಳಿ ಹಬ್ಬದ ಆಗಮಿಸುತ್ತಿರುವ ಬೆನ್ನೇಲ್ಲೇ ಇದೀಗ ಗ್ರಾಹಕರನ್ನು ಸೆಳೆಯಲು ಮಾರುಕಟ್ಟೆಯಲ್ಲಿ ಆಫರ್‌ಗಳ ಅಬ್ಬರ ಶುರುವಾಗಿದೆ. ಇ ಕಾಮರ್ಸ್ ತಾಣಗಳ ಸಹ ಭರ್ಜರಿ ರಿಯಾಯಿತಿಗಳನ್ನು ಈಗಾಗಲೇ ಘೋಷಿಸಿದ್ದು, ಇ ಶಾಪಿಂಗ್ ಪ್ರಿಯರಂತೂ ಈಗಾಗಲೇ ಇ ಕಾಮರ್ಸ್‌ಗಳತ್ತ ಮುಖ ಮಾಡಿದ್ದಾರೆ. ಆದರೆ ನೀವೆನಾದರೂ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲ್ಯಾನ್ ಮಾಡಿದ್ದರೇ ಅದಕ್ಕೆ ಇದುವೇ ರೈಟ್ ಟೈಮ್ ಎನ್ನಬಹದು.

ಹೌದು, ಇ ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್ ಆಯೋಜಿಸಿರುವ 'ದಿ ಬಿಗ್ ಬಿಲಿಯನ್ ಡೇ ಸೇಲ್' ಇದೇ ಸೆಪ್ಟೆಂಬರ್ 29ರಂದು ಆರಂಭವಾಗಲಿದ್ದು, ಇದೇ ಅಕ್ಟೋಬರ್ 4ರ ವರೆಗೂ ಇರಲಿದೆ. ಒಟ್ಟು ಈ ಆರು ದಿನಗಳ ಸೇಲ್ ಮೇಳವು ಶಾಪಿಂಗ್ ಪ್ರಿಯರಿಗೆ ಜಾತ್ರೆಯ ಸಡಗರ ನೀಡಲಿದ್ದು, ಮೇಳದಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಕ್ಯಾಮೆರಾ, ಶೂ, ಬುಕ್ಸ್, ಸೇರಿದಂತೆ ಎಲ್ಲ ಬಗೆಯ ವಸ್ತುಗಳು ರಿಯಾಯಿತಿ ಬೆಲೆಯಲ್ಲಿ ಸಿಗಲಿವೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಮೇಳದಲ್ಲಿ ಗ್ಯಾಜೆಟ್‌ಗಳಿಗೆ ಅತ್ಯುತ್ತಮ ಆಫರ್ ನೀಡಲಾಗುತ್ತಿದ್ದು, ಇದರೊಂದಿಗೆ ವಿಶೇಷ ಕೊಡುಗೆಗಳು ಮತ್ತು ಎಕ್ಸ್‌ಚೇಂಜ್ ರಿಯಾಯಿತಿಗಳು ಸಹ ಗ್ರಾಹಕರಿಗೆ ಲಭ್ಯವಾಗಲಿವೆ. ಇಂತಹ ಆಫರ್‌ಗಳು ಆಫ್‌ಲೈನ್ ಸ್ಟೋರ್‌ಗಳಲ್ಲಿಯೂ ಸಿಗುವುದಿಲ್ಲ. ಹಾಗಾದರೇ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಮೇಳ ಇರುವ ಆಫರ್‌ಗಳ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಮುಂದೆ ನೋಡೋಣ ಬನ್ನಿರಿ.

ಪ್ರೊಡಕ್ಟ್ ಎಕ್ಸ್‌ಚೇಂಜ್
ಗ್ರಾಹಕರ ಕುತೂಹಲ ಹೆಚ್ಚಿಸಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಮೇಳವು ಶುರುವಾಗಲು ಕೆಲವೇ ದಿನ ಬಾಕಿ ಇದೆ. ಸ್ಮಾರ್ಟ್‌ಫೋನ್ ಖರೀದಿಸುವರಿಗೆ ಬೆಸ್ಟ್ ಡೀಲ್ ಸಿಗಲಿದ್ದು, ಜೊತೆಗೆ ಹಳೆ ಸ್ಮಾರ್ಟ್‌ಫೋನ್ ಎಕ್ಸ್‌ಚೇಂಜ್ ಮೇಲೆ ಅತ್ಯುತ್ತಮ ಡಿಸ್ಕೌಂಟ್ ಸಹ ದೊರೆಯಲಿದೆ. ಮಾರುಕಟ್ಟೆಯಲ್ಲಿರುವ ಎಕ್ಸ್‌ಚೇಂಜ್ ಬೆಲೆಯ ಜೊತೆಗೆ ಹೆಚ್ಚುವರಿಯಾಗಿ 2000ರೂ.ಗಳ ಎಕ್ಸ್‌ಚೇಂಜ್ ಕೊಡುಗೆ ನೀಡಲಿದೆ.

ಫೋನ್ ಪ್ರೊಟೆಕ್ಷನ್-ಫೆಸ್ಟಿವಲ್ ಎಡಿಷನ್
ಸ್ಮಾರ್ಟ್‌ಫೋನ್ ಖರೀದಿಸುವುದಕ್ಕೆ ಇದು ಸಕಾಲ ಎನ್ನುವುದು ಈಗಾಗಲೇ ಗೊತ್ತಿರುವ ಸಂಗತಿ. ಆದರೆ ಸ್ಮಾರ್ಟ್‌ಫೋನ್ ಖರೀದಿಯ ಜೊತೆಗೆ ಖರೀದಿಸಿದ ಸ್ಮಾರ್ಟ್‌ಫೋನ್‌ಗೆ ಪ್ರೊಟೆಕ್ಷನ್ ಆಯ್ಕೆಗಳನ್ನು ನೀಡಲಿದೆ. ಆಕ್ಸಿಡೆಂಟ್ ಡ್ರಾಪ್ಸ್, ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಸಮಸ್ಯೆಗಳು ಕಂಡುಬಂದರೇ ಫ್ಲಿಪ್‌ಕಾರ್ಟ್ ವತಿಯಿಂದ ಸರ್ವೀಸ್ ಲಭ್ಯವಿದ್ದು, ಸಂಸ್ಥೆಯ ಪ್ರತಿನಿಧಿ ಮನೆಗೆ ಬಂದು ಸ್ಮಾರ್ಟ್‌ಫೋನ್ ತೆಗೆದುಕೊಂಡು ಸರ್ವೀಸ್ ಮಾಡಿಸಿ ಹಿಂದಿರುಗಿಸುವ ಸೇವೆ ಲಭ್ಯವಾಗಲಿದೆ.

ಫ್ಲಿಪ್‌ಕಾರ್ಟ್ ಕ್ರೆಡಿಟ್
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವವರಾಗಿದ್ದು, ಆದರೆ ನಿಮ್ಮ ಬಳಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇಲ್ಲದಿದ್ದರೇ ಚಿಂತೆಬೇಡ. ಏಕೆಂದರೇ ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಸುಮಾರು 1ಲಕ್ಷದ ವರೆಗೂ ಕ್ರೆಡಿಟ್ ಸೌಲಭ್ಯವನ್ನು ಫ್ಲಿಪ್‌ಕಾರ್ಟ್ ನೀಡುವುದಾಗಿ ತಿಳಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಕೆವೈಸಿ ದಾಖಲೆಗಳನ್ನು ಪಡೆದುಕೊಳ್ಳುತ್ತದೆ.

ಕುತೂಹಲ ಮೂಡಿಸಿದ ಬಿಗ್ ಡೀಲ್ಸ್
ಬಿಗ್ ಬಿಲಿಯನ್ ಡೇ ಸೇಲ್ ಮೇಳದಲ್ಲಿ ಹಲವು ಅನುಕೂಲಗಳನ್ನು ತಿಳಿಸಿರುವ ಫ್ಲಿಪ್ಲ್‌ಕಾರ್ಟ್, ಕೆಲವು ಆಯ್ದ್ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಿದೆ. ಇತ್ತೀಚಿಗೆ ಬಿಡುಗಡೆ ಆಗಿರುವ ಸ್ಮಾರ್ಟ್‌ಫೋನ್‌ಗಳಿಗೂ ಭರ್ಜರಿ ಡಿಸ್ಕೌಂಟ್ ಘೋಷಿಸಿದ್ದು, ಗ್ರಾಹಕರ ಕುತೂಹಲ ಇಮ್ಮಡಿಗೊಳಿಸಿದೆ. ಹಾಗಾದರೇ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಬೆಸ್ಟ್ ಡೀಲ್ ಇದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ರಿಯಲ್ ಮಿ 5 ಮತ್ತು ರಿಯಲ್ ಮಿ 5 ಪ್ರೊ
ರಿಯಲ್ ಮಿ ಕಂಪನಿಯ ಇತ್ತೀಚಿನ ರಿಯಲ್ ಮಿ 5 ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆಯು 10,999ರೂ.ಗಳಾಗಿದೆ. ಆದರೆ ಈ ಬಿಗ್ ಬಿಲಿಯನ್ ಸೇಲ್ ಮೇಳದಲ್ಲಿ ಕೇವಲ 8,999ರೂ,ಗಳಿಗೆ ಸಿಗಲಿದೆ. ಈ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್ ಹೊಂದಿದ್ದು, ಬಿಗ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಕ್ವಾಡ್ ಕ್ಯಾಮೆರಾ ಮತ್ತು 5000mAh ಬ್ಯಾಟರಿ ಪ್ಲಸ್ ಪಾಯಿಂಟ್ ಆಗಿದೆ.
ಹಾಗೆಯೇ ರಿಯಲ್ ಮಿ 5 ಪ್ರೊ ಸ್ಮಾರ್ಟ್‌ಫೋನಗೂ ಸಹ ಡಿಸ್ಕೌಂಟ್ ನೀಡಲಾಗಿದ್ದು, 12,999ರೂ.ಗಳಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಇದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಹೊಂದಿದೆ. 14,999ರೂ.ಗಳಿಗೆ ಈ ಫೋನ್ ಲಾಂಚ್ ಆಗಿತ್ತು. ಬಿಗ್ ಬಿಲಿಯನ್ ಸೇಲ್ ಪ್ರಯುಕ್ತ ಇದೀಗ ರಿಯಾಯಿತಿ ದರದಲ್ಲಿ ದೊರೆಯಲಿದೆ.

ರೆಡ್ಮಿ ನೋಟ್ 7 ಪ್ರೊ
ಶಿಯೋಮಿಯ ಜನಪ್ರಿಯ ರೆಡ್ಮಿ ನೋಟ್ 7 ಪ್ರೊ ಸ್ಮಾರ್ಟ್‌ಫೋನ್ 48ಎಂಪಿ ಕ್ಯಾಮೆರಾ ವಿಶೇಷವನ್ನು ಪಡೆದಿದ್ದು, ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. 6.3 ಪೂರ್ಣ ಹೆಚ್‌ಡಿ ಪ್ಲಸ್ ಮತ್ತು 4000mAh ಬ್ಯಾಟರಿ ಶಕ್ತಿ ಹೊಂದಿದೆ. 15,999ರೂ.ಗಳಿಗೆ ಈ ಸ್ಮಾರ್ಟ್‌ಫೋನ್ ಲಾಂಚ್ ಆಗಿತ್ತು. ಆದರೆ ಈ ಫೋನಿಗ ಆಫರ್‌ನಲ್ಲಿಗ 10,999ರೂ.ಗಳಿಗೆ ಲಭ್ಯವಾಗಲಿದೆ.
ರೆಡ್ಮಿ ನೋಟ್ 7S
11,999ರೂ.ಗಳಿಗೆ ಬಿಡುಗಡೆ ಆಗಿದ್ದ, ರೆಡ್ಮಿಯ ನೋಟ್ 7S ಸ್ಮಾರ್ಟ್‌ಫೋನ್ ಅನ್ನು ಇದೀಗ ರಿಯಾಯಿತಿಯಲ್ಲಿ ಕೇವಲ 8,999ರೂ.ಗಳಿಗೆ ಖರೀದಿಸಬಹುದಾಗಿದೆ. ಹಾಗೆಯೇ ಇತ್ತೀಚಿಗೆ ಬಿಡುಗಡೆ ಆಗಿರುವ ಹೊಸ ರೆಡ್ಮಿ ಕೆ20 ಮತ್ತು ರೆಡ್ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್‌ಗಳು ಡಿಸ್ಕೌಂಟ್ ಪಡೆದುಕೊಂಡಿದ್ದು, ಕ್ರಮವಾಗಿ 19,999ರೂ ಮತ್ತು 24,999ರೂ.ಗಳಿಗೆ ದೊರೆಯಲಿದೆ.

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ಆಯ್ದ ಸ್ಯಾಮ್‌ಸಂಗ್ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಿಗೆ ಶೇ.50% ಡಿಸ್ಕೌಂಟ್ ದೊರೆಯಲಿದೆ. ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್9 ಮತ್ತು ಗ್ಯಾಲ್ಯಾಕ್ಸಿ ಎಸ್9 ಪ್ಲಸ್ ಅತ್ಯುತ್ತಮ ರಿಯಾಯಿತಿ ನೀಡಿದ್ದು, ಇವುಗಳು ಕ್ರಮವಾಗಿ 29,999ರೂ ಮತ್ತು 34,999ರೂ.ಗಳ ಪ್ರೈಸ್‌ಟ್ಯಾಗ್ ಹೊಂದಿವೆ. ಹಾಗೆಯೇ ಮಿಡ್‌ರೇಂಜ್‌ನಲ್ಲಿ ಗ್ಯಾಲ್ಯಾಕ್ಸಿ ಎ50 ಸ್ಮಾರ್ಟ್‌ಫೋನ್ 16,999ರೂ.ಗಳಿಗೆ ಲಭ್ಯವಾಗಲಿದೆ.

ವಿವೋ ಸ್ಮಾರ್ಟ್‌ಫೋನ್ಸ್
ವಿವೋದ ಹೊಸ 'ವಿವೋ Z1 ಪ್ರೊ' ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, 4GB RAM ಮತ್ತು 64GB ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. 14,990ರೂ.ಗಳಿಗೆ ಬಿಡುಗಡೆ ಆಗಿದ್ದ, ಈ ಸ್ಮಾರ್ಟ್‌ಫೋನ್ ಇದೀಗ ಆಫರ್‌ನಲ್ಲಿ 12,990ರೂ.ಗಳಿಗೆ ದೊರೆಯಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಬೆಸ್ಟ್ ಡೀಲ್
ಹಬ್ಬದ ಪ್ರಯುಕ್ತ ಬಹುತೇಕ ಎಲ್ಲ ಇ ಕಾಮರ್ಸ್ ತಾಣಗಳು ಆಫರ್ ಘೋಷಿಸಿದ್ದು, ಆದರೆ ಫ್ಲಿಪ್‌ಕಾರ್ಟ್‌ನ ಡೀಲ್‌ಗಳು ಬೆಸ್ಟ್ ಎನಿಸಲಿವೆ. ಫ್ಲಿಪ್‌ಕಾರ್ಟ್ ತಾಣದಲ್ಲಿ ಸ್ಮಾರ್ಟ್ಫೋನ್‌ಗಳ ಶ್ರೇಣಿ ಲಭ್ಯವಿದ್ದು, ಗ್ರಾಹಕರಿಗೆ ಹೆಚ್ಚಿನ ಆಯ್ಕೆ ದೊರೆಯಲಿದೆ. ಸದ್ಯ ಫ್ಲಿಪ್‌ಕಾರ್ಟ್ ತಾಣ ಸ್ಮಾರ್ಟ್‌ಫೋನ್ ಖರೀದಿಗೆ ಅತ್ಯುತ್ತಮ ಆನ್‌ಲೈನ್ ಫ್ಲಾಟ್‌ಪಾರ್ಮ್ ಆಗಿ ಗುರುತಿಸಿಕೊಂಡಿದೆ. ಅದರಲ್ಲಿಯೂ ಮಿಡ್‌ರೇಂಜ್ ಬೆಲೆಯ ಫೋನ್‌ಗಳಲ್ಲಿ ಹೆಚ್ಚಿನ ಮಾರಾಟ ಕಂಡಿದೆ.

ಫೋನ್ ಲಾಂಚ್‌ಗೂ, ಫ್ಲಿಪ್‌ಕಾರ್ಟ್ ತಾಣದ ಆಯ್ಕೆ
ರಿಯಲ್ ಮಿ, ಶಿಯೋಮಿ, ಗೂಗಲ್, ವಿವೋ, ಮೊಟೊರೊಲಾ, ಆಸೂಸ್, ನೂಬಿಯಾ ಮತ್ತು ಒಪ್ಪೊ ಸೇರಿದಂತೆ ಹಲವು ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿಗಳು ತಮ್ಮ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲು ಫ್ಲಿಪ್‌ಕಾರ್ಟ್ ತಾಣವನ್ನು ಆಯ್ಕೆ ಮಾಡಿಕೊಂಡಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470