ಕನ್ನಡ ಗಿಜ್‌ಬಾಟ್ ಹ್ಯಾಶ್‌ಟ್ಯಾಗ್ ಶೇರ್ ಮಾಡಿ, ಬಹುಮಾನ ಗೆಲ್ಲಿ!
ಜನಪ್ರಿಯ ಶಿಯೋಮಿ ಕಂಪನಿಯು ಇದೀಗ 'ಬ್ಲ್ಯಾಕ್ ಫ್ರೈಡೇ ಸೇಲ್' ಅನ್ನುಆಯೋಜಿಸಿದ್ದು, ನಾಲ್ಕು ದಿನಗಳು ನಡೆಯುವ ಈ ಸೇಲ್ ಮೇಳವು ಇಂದು (ನವೆಂಬರ್ 29) ಶುರುವಾಗಿದ್ದು, ಇದೇ ಡಿಸೆಂಬರ್ 2ರ ವರೆಗೂ ಇರಲಿದೆ. ಈ ವೇಳೆ ಶಿಯೋಮಿ ಗ್ಯಾಡ್ಜೆಟ್ಸ್‌ಗಳಿಗೆ ಬೆಸ್ಟ್ ಆಫರ್‌ಗಳು ಸಿಗಲಿವೆ. ಈ ಖುಷಿಯ ಜೊತೆಗೆ ನಮ್ಮ 'ಕನ್ನಡ ಗಿಜ್‌ಬಾಟ್' ಸಂಸ್ಥೆಯು ಗ್ರಾಹಕರಿಗೆ ಭರ್ಜರಿ ಸರ್‌ಪ್ರೈಸ್‌ವೊಂದನ್ನು ನೀಡುತ್ತಿದೆ.

ಹೌದು, ಕನ್ನಡದ ಮೊದಲ ತಂತ್ರಜ್ಞಾನ ಸುದ್ದಿ ತಾಣವಾಗಿ ಗುರುತಿಸಿಕೊಂಡಿರುವ 'ಕನ್ನಡ ಗಿಜ್‌ಬಾಟ್' ಇದೀಗ ಗ್ರಾಹಕರಿಗೆ ಅತ್ಯುತ್ತಮ ಕೂಡುಗೆ ನೀಡುತ್ತಿದೆ. ಸದ್ಯ ಚಾಲ್ತಿ ಇರುವ ಶಿಯೋಮಿ 'ಬ್ಲ್ಯಾಕ್ ಫ್ರೈಡೇ ಸೇಲ್' ಪ್ರಯುಕ್ತ 'ಕನ್ನಡ ಗಿಜ್‌ಬಾಟ್' ಸಂಸ್ಥೆಯು ಗ್ರಾಹಕರಿಗೆ 3000.ರೂ ಮೌಲ್ಯದ ಶಾಪಿಂಗ್/ಸೇಲ್ ಕೂಪನ್ ನೀಡಲಿದೆ. ಗ್ರಾಹಕರು ಈ ಕೂಪನ್ ಪಡೆಯುವುದು ತುಂಬಾ ಸರಳವಾಗಿದೆ. ಅದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಕೂಪನ್ ಪಡೆಯುವುದು ಹೇಗೆ
ಕನ್ನಡ ಗಿಜ್‌ಬಾಟ್‌ನ ಈ ಕಂಟೆಸ್ಟ್‌ನಲ್ಲಿ (ಸ್ಪರ್ಧೆ) ಗ್ರಾಹಕರು ಭಾಗವಹಿಸಿ #kannadagizbotgiveaway ಹ್ಯಾಶ್‌ಟ್ಯಾಗ್ ಅನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಶೇರ್, ಟ್ವಿಟ್, ಮಾಡಬೇಕು. ಸಂಸ್ಥೆಯು ಒಟ್ಟು ಎರಡು ಕೂಪನ್ ನೀಡುತ್ತದೆ. ಒಂದು ಕೂಪನ್ 1.500ರೂ. ಮೌಲ್ಯದ್ದಾಗಿರುತ್ತದೆ.

ಹ್ಯಾಶ್‌ಟ್ಯಾಗ್ ಬಳಸಿ
* ಕನ್ನಡ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ ಲೈಕ್ ಮಾಡಿ, ಫಾಲೋ ಮಾಡಿ
* https://www.facebook.com/GizBotKannada/ ಫೇಸ್‌ಬುಕ್ ಲಿಂಕ್* https://www.instagram.com/gizbotkannada/ ಇನ್‌ಸ್ಟಾಗ್ರಾಂ ಲಿಂಕ್
* https://twitter.com/GizbotKannada ಟ್ವಿಟ್ಟರ್ ಲಿಂಕ್
* ಸಾಮಾಜಿಕ ತಾಣಗಳ ಕಮೆಂಟ್ ಬಾಕ್ಸ್‌ನಲ್ಲಿ Redmi K20 ಅಥವಾ Redmi K20 Pro ಇವೆರಡರಲ್ಲಿ ಒಂದು ಸ್ಮಾರ್ಟ್‌ಫೋನ್ ಹೆಸರು ನಮೂದಿಸಿ.
* ಹಾಗೆಯೇ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ಟ್ವಿಟ್ಟರ್ ಸಾಮಾಜಿಕ ತಾಣಗಳಲ್ಲಿ #kannadagizbotgiveaway ಹ್ಯಾಶ್‌ಟ್ಯಾಗ್ ಬಳಸಿ.

ಕೂಪನ್ ಮಾಹಿತಿ ಮತ್ತು ಫಲಿತಾಂಶ
* ಒಂದು ಕೂಪನ್ ಮೌಲ್ಯ 1,500ರೂ.
* ರೆಡ್ಮಿ ಕೆ20 ಮತ್ತು ರೆಡ್ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್‌ಗಳ ಖರೀದಿಗೆ ಮಾತ್ರ ಈ ಕೂಪನ್ ಅನ್ವಯವಾಗುತ್ತದೆ.
* ಈ ಕೂಪನ್ ಸೀಮಿತ ಅವಧಿಯ ವಾಯ್ದೆ ಹೊಂದಿರುತ್ತದೆ. ಆಫರ್ ಅವಧಿಯಲ್ಲಿ ಮಾತ್ರ ಕೂಪನ್ ಅನ್ವಯ.
* ನಾಳೆ (ನವೆಂಬರ್ 30) ಮಧ್ಯಾಹ್ನ 3 ಗಂಟೆಯ ವರೆಗಿನ ಮಾತ್ರ ಈ ಕಂಟೆಸ್ಟ್ ಇರುತ್ತದೆ. ಕಂಟೆಸ್ಟ್‌ನಲ್ಲಿ ಇಬ್ಬರು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗುತ್ತದೆ.
* ಫಲಿತಾಂಶವನ್ನು ನಾಳೆ (ನ.30) ಸಂಜೆ 6ಕ್ಕೆ ತಿಳಿಸಲಾಗುತ್ತದೆ.

ಕೂಪನ್ ಲಾಭ ಪಡೆಯುವುದು ಹೇಗೆ
ಕೂಪನ್ ಲಾಭ್ ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.
* https://store.mi.com/in/ ವೆಬ್ ತಾಣ ತೆರೆದು ಕೂಪನ್ ಕೋಡ್ ಮತ್ತು ಕ್ಯಾಪ್ಚಾ ಎಂಟ್ರಿ ಮಾಡಿರಿ.
* ಮಿ ಸ್ಟೋರ್ ಆಪ್ ತೆರೆಯಿರಿ > ಅಕೌಂಟ್ಸ್ > ಕೂಪನ್ಸ್ > ಕೂಪನ್ ಕೋಡ್ ಮೇಲೆ ಕ್ಲಿಕ್ಕ್ ಮಾಡಿರಿ > ಆಗ ಕೂಪನ್ ಮಿ ಖಾತೆಗೆ ಸೇರುತ್ತದೆ.

ರೆಡ್ಮಿ ಕೆ20 ಫೋನ್ ಸರಣಿಗೆ ಆಫರ್
ಶಿಯೋಮಿಯ ಜನಪ್ರಿಯ ಫ್ಲ್ಯಾಗ್‌ಶಿಫ್ ಮಾದರಿಯ ರೆಡ್ಮಿ ಕೆ20 ಸ್ಮಾರ್ಟ್‌ಫೋನ್ ಸರಣಿಗೆ ಬೆಸ್ಟ್ ಡಿಸ್ಕೌಂಟ್ ಸಿಗಲಿದೆ. ರೆಡ್ಮಿ ಕೆ20 ಪ್ರೊ 6GB+128GB ವೇರಿಯಂಟ್ ಬೆಲೆಯು 25,999ರೂ.ಆಗಿದೆ. ಹಾಗೂ 8GB+256GB ವೇರಿಯಂಟ್ ಬೆಲೆಯು 28,999ರೂ.ಗಳಾಗಿದೆ. ಅದೇ ರೀತಿ ರೆಡ್ಮಿ ಕೆ20 ಸ್ಮಾರ್ಟ್‌ಫೋನ್ 6GB+64GB ವೇರಿಯಂಟ್ ಬೆಲೆಯು 19,999ರೂ. ಆಗಿದೆ ಹಾಗೂ 6GB+128GB ವೇರಿಯಂಟ್ ಬೆಲೆಯು 22,999ರೂ.ಗಳಾಗಿದೆ.


Click it and Unblock the Notifications








