ರೆಡ್‌ಮಿ ನೋಟ್ 4 ಮತ್ತು ಮೊಟೋ G4 ಪ್ಲಸ್: ಎರಡರಲ್ಲಿ ಯಾವುದು ಬೆಸ್ಟ್..!

Written By:
MOTO G4 PLUS (KANNADA)

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಪೋನ್‌ಗಳ ಹಾವಳಿ ಜಾಸ್ತಿಯಾಗಿದ್ದು, ಪ್ರಮುಖ ಮೊಬೈಲ್ ತಯಾರಕ ಕಂಪನಿಗಳು ಆರಂಭಿಕ ಬೆಲೆಯ ಸ್ಮಾರ್ಟ್‌ಪೋನ್‌ಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಹೆಚ್ಚಿನ ಗಮನಹರಿಸಿವೆ. ಹಾಗೆಯೇ ಈ ಬಾರಿ ಮೋಟರೋಲ ಕಂಪನಿಯ Moto G4 Plus ಮತ್ತು ಶ್ಯೋಮಿ ಕಂಪನಿಯ Redmi Note 4 ಪೋನ್‌ ಗಳನ್ನು ಬಿಡುಗಡೆ ಮಾಡಿವೆ.

ರೆಡ್‌ಮಿ ನೋಟ್ 4 ಮತ್ತು ಮೊಟೋ G4 ಪ್ಲಸ್: ಎರಡರಲ್ಲಿ ಯಾವುದು ಬೆಸ್ಟ್..!

950 ಮಿಲಿಯನ್ ಭಾರತೀಯರಿಗೆ ಇಂಟರ್‌ನೆಟ್ ಸಂಪರ್ಕವಿಲ್ಲವಂತೆ..

ಸದ್ಯ ರೆಡ್‌ಮಿ ನೋಟ್ 4 ಮತ್ತು ಮೊಟೋ G4 ಪ್ಲಸ್ ಪೋನ್‌ಗಳ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಎರಡು ಪೋನ್‌ಗಳು 15 ಸಾವಿರ ರೂ ಒಳಗೆ ಲಭ್ಯವಿದ್ದು, ಗ್ರಾಹಕರಿಗೆ ಎರಡು ಪೋನ್ ಗಳಲ್ಲಿ ಯಾವುದು ಉತ್ತಮ ಎಂಬುದನ್ನು ಈ ಕೆಳಗಿನ ಸ್ಲೈಡ್‌ಗಳಲ್ಲಿ ತಿಳಿಯುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ಡಿಸೈನ್:

ಡಿಸ್‌ಪ್ಲೇ ಮತ್ತು ಡಿಸೈನ್:

ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನ್ ಸಂಪೂರ್ಣ ಮೆಟಾಲಿಕ್ ಬಾಡಿಹೊಂದಿದ್ದು, ಕರ್ವಡ್ ಎಡ್ಜ್ ಸ್ಟೈಲಿನಲ್ಲಿ ವಿನ್ಯಾಸಗೊಂಡಿದೆ. ಮೊಟೋ G4 ಪ್ಲಸ್ ಮೆಟಾಲಿಕ್ ಫ್ರೈಮ್ ಹೊಂದಿದ್ದು, ರಬ್ಬರ್ ಬ್ಯಾಕ್ ಪ್ಯಾನಲ್ ಹೊಂದಿದೆ.
ಎರಡು ಪೋನಿನಲ್ಲಿರುವ ಬದಲಾವಣೆ ಎಂದರೆ ಮೊಟೋ G4 ಪ್ಲಸ್ನಲ್ಲಿ ಫಿಂಗರ್‌ಪ್ರಿಂಟ್ ಮುಂಭಾಗದಲ್ಲಿದ್ದರೆ, ನೋಟ್ 4 ನಲ್ಲಿ ಹಿಂಭಾಗದಲ್ಲಿ ಕ್ಯಾಮೆರಾ ಕಳೆಗೆ ಇದೆ. ಇನ್ನು ಎರಡು ಪೋನ್ ನಲ್ಲಿಯೂ ಉತ್ತಮ ಗುಣಮಟ್ಟದ ಡಿಸ್‌ಪ್ಲೇ ಇದ್ದು, ವಿನ್ಯಾಸ ಮತ್ತು ಡಿಸ್‌ಪ್ಲೇ ಗುಣಮಟ್ಟದಲ್ಲಿ ನೋಟ್ 4 ಒಂದು ಕೈ ಮೇಲಿದೆ.

ಕಾರ್ಯನಿರ್ವಹಣೆ:

ಕಾರ್ಯನಿರ್ವಹಣೆ:

Redmi Note 4 ಪೋನ್ 2GHz ವೇಗದ Snapdragon 625 ಪ್ರೋಸೆಸರ್ ಹೊಂದಿದ್ದರೇ, Moto G4 Plus ಪೋನ್‌ನಲ್ಲಿ 2GHz ವೇಗದ Snapdragon 617 ಪೋಸೆಸರ್ ಅಳವಡಿಸಲಾಗಿದೆ. ಇಲ್ಲಿಯೂ Redmi Note 4 ಪೋನ್ ವೇಗದ ಕಾರ್ಯ ನಿರ್ವಹಣೆ ಮಾಡಲಿದೆ. Snapdragon 625, 617 ಪೋಸೆಸರ್ ಅನ್ನು ಮೀರಿಸಲಿದೆ. ಹಾಗಾಗಿ Note 4 ಉತ್ತಮ ಕಾರ್ಯನಿರ್ವಹಣೆಯಲ್ಲೂ ಮೊದಲ ಸ್ಥಾನ ಪಡೆಯಲಿದೆ.

ಬ್ಯಾಟರಿ ಬಾಳಿಕೆ

ಬ್ಯಾಟರಿ ಬಾಳಿಕೆ

ಬ್ಯಾಟರಿ ವಿಚಾರದಲ್ಲಿಯೂ Moto G4 Plus ಹಿಂದೆ ಬಿಳುತ್ತದೆ, Redmi Note 4 ಪೋನಿನಲ್ಲಿ 4100mAh ಸಾಮಾರ್ಥ್ಯದ ಬ್ಯಾಟರಿ ಇದ್ದರೇ, Moto G4 Plusನಲ್ಲಿ 3000mAh ಬ್ಯಾಟರಿ ಇದೆ. Note 4ನ ಬ್ಯಾಟರಿ ದೀರ್ಘಕಾಲ ಬಾಳಿಕೆ ಬಂದರೆ, G4 Plus ಸ್ಪಲ್ವ ಕಮ್ಮಿ. Snapdragon 625 ಪೋಸೆಸರ್ ಜಾಸ್ತಿ ಬ್ಯಾಟರಿ ಬೇಡಿದರು ಸಹ Redmi Note 4 ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರುತ್ತಿದೆ ಈ ಹಿನ್ನಲೆಯಲ್ಲಿ ಇಲ್ಲಿಯೂ Note 4 ಉತ್ತಮವಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಕ್ಯಾಮೆರಾ ವಿಚಾರವೊಂದರಲ್ಲಿ Moto G4 Plus ಮೇಲುಗೈ ಸಾಧಿಸಿದೆ. ಈ ಪೋನಿನಲ್ಲಿ 16MP ಹಿಂಬದಿಯ ಕ್ಯಾಮೆರಾ ಇದ್ದು, LED ಫ್ಲಾಷ್ ಜೊತೆಯಲ್ಲಿ ಆಟೋ ಪೋಕಸ್ ಆಯ್ಕೆ ಸಹ ಇದೆ. ಆದರೆ Redmi Note 4 ಪೋನಿನಲ್ಲಿ 13MP ಕ್ಯಾಮೆರಾ ಇದ್ದು, LED ಫ್ಲಾಷ್ ಇದೆ. Note 4 ಕ್ಯಾಮೆರಾ ಸಹ ಉತ್ತಮವಾಗಿಯೇ ಆದರೆ G4 Plus ಕ್ಯಾಮೆರಾ ಮುಂದೆ ಸ್ಪಲ್ಪ ಕಳೆಗುಂದಿದಂತೆ ಕಾಣುತ್ತದೆ ಎಂದರೆ ತಪ್ಪಾಗುವುದಿಲ್ಲ.

ಕೊನೆ ಅಂಶ:

ಕೊನೆ ಅಂಶ:

ಕ್ಯಾಮೆರಾ ವಿಚಾರವೊಂದರಲ್ಲಿ ಹಿಂದೆ ಬಿದ್ದ Redmi Note 4 ಬೇರೆ ಎಲ್ಲಾ ವಿಚಾರದಲ್ಲಿ Moto G4 Plus ನಡುವಿನ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿದೆ ಎನ್ನಬಹುದು. ಏಕೆಂದರೆ ಇಂದಿನ ದಿನದಲ್ಲಿ ದೀರ್ಘ ಬ್ಯಾಟರಿ ಬಾಳಕೆ ಬರುವ ಪೋನ್ ಕಡೆಗೆ ಗ್ರಾಹಕರ ಒಲವು ಸಾಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಎರಡು ಪೋನ್‌ಗಳು ಉತ್ತಮವಾಗಿಯೇ ಇದೆ. Moto G4 Plus ಆಂಡ್ರಾಯ್ಡ್ ಕಾರ್ಯಚರಣೆಯಲ್ಲಿ ನಡೆದರೆ, Redmi Note 4 ಪೋನ್ MIUI ಕಾರ್ಯಚರಣೆಯಲ್ಲಿ ನಡೆಯುವುದರಿಂದ ಕೆಲವರಿಗೆ ಇದು ಇಷ್ಟವಾಗದೆ ಇರಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
On one hand, we have one of the best phones priced under Rs 15,000 Moto G4 Plus. While on the other hand, we have Redmi Note 4 which is the best. to konw more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot