ಚಾರ್ಜಿಂಗ್‌ ವೇಳೆ ಸ್ಯಾಮ್‌ಸಂಗ್‌ ಫೋನಿಗೆ ಬೆಂಕಿ

Posted By:

ವಾರಂಟಿ ಇರುವ ಸ್ಮಾರ್ಟ್‌ಫೋನ್‌ ಹಾಳಾದ್ರೆ ಅದನ್ನು ಕಂಪೆನಿಗಳು ಸರಿ ಮಾಡಿ ಕೊಡಲೇಬೇಕು ಎಂಬ ನಿಯಮವಿದೆ.ಆದರೆ ಕಂಪೆನಿ ಸರಿ ಮಾಡಿಕೊಡದೇ ಗ್ರಾಹಕರನ್ನೇ ದೂರಿದ್ರೆ ಏನು ಮಾಡಬೇಕು? ಬಹಳಷ್ಟು ಗ್ರಾಹಕರಿಗೆ ಈ ರೀತಿಯ ಸಮಸ್ಯೆ ಆಗಿರುತ್ತದೆ. ಆದರೆ ಕೆನಡಾದ ಬಳಕೆದಾರ ಹಾಳಾಗಿರುವ ಸ್ಮಾರ್ಟ್‌ಫೋನಿನ ವಿಡಿಯೋವನ್ನು ಯು ಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿ ಸ್ಯಾಮ್‌ಸಂಗ್‌ ಕೆಟ್ಟ ಸೇವೆಯನ್ನು ವಿವರಿಸುವ ಮೂಲಕ ಸ್ಯಾಮ್‌ಸಂಗ್‌ಗೆ ಬಿಸಿ ಮುಟ್ಟಿಸಿದ್ದಾನೆ.

ಕೆನಡಾದ ಗ್ರಾಹಕ ಗೊಸ್ಟ್ಲಿರಿಚ್‌(ghostlyrich) ಹೊಸ ಗೆಲಾಕ್ಸಿ ಎಸ್‌4 ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಬೆಂಕಿ ಹೊತ್ತಿಕೊಂಡು ಚಾರ್ಜರ್‌ ಪಾಯಿಂಟ್‌ ಮತ್ತು ಚಾರ್ಜರ್‌ ಸುಟ್ಟು ಹೋಗಿತ್ತು. ಹೇಗೂ ಸ್ಮಾರ್ಟ್‌ಫೋನಿಗೆ ವಾರಂಟಿ ಇದೆ ಎಂದು ಸ್ಯಾಮ್‌ಸಂಗ್‌ ಗ್ರಾಹಕ ಸೇವಾ ಮಳಿಗೆಗೆ ಭೇಟಿ ನೀಡಿ ಹಳೇ ಫೋನ್‌ ಬದಲಾಯಿಸಿ ಹೊಸ ಫೋನ್‌ ನೀಡಿ ಎಂದರೆ ಅವರು ಕ್ಯಾರೇ ಮಾಡಿಲ್ಲವಂತೆ. ಸ್ಯಾಮ್‌ಸಂಗ್‌ ಸಿಬ್ಬಂದಿಗಳ ಕೆಟ್ಟ ನಡವಳಿಕೆಗೆ ಬೇಸತ್ತು ಗೊಸ್ಟ್ಲಿರಿಚ್‌ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಹೇಗೆ ಸುಟ್ಟು ಹೋಯಿತು ಎಂಬುದನ್ನು ವಿಡಿಯೋ ಮಾಡಿ ವಿವರಿಸಿ, ಆ ವಿಡಿಯೋವನ್ನು ಯೂ ಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾನೆ.

ವಿಡಿಯೋ ಯೂಟ್ಯೂಬ್‌‌ಗೆ ಅಪ್‌ಲೋಡ್‌ ಅಗಿದ್ದು ಡಿಸೆಂಬರ್‌ 2ರಂದು. ಅಪ್‌ಲೋಡ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಶೇರ್‌ ಅಗುತ್ತಿದ್ದಂತೆ ಸ್ಯಾಮ್‌ಸಂಗ್‌‌ ಬಳಕೆದಾರನಿಗೆ ಒಂದು ಪತ್ರ ಬರೆದು ಅಪ್‌ಲೋಡ್‌ ಮಾಡಿರುವ ವಿಡಿಯೋವನ್ನು ತೆಗೆದಲ್ಲಿ ಹೊಸ ಎಸ್‌4 ಸ್ಮಾರ್ಟ್‌ಫೋನ್‌ ನೀಡುವುದಾಗಿ ಹೇಳಿದೆ.

ಆದರೆ ಗೊಸ್ಟ್ಲಿರಿಚ್‌ ಸ್ಯಾಮ್‌ಸಂಗ್‌ನ ಷರತ್ತಿಗೆ ಬಗ್ಗದೇ ಆ ಪತ್ರದಲ್ಲಿ ಏನಿದೆ ಎಂಬುದನ್ನು ಮತ್ತೊಂದು ವಿಡಿಯೋ ಮಾಡಿ ಯೂ ಟ್ಯೂಬ್‌ನಲ್ಲಿ ವಿವರಿಸಿದ್ದಾನೆ. ಅಷ್ಟೇ ಅಲ್ಲದೇ ಸ್ಯಾಮ್‌ಸಂಗ್‌‌ನ ಹೊಸ ಷರತ್ತಿನ ಪತ್ರವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾನೆ. ಈಗಾಗಲೇ ಈ ಎರಡು ವಿಡಿಯೋಗಳು ಯೂ ಟ್ಯೂಬ್‌ನಲ್ಲಿ ವೈರಲ್‌ ಆಗಿದ್ದು ಮೊದಲ ವಿಡಿಯೋವನ್ನು ಮೂರು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದರೆ, ಸ್ಯಾಮ್‌ಸಂಗ್‌ ಪತ್ರದ ವಿಡಿಯೋವನ್ನು ಆರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಸೋನಿ ದೊಡ್ಡ ಫ್ಯಾಬ್ಲೆಟ್‌ನಿಂದ ಗ್ರಾಹಕರಿಗೆ ಕಿರಿಕಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಚಾರ್ಜಿಂಗ್‌ ವೇಳೆ ಸ್ಯಾಮ್‌ಸಂಗ್‌ ಫೋನಿಗೆ ಬೆಂಕಿ

ಚಾರ್ಜಿಂಗ್‌ ವೇಳೆ ಸ್ಯಾಮ್‌ಸಂಗ್‌ ಫೋನಿಗೆ ಬೆಂಕಿ

ಬೆಂಕಿಗೆ ಸುಟ್ಟುಹೋಗಿರುವ ಚಾರ್ಜರ್‌ ಪಾಯಿಂಟ್‌

 ಚಾರ್ಜಿಂಗ್‌ ವೇಳೆ ಸುಟ್ಟು ಹೋದ ಸ್ಯಾಮ್‌ಸಂಗ್‌ ಫೋನ್

ಚಾರ್ಜಿಂಗ್‌ ವೇಳೆ ಸುಟ್ಟು ಹೋದ ಸ್ಯಾಮ್‌ಸಂಗ್‌ ಫೋನ್

ಬೆಂಕಿಗೆ ಸುಟ್ಟುಹೋಗಿರುವ ಚಾರ್ಜರ್‌

 ಚಾರ್ಜಿಂಗ್‌ ವೇಳೆ ಸುಟ್ಟು ಹೋದ ಸ್ಯಾಮ್‌ಸಂಗ್‌ ಫೋನ್

ಚಾರ್ಜಿಂಗ್‌ ವೇಳೆ ಸುಟ್ಟು ಹೋದ ಸ್ಯಾಮ್‌ಸಂಗ್‌ ಫೋನ್

ಬೆಂಕಿಗೆ ಸುಟ್ಟುಹೋಗಿರುವ ಚಾರ್ಜರ್‌ ಪಾಯಿಂಟ್‌

ಚಾರ್ಜಿಂಗ್‌ ವೇಳೆ ಸುಟ್ಟು ಹೋದ ಸ್ಯಾಮ್‌ಸಂಗ್‌ ಫೋನ್

ವಿಡಿಯೋ ವೀಕ್ಷಿಸಿ

ಚಾರ್ಜಿಂಗ್‌ ವೇಳೆ ಸುಟ್ಟು ಹೋದ ಸ್ಯಾಮ್‌ಸಂಗ್‌ ಫೋನ್

ಸ್ಯಾಮ್‌ಸಂಗ್‌ ಪತ್ರವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ: www.pastebin.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot