ಐಫೋನ್ X ಇತಿಹಾಸವಾಯ್ತು, ಮುಂದಿನ ಐಫೋನ್‌ನಲ್ಲಿ ಇರಲಿದೆ ಭವಿಷ್ಯದ ತಂತ್ರಜ್ಞಾನ..! ಯಾವುದು..?

|

ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಅಧಿಪತಿ ಎಂದೇ ಬಿಂಬಿತವಾಗಿರುವ ಆಪಲ್ ಕಂಪನಿ ಈಗಾಗಲೇ ತನ್ನ ಬಳಕೆದಾರರಿಗೆ ಹೊಸದೊಂದು ಐಪೋನ್ ಅನ್ನು 10 ನೇ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆಗೊಳಿಸಿದೆ. ಐಫೋನ್ X ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ ಹೊಸ ಮಾರಾಟದ ದಾಖಲೆಯನ್ನು ನಿರ್ಮಿಸಿದೆ.

 ಐಫೋನ್ X ಇತಿಹಾಸವಾಯ್ತು, ಮುಂದಿನ ಐಫೋನ್‌ನಲ್ಲಿ ಇರಲಿದೆ ಭವಿಷ್ಯದ ತಂತ್ರಜ್ಞಾನ..!

ಐಫೋನ್ X ಆಪಲ್‌ ಬಿಡುಗಡೆ ಮಾಡಿರುವ ಅತೀ ದುಬಾರಿ ಫೋನ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಸದ್ಯ ಇದಕ್ಕಿಂತ ವಿಭಿನ್ನ ಐಫೋನ್ ನಿರ್ಮಾಣಕ್ಕೆ ಆಪಲ್ ಮುಂದಾಗಿದೆ ಎನ್ನವ ವಿಚಾರವು ತಿಳಿದುಬಂದಿದೆ.

ಓದಿರಿ: ಬೆಂಗಳೂರಲ್ಲಿ ರೂ.20ಕ್ಕೆ 1 GB ಡೇಟಾ: 4G ವೇಗಕ್ಕಿಂತ ಜಾಸ್ತಿ, ಸಿಮ್‌ಕಾರ್ಡ್ ಬೇಕಿಲ್ಲ, ಮತ್ತೇ ಹೇಗೆ..?

ಐಫೋನ್ X ನಿರ್ಮಾಣಕ್ಕಾಗಿ ಸ್ಯಾಮ್‌ಸಂಗ್‌ನಿಂದ OLED ಡಿಸ್‌ಪ್ಲೇಯನ್ನು ಖರೀದಿಸಿದ್ದ ಆಪಲ್, ಮುಂದಿನ ಐಫೋನ್‌ಗಾಗಿ ವಿಶೇಷವಾದ ಡಿಸ್‌ಪ್ಲೇಯನ್ನು ತಾನೇ ನಿರ್ಮಿಸಲು ಮುಂದಾಗಿದ್ದು, ಈಗಾಗಲೇ ಮೈಕ್ರೋ LED ಡಿಸ್‌ಪ್ಲೇಯನ್ನು ಅಭಿವೃದ್ಧಿ ಪಡಿಸುವುದಾಗಿ ಆಪಲ್ ಘೋಷಣೆ ಮಾಡಿದ್ದು, 2018 ಕೊನೆಯ ಭಾಗದಲ್ಲಿ ಲಾಂಚ್ ಆಗಲಿರುವ ಮುಂಬರುವ ಐಪೋನ್ ನಲ್ಲಿ ನಾವು ಮೈಕ್ರೋ LED ಡಿಸ್‌ಪ್ಲೇಯನ್ನು ನಿರೀಕ್ಷಿಸಬಹುದಾಗಿದೆ.

ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಇತಿಹಾಸವೇ ಬದಲಾವಣೆ:

ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಇತಿಹಾಸವೇ ಬದಲಾವಣೆ:

ಈಗಾಗಲೇ OLED ಡಿಸ್‌ಪ್ಲೇಯನ್ನು ಅಭಿವೃದ್ಧಿ ಮಾಡಿರುವ ಸ್ಯಾಮ್‌ಸಂಗ್ ಡಿಸ್‌ಪ್ಲೇ ಲೋಕದ ಅಧಿಪತ್ಯವನ್ನು ಅಲಂಕರಿಸಿದೆ. ಇದರಿಂದಾಗಿ ಆಪಲ್ ತನ್ನ ದೊಡ್ಡದೊಂದು ಟೀಮ್‌ ಅನ್ನು ಮೈಕ್ರೋ LED ಡಿಸ್‌ಪ್ಲೇ ಅಭಿವೃದ್ಧಿ ಪಡಿಸಲು ಕಟ್ಟಿದೆ ಎನ್ನಲಾಗಿದೆ. ಈಗಾಗಲೇ ತೈವಾನ್‌ನಲ್ಲಿ ಈ ಮೈಕ್ರೋ LED ಡಿಸ್‌ಪ್ಲೇ ಅಭಿವೃದ್ಧಿ ಕಾರ್ಯವು ಆರಂಭವಾಗಿದೆ.

ಮತ್ತಷ್ಟು ಹೆಚ್ಚಲಿದೆ ಗುಣಮಟ್ಟ:

ಮತ್ತಷ್ಟು ಹೆಚ್ಚಲಿದೆ ಗುಣಮಟ್ಟ:

ಮೈಕ್ರೋ LED ಡಿಸ್‌ಪ್ಲೇಯು ಉತ್ತಮ ಗುಣಮಟ್ಟವನ್ನು ಹೊಂದಿರಲಿದೆ ಎನ್ನಲಾಗಿದೆ. ಮೈಕ್ರೋ LED ಡಿಸ್‌ಪ್ಲೇ ಕಡಿಮೆ ಶಕ್ತಿಯನ್ನು ಬೇಡಲಿದ್ದು, ಹೆಚ್ಚಿನ ಕ್ವಾಲಿಟಿಯ ಚಿತ್ರಗಳನ್ನು ಪ್ರದರ್ಶಿಸಲಿದೆ. ಇದರಿಂದ ವಿಡಿಯೋ-ಗೇಮಿಂಗ್ ಅತ್ಯುತ್ತಮವಾಗಿ ಮೂಡಿ ಬರಲಿದೆ.

ಮುಂದಿನ ಐಫೋನ್ ವಿಶೇಷತೆ :

ಮುಂದಿನ ಐಫೋನ್ ವಿಶೇಷತೆ :

ಮೈಕ್ರೋ LED ಡಿಸ್‌ಪ್ಲೇಯು ಮುಂದಿನ ಐಫೋನ್ ವಿಶೇಷತೆಗಳಲ್ಲಿ ಒಂದಾಗಲಿದೆ. ಆಪಲ್ ಪ್ರತಿ ಐಪೋನಿನಲ್ಲಿಯೂ ಒಂದಲ್ಲ ಒಂದು ವಿಶೇಷತೆಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಇದೇ ಮಾದರಿಯಲ್ಲಿ ಮುಂದಿನ ಐಫೋನ್ ಮೈಕ್ರೋ LED ಡಿಸ್‌ಪ್ಲೇಯೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿದೆ.

ಸ್ಯಾಮ್‌ಸಂಗ್ ಹಿಡಿತ ಕಡಿಮೆ:

ಸ್ಯಾಮ್‌ಸಂಗ್ ಹಿಡಿತ ಕಡಿಮೆ:

ಈ ಹಿಂದೆ ಐಫೋನ್ X ನಿರ್ಮಾಣದ ಸಂದರ್ಭದಲ್ಲಿ ಆಪಲ್, ಸ್ಯಾಮ್‌ಸಂಗ್‌ನಿಂದ OLED ಡಿಸ್‌ಪ್ಲೇಗಳನ್ನು ಖರೀದಿ ಮಾಡಿತ್ತು, ಈ ಹಿನ್ನಲೆಯಲ್ಲಿ ಸ್ಯಾಮ್‌ ಸಂಗ್ ಹಿಡಿತದಿಂದ ತಪ್ಪಿಸಿಕೊಳ್ಳಲು ಹೊಸ ಮೈಕ್ರೋ LED ಡಿಸ್‌ಪ್ಲೇ ನಿರ್ಮಾಣವನ್ನು ಮಾಡಲಿದೆ.

Best Mobiles in India

English summary
Forget the iPhone X, Apple Already Working on microLED iPhone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X