ಭಾರತದಲ್ಲಿ ಲಾಂಚ್‌ ಆದ 'ಜಿಯೋನಿ ಪಿ7': ಬೆಲೆ? ಫೀಚರ್‌ಗಳು? ಇತರೆ..!

Written By:

ಕೇವಲ ತಿಂಗಳ ಹಿಂದಷ್ಟೇ ಪಿ7 ಮ್ಯಾಕ್ಸ್ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದ ಚೀನಾ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ಜಿಯೋನಿ, ಈಗ ಭಾರತದಲ್ಲಿ ಜಿಯೋನಿ ಪಿ7 ಸ್ಮಾರ್ಟ್‌ಫೋನ್ ಅನ್ನು ಲಾಂಚ್‌ ಮಾಡಿದೆ. ಅಂತು ಪಿ ಸೀರೀಸ್ ಮೊಬೈಲ್‌ನಲ್ಲಿ ಕಂಪನಿ ತನ್ನ ಡಿವೈಸ್‌ಗಳ ಸಂಖ್ಯೆ ಹೆಚ್ಚಿಸಿದೆ. ಅಂದಹಾಗೆ ಪಿ7 ಬೆಲೆ ರೂ.9,999 ಆಗಿದ್ದು, ಭಾರತದ ಪ್ರಮುಖ ರೀಟೇಲ್ ಮತ್ತು ಆನ್‌ಲೈನ್‌ ಸ್ಟೋರ್‌ಗಳೆರಡಲ್ಲಿಯೂ ಈಗಾಗಲೇ ಲಭ್ಯ.

ಭಾರತದಲ್ಲಿ ಲಾಂಚ್‌ ಆದ 'ಜಿಯೋನಿ ಪಿ7': ಬೆಲೆ? ಫೀಚರ್‌ಗಳು? ಇತರೆ..!

ಜಿಯೋನಿ ಪಿ7 ಸ್ಮಾರ್ಟ್‌ಫೋನ್ ಬಿಳಿ, ಲಟ್ಟೆ ಚಿನ್ನ ಮತ್ತು ಬೂದು ಬಣ್ಣಗಳಲ್ಲಿ ಲಭ್ಯ. ಸೌಂಡ್ ಮತ್ತು ಪವರ್ ಬಟನ್‌ಗಳು ಬಲಭಾಗದ ಎಡ್ಜ್‌ನಲ್ಲಿದ್ದು, ಸ್ಮಾರ್ಟ್‌ಫೋನ್‌ ಮೆಟಲ್ ಎಡ್ಜ್‌ಗಳನ್ನು ಸಪೋರ್ಟ್‌ ಮಾಡುತ್ತದೆ.

ಜಿಯೋನಿ ಪಿ7 ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್‌ ಚಾಲಿತವಾಗಿದ್ದು, ಅಮಿಗೊ 3.2 ಆಧಾರಿತವಾಗಿದೆ. ಡ್ಯುಯಲ್ ಸಿಮ್ ಸ್ಲಾಟ್ ಸಪೋರ್ಟ್‌ ಮಾಡುತ್ತದೆ. ಸ್ಮಾರ್ಟ್‌ಫೋನ್ ಪಿ7 ಮ್ಯಾಕ್ಸ್'ನ ಚಿಕ್ಕ ಗಾತ್ರದ ವೈವಿಧ್ಯತೆ ಆಗಿದೆ. 5 ಇಂಚಿನ (720x1280 pixels) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಜೊತೆಗೆ ಸೋಡಾ ಲೈಮ್ ಸುರಕ್ಷತೆ ಹೊಂದಿದೆ. 1.3 GHz ಕ್ವಾಡ್‌ಕೋರ್ ಪ್ರೊಸೆಸರ್ ಪ್ರಾಯೋಜಿತವಾಗಿದ್ದು ಜೊತೆಗೆ 2GB RAM ಹೊಂದಿದೆ. ಸ್ಮಾರ್ಟ್‌ಫೋನ್ 16GB ಆಂತರಿಕ ಸ್ಟೋರೇಜ್‌ ಜೊತೆಗೆ 128GB ವರೆಗೆ ಮೆಮೊರಿ ವಿಸ್ತರಣೆ ಸಪೋರ್ಟ್‌ ಮಾಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತದಲ್ಲಿ ಲಾಂಚ್‌ ಆದ 'ಜಿಯೋನಿ ಪಿ7': ಬೆಲೆ? ಫೀಚರ್‌ಗಳು? ಇತರೆ..!

ಕ್ಯಾಮೆರಾ ಬಗ್ಗೆ ಹೇಳುವುದಾದರೆ ಜಿಯೋನಿ ಪಿ7 8MP ಹಿಂಭಾಗ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್‌, 5MP ಸೆಲ್ಫಿ ಕ್ಯಾಮೆರಾ ಮತ್ತು ವೀಡಿಯೊ ಚಾಟ್ ಫೀಚರ್ ಹೊಂದಿದೆ. ಸ್ಮಾರ್ಟ್‌ಫೋನ್ 2300mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. 259 ಗಂಟೆಗಳ ಸ್ಟ್ಯಾಂಡ್‌ಬೈ ಟೈಮ್ ಸಪೋರ್ಟ್‌ ಮಾಡುತ್ತದೆ. ಸಂಪರ್ಕ ಆಪ್ಶನ್‌ಗಳಲ್ಲಿ 3.5mm ಆಡಿಯೋ ಜಾಕ್, ಎಫ್‌ಎಂ ರೇಡಿಯೊ, 4G VoLTE, ವೈಫೈ 802.11 b/g/n, ಬ್ಲೂಟೂತ್ 4.0 , ಮತ್ತು ಜಿಪಿಎಸ್ ಹೊಂದಿದೆ. ಜಿಯೋನಿ ಪಿ7 ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯವಿಲ್ಲ.

ಭಾರತದಲ್ಲಿ ಲಾಂಚ್‌ ಆದ 'ಜಿಯೋನಿ ಪಿ7': ಬೆಲೆ? ಫೀಚರ್‌ಗಳು? ಇತರೆ..!

ಹೋಲಿಕೆಗೆ ಹೇಳುವುದಾದರೆ ಜಿಯೋನಿ ಪಿ7 ಮ್ಯಾಕ್ಸ್ ಬೆಲೆ 13,999 ರೂ. 5.5 ಇಂಚಿನ ಡಿಸ್‌ಪ್ಲೇ, 2.2 GHz ಆಕ್ಟಾ ಕೋರ್ MT6595 ಪ್ರೊಸೆಸರ್ ಜೊತೆಗೆ 3GB RAM ಹೊಂದಿದೆ. ಹೆಚ್ಚುವರಿ ಆಗಿ ಈ ಡಿವೈಸ್ 32GB ಇನ್‌ಬಿಲ್ಟ್ ಮೆಮೊರಿ, 13mp ಹಿಂಭಾಗ ಕ್ಯಾಮೆರಾ, 5mp ಸೆಲ್ಫಿ ಕ್ಯಾಮೆರಾ ಮತ್ತು 3100mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಬಜೆಟ್ ಬೆಲೆಗೆ 'ಝೆನ್ ಮೊಬೈಲ್'ನಿಂದ 2 4GVoLTE ಸ್ಮಾರ್ಟ್‌ಫೋನ್‌ ಲಾಂಚ್: ಯಾವುವು? ಬೆಲೆ ಎಷ್ಟು?

Read more about:
English summary
Gionee P7 Launched in India: Price, Release Date, Specifications, and More. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot