Just In
Don't Miss
- News
'ಈ ಬಾರಿ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ' ಕೊಡಿಶ್ರೀಗಳ ರಾಜಕೀಯ ಭವಿಷ್ಯ
- Sports
ಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿ
- Automobiles
ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!
- Movies
Lakshana Seria: ಶ್ವೇತಾಗೆ ಎಚ್ಚರಿಕೆ ಕೊಟ್ಟ ಭೂಪತಿ, ನಕ್ಷತ್ರ ಜೊತೆ ಚೆಲ್ಲಾಟ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಿಯೋನಿ M2017 ಸ್ಮಾರ್ಟ್‌ಪೋನ್‌ನಲ್ಲಿದೆ 7000mAh ಬ್ಯಾಟರಿ, ಡುಯಲ್ ಕ್ಯಾಮೆರಾ ಇನ್ನು ಹಲವು ವಿಶೇಷತೆ
ಚೀನಾ ಮೂಲದ ಮೊಬೈಲ್ ತಯಾರಿಕ ಕಂಪನಿ ಜಿಯೋನಿ ಈ ಹಿಂದೆಯೇ 2016ರ ಅಂತ್ಯದ ವೇಳೆಗೆ M ಸರಣಿಯ ಸ್ಮಾರ್ಟ್‌ಪೋನುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಜಿಯೋನಿ M2017 ಎಂಬ ಫವರ್‌ಪುಲ್ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಪೋನ್ ಒಂದನ್ನು ಬಿಡುಗಡೆ ಮಾಡಿದೆ.

ರೆಡ್‌ಮಿ ನೋಟ್ 4 ಮತ್ತು ಮೊಟೋ G4 ಪ್ಲಸ್: ಎರಡರಲ್ಲಿ ಯಾವುದು ಬೆಸ್ಟ್..!
ಮೂಲಗಳ ಪ್ರಕಾರ ಕಳೆದ ತಿಂಗಳಿನಲ್ಲಿ ಚೀನಾದಲ್ಲಿ ಪರವಾನಗಿ ಪಡೆದಿದ್ದ ಜಿಯೋನಿ M2017 ಸ್ಮಾರ್ಟ್‌ಪೋನ್ ಸದ್ಯ ಅಲ್ಲಿನ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. 7000mAh ಬ್ಯಾಟರಿ ಹೊಂದಿರುವ ಈ ಸ್ಮಾರ್ಟ್‌ಪೊನ್ ಬೇರೆ ಎಲ್ಲಾ ಪೋನ್ ಗಳಿಗೆ ಸೆಡ್ಡು ಹೊಡೆಯವ ಲಕ್ಷಣ ನೀಡಿದೆ. ಇದೊಂದೆ ಕಾರಣಕ್ಕೆ ಈ ಪೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದರು ಆಶ್ಚರ್ಯಪಡಬೇಕಾಗಿಲ್ಲ.

ಜಿಯೋನಿ M2017 ಹೈಲೈಟ್: ದೀರ್ಘಕಾಲದ ಬ್ಯಾಟರಿ ಬಾಳಿಕೆ
ಸ್ಮಾರ್ಟ್‌ಪೋನಿನಲ್ಲಿ ಬ್ಯಾಟರಿ ಬಾಳಿಕೆ ಕಡಿಮೆ ಎನ್ನುವ ವಾದಕ್ಕೆ ಅಪವಾದ ಎನ್ನುವಂತೆ ಜಿಯೋನಿ M2017 ಪೋನಿನಲ್ಲಿ 7000mAh ಬ್ಯಾಟರಿ ಅಳವಡಿಸಲಾಗಿದ್ದು, 3500mAh ಸಾಮಾರ್ಥ್ಯದ ಎರಡು ಬ್ಯಾಟರಿ ಈ ಪೋನಿನಲ್ಲಿದೆ. ಅಲ್ಲದೇ ಈ ಪೋನನನ್ನು ಚಾರ್ಜ್ ಮಾಡಲು Quick Charge 3.0 ಎಂಬ ಆಪ್ ಸಹ ಪೋನಿನಲ್ಲಿದೆ. ಈ ಪೋನ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 25.89 ಗಂಟೆಗಳ ಕಾಲ ನಿರಂತವಾಗಿ ವಿಡಿಯೋ ನೋಡಬಹುದು ಎಂದು ಕಂಪನಿ ತಿಳಿಸಿದೆ. ಇದಲ್ಲದೇ 915.42 ಗಂಟೆಗಳ ಸ್ಟಾಂಡ್ ಬೈ ಸಾಮಾರ್ಥ್ಯವನ್ನು ಈ ಪೋನ್ ಹೊಂದಿದೆಯಂತೆ.

ಜಿಯೋನಿ M2017 ಮತ್ತೊಂದು ವಿಶೇಷತೆ: ಡುಯಲ್ ಹಿಂಬದಿ ಕ್ಯಾಮೆರಾ
ಇದೇ ಮೊದಲ ಬಾರಿಗೆ ಜಿಯೋನಿ M2017 ಪೋನಿನಲ್ಲಿ ಹಿಂಬದಿಯಲ್ಲೇ ಎರಡು ಕ್ಯಾಮೆರಾ ಅಳವಡಿಸಲಾಗಿದೆ. 12 MP ಮತ್ತು 13 MP ಯ ಎರಡು ಕ್ಯಾಮೆರಾಗಳು ಹಿಂಬದಿಯಲ್ಲಿ ಕಾರ್ಯನಿರ್ವಹಿಸಲಿದ್ದು, 2X ಆಪ್ಟಿಕಲ್ ಜೂಮ್ ಮತ್ತು 8X ಡಿಜಿಟಲ್ ಜೂಮ್ ಹೊಂದಿವೆ. ಇಲ್ಲದೇ ಮುಂಭಾಗದಲ್ಲಿ 8 MP ಇದ್ದು, ಗುಣಮಟ್ಟದ ಸೆಲ್ಫಿ ಕ್ಲಿಕ್ಕಿಸಲು ಸಹಾಯಕಾರಿಯಾಗಿದೆ.

M2017 ಪೋನಿನಲ್ಲಿ QHD ಡಿಸ್‌ಪ್ಲೇ
ಜಿಯೋನಿ ಬಿಡುಗಡೆ ಮಾಡಿರುವ M2017 ಸ್ಮಾರ್ಟ್‌ಪೋನ್ 5.7 ಇಂಚಿನ Quad HD (1440x2560p) AMOLED ಕಾರ್ವಡ್ ಡಿಸ್‌ಪ್ಲೇ ಹೊಂದಿದೆ. ಇದರಿಂದ ಉತ್ತಮ ಗುಣಮಟ್ಟದ ವಿಡಿಯೋ ವೀಕ್ಷಣೆ ಹಿತಕರವಾಗಿರಲಿದೆ. ಉತ್ತಮ ಬ್ಯಾಟರಿ ಬಾಳಿಕೆ ಇರುವುದರಿಂದ ಸಿನಿಮಾ ವೀಕ್ಷಣೆಗೆ ಹೇಳಿ ಮಾಡಿಸಿದಂತಿದೆ.

ವೇಗ ಕಾರ್ಯಚರಣೆ: 128GB ಇಂಟರ್ನಲ್ ಮೆಮೊರಿ
1.95GHz +1.44GHz ವೇಗದ Snapdragon 653 ಪ್ರೊಸೆಸರ್ ಹೊಂದಿರುವ ಜಿಯೋನಿ M2017 ಪೋನಿನಲ್ಲಿ ವೇಗದ ಕಾರ್ಯಚರಣೆಗಾಗಿ 6GB RAM ಅಳವಡಿಸಲಾಗಿದೆ. ಅಲ್ಲದೇ ಆಂಡ್ರಾಯ್ಡ್ 6.0 ಮತ್ತು UI 3.5 ತಂತ್ರಾಂಶವನ್ನು ಹೊಂದಿದೆ. 128GB ಇಂಟರ್ನಲ್ ಮೆಮೊರಿ ಈ ಪೋನಿನಲ್ಲಿದೆ.

ಮತ್ತಿತರ ವಿಶೇಷತೆಗಳು:
155.2x77.6x10.78mm ಅಗಲ, ಉದ್ದವಿರುವ ಜಿಯೋನಿ M2017, ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಕಾರಣ 238 ಗ್ರಾಮ್ ತೂಕ ಹೊಂದಿದೆ. 4G, GPS, Bluetooth, USB Type-C, Wi-Fi ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ. ಸದ್ಯ ಬ್ಲ್ಯಾಕ್ ಅಂಡ್ ಗೋಲ್ಡ್ ಬಣ್ಣದಲ್ಲಿ ಈ ಪೋನ್ ಲಭ್ಯವಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470