ಮಿಸ್ ಮಾಡದಿರಿ: ಟಾಪ್ ಬೆಸ್ಟ್ ಅಮೆಜಾನ್ ಇಂಡಿಯಾ ಸೇಲ್ಸ್

By Shwetha
|

ಭಾರತದಲ್ಲಿ ಹಬ್ಬಗಳ ಸೀಸನ್ ಆರಂಭವಾಗಿದೆ, ಕೆಲವೇ ವಾರಗಳಲ್ಲಿ ಆನ್‌ಲೈನ್ ಶಾಪಿಂಗ್ ತನ್ನ ಅತ್ಯುನ್ನತೆಯನ್ನು ತಲುಪಲಿದ್ದು ವಿಶೇಷ ವಿನಾಯಿತಿಗಳು ಮತ್ತು ಆಫರ್‌ಗಳನ್ನು ಗ್ರಾಹಕರು ಪಡೆದುಕೊಳ್ಳಲಿದ್ದಾರೆ. ಅಮೆಜಾನ್ ಇಂಡಿಯಾ, ಫ್ಲಿಪ್‌ಕಾರ್ಟ್ ಮತ್ತು ಸ್ನ್ಯಾಪ್‌ಡೀಲ್ ನಡುವೆ ಇ ಕಾಮರ್ಸ್ ಪಂದ್ಯ ಕಳೆದ ಒಂದು ವರ್ಷದಿಂದ ನಡೆಯುತ್ತಲೇ ಇದೆ. ಈ ಯುದ್ಧದಿಂದ ಲಾಭವನ್ನು ಪಡೆದುಕೊಳ್ಳುವುದು ಗ್ರಾಹಕರು ಮಾತ್ರ ಎಂಬುದಂತೂ ನಿಜ.

ಓದಿರಿ: ಅಮೆಜಾನ್‌ ಗ್ರೇಟ್‌ ಸೇಲ್: ಟಿವಿಗಳು ಮತ್ತು ಇತರೆ ವಸ್ತುಗಳ ಮೇಲೆ ಶೇ.50 ರಿಯಾಯಿತಿ

ವರದಿಯ ಪ್ರಕಾರ ಅಮೆಜಾನ್ ಇಂಡಿಯಾ ತನ್ನ "ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್" ಗಾಗಿ ತನ್ನನ್ನು ಸಿದ್ಧಪಡಿಸಿಕೊಳ್ಳುತ್ತಿದ್ದು ಇದು ಅಕ್ಟೋಬರ್ 1 ರಿಂದ 5 ರವರೆಗೆ ನಡೆಯಲಿದೆ. ಕೆಲವೊಂದು ಡೀಲ್‌ಗಳ ಮೂಲಕ ಅಮೆಜಾನ್ ಈಗಾಗಲೇ "ಗ್ರೇಟ್ ಸೇವಿಂಗ್ ಎವ್ರಿಡೇ" ಎಂಬ ಯೋಜನೆಯನ್ನು ನಡೆಸುತ್ತಿದ್ದು, ಇದರಲ್ಲಿ 10 ಅತ್ಯುತ್ತಮ ಡೀಲ್‌ಗಳೊಂದಿಗೆ ನಾವು ನಿಮ್ಮೆದುರು ಬಂದಿರುವೆವು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ 7 ಪ್ರೊ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ 7 ಪ್ರೊ

ಮಿಡ್ ರೇಂಜ್ ಫೋನ್‌ಗಳಿಗಾಗಿ ನೀವು ಹುಡುಕಾಟ ನಡೆಸುತ್ತಿದ್ದೀರಿ ಎಂದಾದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್7 ಪ್ರೊ ನಿಮಗೆ ಉತ್ತಮವಾದುದಾಗಿದೆ. ಕಪ್ಪು ಮತ್ತು ಚಿನ್ನದ ಬಣ್ಣದಲ್ಲಿ ಈ ಡಿವೈಸ್‌ಗಳು ಲಭ್ಯವಿದ್ದು ರೂ 10,690 ಕ್ಕೆ ನೀವು ಇದನ್ನು ಪಡೆದುಕೊಳ್ಳಬಹುದಾಗಿದೆ. ರೂ 500 ರಿಯಾಯಿತಿಯಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ. 1 ವರ್ಷದ ತಯಾರಿಕಾ ವಾರಂಟಿ ನೀವು ಪಡೆದುಕೊಳ್ಳಲಿದ್ದೀರಿ. ಅಮೆಜಾನ್ ಪ್ರೈಮ್‌ನಲ್ಲಿ 1 ದಿನದ ಉಚಿತ ಡೆಲಿವರಿಯಲ್ಲಿ ನೀವು ಆರ್ಡರ್ ಮಾಡಬಹುದಾಗಿದೆ.

ಕ್ಯಾನನ್ Sx710 HS 20.3ಎಮ್‌ಪಿ ಪಾಯಿಂಟ್ ಮತ್ತು ಶೂಟ್ ಡಿಜಿಟಲ್ ಕ್ಯಾಮೆರಾ

ಕ್ಯಾನನ್ Sx710 HS 20.3ಎಮ್‌ಪಿ ಪಾಯಿಂಟ್ ಮತ್ತು ಶೂಟ್ ಡಿಜಿಟಲ್ ಕ್ಯಾಮೆರಾ

ಕ್ಯಾನನ್ Sx710 ಕಾಂಪ್ಯಾಕ್ಟ್ ಪಾಯಿಂಟ್ ಮತ್ತು ಶೂಟ್ ಕ್ಯಾಮೆರಾ ಆಗಿದ್ದು 20.3 ಎಮ್‌ಪಿ ಹಾಗೂ 30X ಆಪ್ಟಿಕಲ್ ಜೂಮ್ ಅನ್ನು ಇದು ಪಡೆದುಕೊಂಡಿದೆ. ಎರಡು ಬಣ್ಣಗಳಲ್ಲಿ ಈ ಕ್ಯಾಮೆರಾವನ್ನು ನಿಮಗೆ ಖರೀದಿ ಮಾಡಬಹುದಾಗಿದೆ. ಕಪ್ಪು ಮತ್ತು ಕೆಂಪು. ವಿನಾಯಿತಿ ದರ ರೂ 5000 ಆಗಿದೆ. ಇಎಮ್ಐ ಆಪ್ಶನ್‌ನಲ್ಲಿ ಕೂಡ ಈ ಕ್ಯಾಮೆರಾದ ಖರೀದಿಯನ್ನು ನಿಮಗೆ ಮಾಡಬಹುದಾಗಿದೆ. ಆರಂಭ ಬೆಲೆ ರೂ 1,698 ಆಗಿದ್ದು ಪ್ರತೀ ತಿಂಗಳ ದರ ಇದಾಗಿದೆ. ನೀವು ಪಾಯಿಂಟ್ ಅಥವಾ ಶೂಟ್ ಡಿಜಿಟಲ್ ಕ್ಯಾಮೆರಾವನ್ನು ಖರೀದಿಸುತ್ತೀರಿ ಎಂದಾದಲ್ಲಿ, ಕ್ಯಾನನ್ Sx710 ಅತ್ಯುತ್ತಮವಾಗಿದೆ.

ಎಚ್‌ಟಿಸಿ ಡಿಸೈರ್ 620G

ಎಚ್‌ಟಿಸಿ ಡಿಸೈರ್ 620G

ಮಧ್ಯಮ ಕ್ರಮಾಂಕದ ಡಿವೈಸ್‌ಗಳಲ್ಲಿ ಎಚ್‌ಟಿಸಿ ಡಿಸೈರ್ 620G ಉತ್ತಮವಾದುದಾಗಿದೆ. 5 ಇಂಚಿನ ಡಿಸ್‌ಪ್ಲೇಯೊಂದಿಗೆ ಅದ್ಭುತ ಕ್ಯಾಮೆರಾವನ್ನು ಇದು ಪಡೆದುಕೊಂಡಿದೆ. ಸ್ಯಾಂಟೊರಿನಿ ವೈಟ್ ಮತ್ತು ಮಿಲ್ಕಿವೇ ಗ್ರೇನಲ್ಲಿ ಇದು ದೊರೆಯುತ್ತಿದೆ. ಎಚ್‌ಟಿಸಿ ಡಿಸೈರ್ 620G ಯನ್ನು ಅಮೆಜಾನ್ ಇಂಡಿಯಾದಲ್ಲಿ ರೂ 7,800 ಮತ್ತು ರೂ 7,900 ಕ್ಕೆ ನಿಮಗೆ ಖರೀದಿಸಬಹುದಾಗಿದೆ. ಅಮೆಜಾನ್ ಪ್ರೈಮ್ ಡೆಲಿವರಿ ಆಪ್ಶನ್‌ನಲ್ಲೂ ಇದು ಅರ್ಹ ಎಂದೆನಿಸಿದೆ.

ಜೆಬಿಎಲ್ ಗೊ ಪೋರ್ಟೇಬಲ್ ವೈರ್‌ಲೆಸ್ ಬ್ಲ್ಯೂಟೂತ್ ಸ್ಪೀಕರ್

ಜೆಬಿಎಲ್ ಗೊ ಪೋರ್ಟೇಬಲ್ ವೈರ್‌ಲೆಸ್ ಬ್ಲ್ಯೂಟೂತ್ ಸ್ಪೀಕರ್

ನೀವು ರಜಾದಿನಗಳನ್ನು ಕಳೆಯಬಯಸುತ್ತೀರಾ? ಈ ಪಾಕೆಟ್ ಗಾತ್ರದ ಜೆಬಿಎಲ್ ಗೊ ಸ್ಪೀಕರ್ ನಿಮ್ಮ ಪ್ರಯಾಣವನ್ನು ಇನ್ನಷ್ಟು ಅದ್ಭುತವನ್ನಾಗಿಸಲಿದೆ. ಈ ಬ್ಲ್ಯೂಟೂತ್ 7 ಬೇರೆ ಬಣ್ಣಗಳಲ್ಲಿ ಬರುತ್ತಿದ್ದು ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಎರಡಕ್ಕೂ ಕಾಂಪಿಟೇಬಲ್ ಎಂದೆನಿಸಲಿದೆ. ಈ ಡಿವೈಸ್ ಅನ್ನು ರೂ 1,165 ಕ್ಕೆ ಅಮೆಜಾನ್ ಇಂಡಿಯಾದಲ್ಲಿ ಖರೀದಿಸಬಹುದಾಗಿದೆ.

ಎಲ್‌ಜಿ 43LF6300 108 cm (43 ಇಂಚುಗಳು) ಪೂರ್ಣ ಎಚ್‌ಡಿ ಸ್ಮಾರ್ಟ್ ಎಲ್‌ಇಡಿ ಟಿವಿ

ಎಲ್‌ಜಿ 43LF6300 108 cm (43 ಇಂಚುಗಳು) ಪೂರ್ಣ ಎಚ್‌ಡಿ ಸ್ಮಾರ್ಟ್ ಎಲ್‌ಇಡಿ ಟಿವಿ

ಸ್ಮಾರ್ಟ್ ಎಲ್‌ಇಡಿ ಟಿವಿಯನ್ನು ಹುಡುಕುತ್ತಿದ್ದೀರಾ? ಇಲ್ಲಿದೆ ಉತ್ತಮ ಡೀಲ್. ಎಲ್‌ಜಿ 43LF6300 ಸ್ಮಾರ್ಟ್ ಎಲ್‌ಇಡಿ ಟಿವಿಯು ವೆಬ್ ಓಎಸ್‌ನೊಂದಿಗೆ ಬಂದಿದ್ದು, ವರ್ಚುವಲ್ ಸರೌಂಡ್ ಸೌಂಡ್, ಮೀರಾಕಾಸ್ಟ್ ಮತ್ತು 2 ಮಿಲಿಯನ್ ಪಿಕ್ಸೆಲ್‌ಗಳನ್ನು ಪಡೆದುಕೊಂಡಿದೆ. ಇದರ ಬೆಲೆ ರೂ 47,900 ಆಗಿದ್ದು ನೀವು ರೂ 20,000 ವನ್ನು ಉಳಿಸಬಹುದಾಗಿದೆ. ಇದರ ಇಎಮ್ಐ ರೂ 4,278 ಕ್ಕೆ ಆರಂಭವಾಗಲಿದ್ದು ಬೇರೆ ಬೇರೆ ಬ್ಯಾಂಕ್‌ಗಳ ಸಹಾಯವನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಆಪಲ್ ಮ್ಯಾಕ್‌ಬುಕ್ ಪ್ರೊ MD101HN

ಆಪಲ್ ಮ್ಯಾಕ್‌ಬುಕ್ ಪ್ರೊ MD101HN

ಆಪಲ್ ಫ್ಯಾನ್‌ಗಳಿಗೆ ಇಲ್ಲಿದೆ ಸಿಹಿ ಸುದ್ದಿ. 13 ಇಂಚಿನ ಮ್ಯಾಕ್‌ಬುಕ್ ಪ್ರೊವನ್ನು ಅಮೆಜಾನ್ ಇಂಡಿಯಾದಲ್ಲಿ ರೂ 51,990 ಕ್ಕೆ ನಿಮಗೆ ಖರೀದಿಸಬಹುದಾಗಿದೆ. ನೀವು 26,910 ಅನ್ನು ಉಳಿಸಬಹುದಾಗಿದೆ. ಅಮೆಜಾನ್ ಪ್ರೈಮ್‌ನಲ್ಲಿ 1 ದಿನದ ಡೆಲಿವರಿ ಆಯ್ಕೆಯನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಸೋನಿ MDR - Zx110A ಸ್ಟಿರಿಯೊ ಹೆಡ್‌ಫೋನ್

ಸೋನಿ MDR - Zx110A ಸ್ಟಿರಿಯೊ ಹೆಡ್‌ಫೋನ್

ಸೋನಿ MDR - Zx110A ಸ್ಟಿರಿಯೊ ಹೆಡ್‌ಫೋನ್ ನೀವು ಸಂಗೀತ ಕೇಳುವ ವಿಧಾನವನ್ನೇ ಬದಲಾಯಿಸಲಿದೆ. 30mm ಡ್ರೈವರ್ ಯೂನಿಟ್‌ನೊಂದಿಗೆ ಬಂದಿದ್ದು ಕ್ರಿಸ್ಟಲ್ ಕ್ಲಿಯರ್ ಆಡಿಯೊವನ್ನು ಪಡೆದುಕೊಂಡಿದೆ. ಇದನ್ನು ಮಡಚಿ ಬ್ಯಾಗ್‌ನಲ್ಲಿಟ್ಟುಕೊಂಡು ಏನೂ ತೊಂದರೆ ಇಲ್ಲದೆ ನಿಮ್ಮ ಪ್ರಯಾಣವನ್ನು ಮಾಡಬಹುದಾಗಿದೆ. ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಈ ಹೆಡ್‌ಫೋನ್ ಲಭ್ಯವಿದ್ದು ರೂ 550 ರ ವಿನಾಯಿತಿಯನ್ನು ಅಮೆಜಾನ್ ಇಂಡಿಯಾದಲ್ಲಿ ಪಡೆಯಬಹುದಾಗಿದೆ.

ಜೆಬಿಎಲ್ C300SI ಆನ್ ಇಯರ್ ಡೈನಾಮಿಕ್ ವಯರ್ಡ್ ಹೆಡ್‌ಫೋನ್ಸ್

ಜೆಬಿಎಲ್ C300SI ಆನ್ ಇಯರ್ ಡೈನಾಮಿಕ್ ವಯರ್ಡ್ ಹೆಡ್‌ಫೋನ್ಸ್

ಕಪ್ಪು ಬಣ್ಣದಲ್ಲಿ ಈ ಹೆಡ್‌ಫೋನ್ ಲಭ್ಯವಿದ್ದು, ಅಮೆಜಾನ್‌ನಲ್ಲಿ ನಿಮಗೆ ರೂ 900 ಕ್ಕೆ ದೊರೆಯಲಿದೆ. ನೀವು 70% ವನ್ನು ಉಳಿಸಬಹುದಾಗಿದ್ದು 1 ದಿನದ ಡೆಲಿವರಿಯನ್ನು ಅಮೆಜಾನ್ ಪ್ರೈಮ್‌ನಲ್ಲಿ ಮಾಡಿಕೊಳ್ಳಬಹುದಾಗಿದೆ.

ಎಚ್‌ಪಿ 15 - BE002TU 15.6 ಇಂಚಿನ ಲ್ಯಾಪ್‌ಟಾಪ್

ಎಚ್‌ಪಿ 15 - BE002TU 15.6 ಇಂಚಿನ ಲ್ಯಾಪ್‌ಟಾಪ್

ಪ್ರಸ್ತುತ, ಮಧ್ಯಮ ಕ್ರಮಾಂಕದ ಲ್ಯಾಪ್‌ಟಾಪ್‌ಗಳು ಇಲೆಕ್ಟ್ರಾನಿಕ್ ಡಿವೈಸ್‌ನಾದ್ಯಂತ ಹೆಚ್ಚು ಜನಪ್ರಿಯ ಎಂದೆನಿಸಿದೆ. ಅಮೆಜಾನ್ ಇಂಡಿಯಾದಲ್ಲಿ ಎಚ್‌ಪಿ 15 - BE002TU 15.6 ಇಂಚಿನ ಲ್ಯಾಪ್‌ಟಾಪ್ ಅನ್ನು ಖರೀದಿಸಬಹುದಾಗಿದ್ದು, ಇದರ ಬೆಲೆ ರೂ 21,490 ಆಗಿದೆ ಮತ್ತು ವಿನಾಯಿತಿ ದರ ರೂ 2,864 ಆಗಿದೆ. ಈ ಲ್ಯಾಪ್‌ಟಾಪ್ ಅನ್ನು ಇಎಮ್ಐ ಆರಂಭ ಬೆಲೆ ರೂ 1,919 ರಿಂದ ಖರೀದಿ ಮಾಡಬಹುದಾಗಿದೆ.

ಪ್ಯಾನಸೋನಿಕ್ ಎಲುಗಾ A2 ಗೋಲ್ಡ್

ಪ್ಯಾನಸೋನಿಕ್ ಎಲುಗಾ A2 ಗೋಲ್ಡ್

ಬಜೆಟ್ ಶ್ರೇಣಿಯಲ್ಲಿರುವ ಸ್ಮಾರ್ಟ್‌ಫೋನ್‌ಗಳ ಖರೀದಿ ಮಾಡಬೇಕೆಂದಿದ್ದೀರಾ? ಪ್ಯಾನಸೋನಿಕ್ ಎಲುಗಾ ಎ2 ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್ ಇಂಡಿಯಾದಲ್ಲಿ ರೂ 8,640 ಕ್ಕೆ ಖರೀದಿ ಮಾಡಬಹುದಾಗಿದೆ. 4000mAh ಬ್ಯಾಟರಿಯೊಂದಿಗೆ ಇದು ಬಂದಿದ್ದು, ದಿನಪೂರ್ತಿ ಇದನ್ನು ಬಳಸಿಕೊಳ್ಳಬಹುದಾಗಿದೆ ತನ್ನ 4ಜಿ ವೋಲ್ಟ್ ಫೀಚರ್‌ನೊಂದಿಗೆ ಇದು 4ಜಿ ಸಿಮ್‌ಗೂ ಬೆಂಬಲವನ್ನು ನೀಡುತ್ತಿದೆ. ಗೋಲ್ಡನ್ ಬಣ್ಣದಲ್ಲಿ ಇದು ಲಭ್ಯವಿದ್ದು, ಅಮೆಜಾನ್ ಪ್ರೈಮ್‌ನ 1 ದಿನದ ಡೆಲಿವರಿಯನ್ನು ನಿಮಗೆ ಆಯ್ಕೆಮಾಡಿಕೊಳ್ಳಬಹುದಾಗಿದೆ.

Most Read Articles
Best Mobiles in India

English summary
Amazon India also conducts "Great Saving Every Day", with lots of quick deals, deal of the day and other offers! Today, we have picked top 10 deals, that might benefit you.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more