ಬಜೆಟ್ ಬೆಲೆಗೆ 'ಝೆನ್ ಮೊಬೈಲ್'ನಿಂದ 2 4GVoLTE ಸ್ಮಾರ್ಟ್‌ಫೋನ್‌ ಲಾಂಚ್: ಯಾವುವು? ಬೆಲೆ ಎಷ್ಟು?

By Suneel
|

ಡೊಮೇಸ್ಟಿಕ್ ಮೊಬೈಲ್‌ ತಯಾರಕ ಕಂಪನಿ 'ಝೆನ್ ಮೊಬೈಲ್' ಎರಡು ಹೊಸ 4G VoLTE ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುವ ಬಗ್ಗೆ ಪ್ರಕಟಣೆ ಹೊರಡಿಸಿದೆ. ಅಡ್ಮೈರ್ ಡ್ರಾಗನ್ ಮತ್ತು ಅಡ್ಮೈರ್ ಥ್ರಿಲ್ ಎಂಬ 2 ಹೊಸ ಸ್ಮಾರ್ಟ್‌ಫೋನ್‌ಗಳನ್ನು ಜೆನ್‌ ಮೊಬೈಲ್ ಲಾಂಚ್ ಮಾಡುತ್ತಿದೆ. ಈ ಫೋನ್‌ಗಳು ಎಲ್ಲರ ಕೈಗೆಟಕುವ ಬೆಲೆಯ ಡಿವೈಸ್‌ಗಳಾಗಿವೆ.

ಬಜೆಟ್ ಬೆಲೆಗೆ 'ಝೆನ್ ಮೊಬೈಲ್'ನಿಂದ 2 4GVoLTE ಸ್ಮಾರ್ಟ್‌ಫೋನ್‌ ಲಾಂಚ್:

ಅಡ್ಮೈರ್ ಡ್ರಾಗನ್ ಮತ್ತು ಅಡ್ಮೈರ್ ಥ್ರಿಲ್ ಎರಡು ಫೋನ್‌ಗಳ ಬೆಲೆ ಕ್ರಮವಾಗಿ ರೂ.5,290 ಮತ್ತು ರೂ.4,690. 2 ಫೋನ್‌ಗಳು ಸ್ಟೈಲಿಶ್ ಫೀಚರ್‌ಗಳನ್ನು ಹೊಂದಿದ್ದು, ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್ ಚಾಲಿತವಾಗಿವೆ. ಎ 1.3GHz ಕ್ವಾಡ್ ಕೋರ್ ಪ್ರೊಸೆಸರ್ ಪವರ್ ಚಾಲಿತವಾಗಿವೆ ಡಿವೈಸ್‌ಗಳು.

ನಾಳೆ 'ಲೆನೊವೋ ಕೆ6 ನೋಟ್' ಸ್ಮಾರ್ಟ್‌ಫೋನ್ ಭಾರತದಲ್ಲಿ ಲಾಂಚ್‌: ವಿಶೇಷತೆಗಳು..!

ಅಡ್ಮೈರ್ ಡ್ರಾಗನ್ 5 ಇಂಚಿನ FWVGA ಐಪಿಎಸ್ 2.5D ಸ್ಕ್ರೀನ್ ಮತ್ತು ಅಡ್ಮೈರ್ ಥ್ರಿಲ್ 4.5 ಇಂಚಿನ FWVGA ಸ್ಕ್ರೀನ್‌ ಅನ್ನು ಹೊಂದಿವೆ. 2 ಸ್ಮಾರ್ಟ್‌ಫೋನ್‌ಗಳು ಸಹ 5mp ಹಿಂಭಾಗ ಕ್ಯಾಮೆರಾ ಫೀಚರ್ ಹೊಂದಿವೆ. ಅಡ್ಮೈರ್ ಡ್ರಾಗನ್ 5mp ಸೆಲ್ಫಿ ಶೂಟರ್ ಹೊಂದಿದ್ದು, ಅಡ್ಮೈರ್ ಥ್ರಿಲ್ 2MP ಸೆಲ್ಫಿ ಶೂಟರ್ ಫೀಚರ್ ಹೊಂದಿದೆ. ಆಟೋ ಕರೆ ರೆಕಾರ್ಡ್ ಫೀಚರ್ ಹೊಂದಿವೆ.

ಬಜೆಟ್ ಬೆಲೆಗೆ 'ಝೆನ್ ಮೊಬೈಲ್'ನಿಂದ 2 4GVoLTE ಸ್ಮಾರ್ಟ್‌ಫೋನ್‌ ಲಾಂಚ್:

2 ಸ್ಮಾರ್ಟ್‌ಫೋನ್‌ಗಳು ಸಹ 1GB RAM ಮತ್ತು 8GB ಆಂತರಿಕ ಮೆಮೊರಿ ಹೊಂದಿದ್ದು, 32GB ವರೆಗೆ ವಿಸ್ತರಣೆ ಮಾಡಬಹುದು. ಅಡ್ಮೈರ್ ಡ್ರಾಗನ್ 2500mAh ಬ್ಯಾಟರಿ ಸಾಮರ್ಥ್ಯ ಮತ್ತು ಅಡ್ಮೈರ್ ಥ್ರಿಲ್ 1750mAh ಬ್ಯಾಟರಿ ಯುನಿಟ್ ಹೊಂದಿವೆ. ಅಡ್ಮೈರ್ ಡ್ರಾಗನ್ 20 ಭಾರತೀಯ ಭಾಷೆಗಳ ಪೂರ್ವ ಲೋಡ್‌ ಆಗಿ ಬಂದಿದೆ.

ಬಜೆಟ್ ಬೆಲೆಗೆ 'ಝೆನ್ ಮೊಬೈಲ್'ನಿಂದ 2 4GVoLTE ಸ್ಮಾರ್ಟ್‌ಫೋನ್‌ ಲಾಂಚ್:

ಕಡಿಮೆ ಬೆಲೆಯಲ್ಲಿ 4G VoLTE ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂಬುವವರು ಈ ಎರಡು ಡಿವೈಸ್‌ಗಳನ್ನು ಖರೀದಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Zen Mobile Launches Two New 4G Smartphones in India. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X