Home
ಮೊಬೈಲ್

ಐಫೋನ್ X ಮೀರಿಸುವ ಆಂಡ್ರಾಯ್ಡ್‌ ಫೋನ್: ಬೆಲೆ ಕಡಿಮೆ, ಆಯ್ಕೆ ಅಧಿಕ

By Srinidhi

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಹೊಸದೊಂದು ಅಲೆಯನ್ನು ಹುಟ್ಟುಹಾಕಲು ಚೀನಾ ಮೂಲದ ಒನ್‌ಪ್ಲಸ್ ಕಂಪನಿ ಮುಂದಾಗಿದೆ. ಒನ್‌ಪ್ಲಸ್ ಬಿಡುಗಡೆ ಮಾಡಲು ಸಿದ್ಧವಾಗಿರುವ ನೂತನ ಸ್ಮಾರ್ಟ್‌ಫೋನ್‌ ಕುರಿತಂತೆ ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ರೂಮರ್ ಗಳು ಹರಿದಾಡುತ್ತಿದ್ದು, ಇದರ ಬೆನ್ನಲೇ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ನವೆಂಬರ್ 16ಕ್ಕೆ ನ್ಯೂಯಾರ್ಕ್ ನಲ್ಲಿ ಲಾಂಚ್ ಆಗಲಿದೆ ಎನ್ನುವ ಅಧಿಕೃತ ಮಾಹಿತಿಯೂ ಒನ್‌ಪ್ಲಸ್ ಕಡೆಯಿಂದಲೇ ದೊರೆತಿದೆ.

ಐಫೋನ್ X ಮೀರಿಸುವ ಆಂಡ್ರಾಯ್ಡ್‌ ಫೋನ್: ಬೆಲೆ ಕಡಿಮೆ, ಆಯ್ಕೆ ಅಧಿಕ

ಓದಿರಿ: ಬದಲಾಗಿದೆ ಜಿಯೋ ಆಫರ್‌ಗಳು: ರೂ, 309, 399, 459 ಮತ್ತು 499 ಪ್ಲಾನ್‌ಗಳ ಮಾಹಿತಿ ಇಲ್ಲಿದೆ..!

ಇದೇ ಪ್ರಥಮ ಬಾರಿಗೆ ಒನ್‌ಪ್ಲಸ್ ತನ್ನ ಭಾರತೀಯ ಅಭಿಮಾನಿಗಳಿಗೆ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಲೈವ್ ಲಾಂಚ್ ಅನ್ನು PVR ಥಿಯೇಟರ್‌ಗಳಲ್ಲಿ ಪ್ರದರ್ಶನವನ್ನು ಏರ್ಪಡಿಸಿದೆ. ಇದಕ್ಕಾಗಿ ದೆಹಲಿ, ಮುಂಬೈ, ಬೆಂಗಳೂರು, ಹೈದ್ರಾಬಾದ್ ಮತ್ತು ಪುಣೆ ನಗರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಬುಕ್ ಮೈ ಶೋನಲ್ಲಿ ಟಿಕೇಟ್ ಸಹ ಮಾರಾಟ ಮಾಡುತ್ತಿದೆ. ಅದುವೇ ಕೇವಲ ರೂ.99ಕ್ಕೆ.

ಓದಿರಿ: ಜಿಯೋ ಪ್ರೈಮ್ ಸದಸ್ಯರಿಗೆ ಅದ್ಧೂರಿ ಆಫರ್: ರೂ.399ಕ್ಕೆ ರಿಚಾರ್ಜ್ ಮಾಡಿಸಿದರೆ ರೂ.2599 ಕ್ಯಾಷ್ ಬ್ಯಾಕ್

ನವೆಂಬರ್ 21ರ ಸಂಜೆ 4:30ಕ್ಕೆ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಭಾರತದಲ್ಲಿ ಅಮೆಜಾನ್ ಮೂಲಕ ಮಾರಾಟವಾಗಲಿದೆ. ಇದರೊಂದಿಗೆ ಒನ್‌ಪ್ಲಸ್.ಇನ್‌ನಲ್ಲಿಯೂ ಈ ಫೋನ್ ಕೊಳ್ಳಬಹುದಾಗಿದೆ. ನಂತರದಲ್ಲಿ ಎಲ್ಲಾ ಕಡೆಗಳಲ್ಲೂ ಈ ಫೋನ್ ಮಾರಟಕ್ಕೆ ಲಭ್ಯವಿರಲಿದೆ.

ಒನ್‌ಪ್ಲಸ್ 5 ಯಶಸ್ಸಿನ ನಂತರ:

ಒನ್‌ಪ್ಲಸ್ 5 ಯಶಸ್ಸಿನ ನಂತರ:

ಮಾರುಕಟ್ಟೆಯಲ್ಲಿ ಒನ್‌ಪ್ಲಸ್ 5 ಸಾಕಷ್ಟು ಹೆಸರು ಮಾಡಿದ ಬೆನ್ನಲ್ಲೇ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಕಂಪನಿಯೂ ಮುಂದಾಗಿದೆ. ಈ ಸ್ಮಾರ್ಟ್‌ಫೋನಿನ ಬೆಲೆಯೂ ರೂ. 40,000ದ ಅಸುಪಾಸಿನಲ್ಲಿ ಇರಲಿದೆ ಎನ್ನಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸದ್ದು ಮಾಡುವುದು ಪಕ್ಕಾ ಎನ್ನಲಾಗಿದೆ.

18:9 ಅನುಪಾತದ 6 ಇಂಚಿನ ಡಿಸ್‌ಪ್ಲೇ:

18:9 ಅನುಪಾತದ 6 ಇಂಚಿನ ಡಿಸ್‌ಪ್ಲೇ:

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ನಲ್ಲಿ 18:9 ಅನುಪಾತದ 6 ಇಂಚಿನ ಡಿಸ್‌ಪ್ಲೇ ಕಾಣಬಹುದಾಗಿದೆ. ಇದೇ ಈ ಫೋನಿನ ವಿಶೇಷತೆಗಳಲ್ಲಿ ಪ್ರಮುಖವಾದದ್ದು, ಇದು ಬ್ರಜಿಲ್ ಲೈಸ್ ವಿನ್ಯಾಸದಿಂದ ಕೂಡಿದೆ. ಅಲ್ಲದೇ ಬೆಸ್ಟ್ ಪ್ರೋಸೆಸರ್ ಅನ್ನು ಒಳಗೊಂಡಿದ್ದು, ಉತ್ತಮ RAM ಅನ್ನು ಅಳವಡಿಸಲಾಗಿದೆ ಎನ್ನಲಾಗಿದೆ.

ಆಪ್‌ಡೇಟೆಡ್ ಡ್ಯುಯಲ್ ಕ್ಯಾಮೆರಾ:

ಆಪ್‌ಡೇಟೆಡ್ ಡ್ಯುಯಲ್ ಕ್ಯಾಮೆರಾ:

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ನಲ್ಲಿ ಈ ಹಿಂದಿನ ಫೋನಿಗಿಂತಲೂ ಉತ್ತಮ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಈ ಫೋನಿನಲ್ಲಿ ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

ಉತ್ತಮ ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್:

ಉತ್ತಮ ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್:

ಇದಲ್ಲದೇ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ನಲ್ಲಿ ಉತ್ತಮ ಬ್ಯಾಟರಿಯನ್ನು ಕಾಣಬಹುದಾಗಿದೆ. ಅಲ್ಲದೇ ಇದರಲ್ಲಿ OLED ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಇದು ಹೆಚ್ಚಿನ ಬ್ಯಾಟರಿಯನ್ನು ಬಳಕೆ ಮಾಡಿಕೊಳ್ಳುವುದಿಲ್ಲ ಎನ್ನಲಾಗಿದೆ. ಇದಕ್ಕಾಗಿ ಈ ಫೋನಿನಲ್ಲಿ 3,450mAh ಬ್ಯಾಟರಿಯನ್ನು ಕಾಣಬಹುದಾಗಿದೆ.

Best Mobiles in India

English summary
OnePlus 5T to write a new chapter in flagship smartphone category. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+