ಜಿಯೋನಿ M7 ಪವರ್ ಮಾದರಿಯ ಫುಲ್‌ಸ್ಕ್ರಿನ್ ಡಿಸ್‌ಪ್ಲೇ ಬೇರೆಲ್ಲೂ ಇಲ್ಲ..!
ಭಾರತೀಯ ಮಾರುಕಟ್ಟೆಯಲ್ಲಿ ಜಿಯೋನಿ ಫೋನ್‌ಗಳು ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದೆ. ಅಲ್ಲದ ತನ್ನದೇ ಅಭಿಮಾನಿ ವೃಂದವನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಜಿಯೋನಿ ಹೊಸದೊಂದು ಸ್ಮಾರ್ಟ್‌ಪೊನ್ ಅನ್ನು ಇದೇ ನವೆಂಬರ್ 15ಕ್ಕೆ ಲಾಂಚ್ ಮಾಡಲಿದೆ ಎನ್ನಲಾಗಿದೆ.

ಓದಿರಿ: ಐಫೋನ್ X ಮೀರಿಸುವ ಆಂಡ್ರಾಯ್ಡ್ ಫೋನ್: ಬೆಲೆ ಕಡಿಮೆ, ಆಯ್ಕೆ ಅಧಿಕ
ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ 18:9 ಫುಲ್‌ಸ್ಕ್ರಿನ್ ವಿನ್ಯಾಸದಲ್ಲಿಯೇ ಈ ಫೋನ್ ಲಾಂಚ್ ಆಗಲಿದ್ದು, ಮಧ್ಯಮ ಬೆಲೆಯಲ್ಲಿ M7 ಪವರ್ ಸ್ಮಾರ್ಟ್‌ಫೋನ್ ಕಾಣಿಸಿಕೊಳ್ಳಲಿದೆ. ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಫೋನ್ ಲಾಂಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

5000mAh ಬ್ಯಾಟರಿ:
ಟಾಪ್ ಎಂಡ್ ಫೋನ್‌ಗಳಲ್ಲಿ ಹೆಚ್ಚಿನ ಆಯ್ಕೆಗಳು ಇರುವುದರಿಂದ ಹೆಚ್ಚಿನ ಗಾತ್ರದ ಬ್ಯಾಟರಿ ಅವಶ್ಯಕತೆ ಇರುತ್ತದೆ. ಆದರ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬ್ಯಾಟರಿಯನ್ನು ನೀಡುತ್ತವೆ, ಆದರೆ ಜಿಯೋನಿ M7 ಪವರ್ ಸ್ಮಾರ್ಟ್‌ಫೋನಿನಲ್ಲಿ 5000mAh ಬ್ಯಾಟರಿಯನ್ನು ಅಳವಡಿಸಲು ಮುಂದಾಗಿದೆ.

6 ಇಂಚಿನ ಫುಲ್‌ಸ್ಕ್ರಿನ್ ಡಿಸ್‌ಪ್ಲೇ:
ಇದಲ್ಲದೇ ಜಿಯೋನಿ M7 ಪವರ್ ಸ್ಮಾರ್ಟ್‌ಫೋನಿನಲ್ಲಿ 6 ಇಂಚಿನ 18:9 ಅನುಪಾತದ ಫುಲ್‌ಸ್ಕ್ರಿನ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದುವೇ FHD ಗುಣಮಟ್ಟದಾಗಿದೆ. ಈ ಸ್ಮಾರ್ಟ್‌ಫೋನ್ ರೂ.20000ದ ಒಳಗೆ ದೊರೆಯಲಿದ ಎನ್ನಲಾಗಿದೆ.

4GB RAM- 64GB ROM:
ಜಿಯೋನಿ M7 ಪವರ್ ಸ್ಮಾರ್ಟ್‌ಫೋನಿನಲ್ಲಿ ವೇಗದ ಕಾರ್ಯಚರಣೆಗಾಗಿ ಸ್ನಾಪ್‌ಡ್ರಾಗನ್ 435 ಪ್ರೋಸೆಸರ್ ಹಾಗೂ 4GB RAM ಜೊತೆಗೆ 64GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಅಲ್ಲದೇ 256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ಕ್ಯಾಮೆರಾ:
ಜಿಯೋನಿ M7 ಪವರ್ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ಜೊತೆಗೆ LED ಫ್ಲಾಷ್ ಲೈಟ್ ಸಹ ನೀಡಲಾಗಿದೆ, ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದಲ್ಲದೇ ಡ್ಯುಯಲ್ ಸಿಮ್ ಹಾಕುವ ಅವಕಾಶವನ್ನು ನೀಡಲಾಗಿದೆ.


Click it and Unblock the Notifications