ಐಫೋನ್ X ಕೊಲ್ಲಲು ಮುಂದಾದ ಆಪಲ್: ದುಬಾರಿ ಐಫೋನ್ ಇನ್ನು ನೆನಪು ಮಾತ್ರ..!

Written By:

ಕಳೆದ ವರ್ಷದ ಕೊನೆಯ ಭಾಗದಲ್ಲಿ ಮಾರುಕಟ್ಟೆಯನ್ನು ಪ್ರವೇಶ ಮಾಡಿದ್ದ ಆಪಲ್ ಐಫೋನ್ X ಜಾಗತಿಕವಾಗಿ ಹೆಚ್ಚಿನ ಬೇಡಿಕೆಯನ್ನು ಹೊಂದಿದಲ್ಲದೇ, ತನ್ನದೇ ವಿಶೇಷ ಮಾದರಿಯ ಫುಲ್‌ ಸ್ಕ್ರಿನ್ ಡಿಸ್‌ಪ್ಲೇ, ಫೇಸ್‌ ಐಡಿ ಸೇರಿದಂತೆ ಹೊಸ ಹೊಸ ಆಯ್ಕೆಗಳ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಮಾರುಕಟ್ಟೆಯಲ್ಲಿ ಲಭ್ಯವಿರುವ ಅತೀ ದುಬಾರಿ ಬೆಲೆಯ ಐಫೋನ್ ಎನ್ನುವ ಖ್ಯಾತಿಯನ್ನು ಸಹ ಐಫೋನ್ X ಪಡೆದುಕೊಂಡಿತ್ತು.

ಐಫೋನ್ X ಕೊಲ್ಲಲು ಮುಂದಾದ ಆಪಲ್: ದುಬಾರಿ ಐಫೋನ್ ಇನ್ನು ನೆನಪು ಮಾತ್ರ..!


ಆದರೆ ಈ ಫೋನ್ ಇನ್ನು ಮಾರುಕಟ್ಟೆಗೆ ಬಂದು ಒಂದು ವರ್ಷವಾಗುವ ಮುನ್ನವೇ ಮಾರುಕಟ್ಟೆಯಿಂದ ಮರೆಯಾಗಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಐಫೋನ್ ಹೆಚ್ಚಿನ ಬೇಡಿಕೆಯನ್ನು ಉಳಿಸಿಕೊಂಡಿದ್ದರೂ ಸಹ ಮತ್ತೆ ಮಾರುಕಟ್ಟೆಗೆ ಹೊಸ ಪ್ರೋಡೆಕ್ಷನ್ ಅನ್ನು ಬಿಡುಗಡೆ ಮಾಡುವುದಿಲ್ಲ ಎಂದು ಆಪಲ್ ತಿಳಿಸಿದೆ. ಕಾರಣ ಮುಂದಿನ ವರ್ಷದಲ್ಲಿ ಹೊಸ ಐಫೋನ್‌ಗಳು ಮಾರುಕಟ್ಟೆಗೆ ಬರಲಿದ್ದು, ಈ ಹಿನ್ನಲೆಯಲ್ಲಿ ಬೇರೆ ಫೋನ್‌ಗಳಿಗೆ ಹೊಡೆತ ಬಿಳಬಾರದು ಎನ್ನುವ ಕಾರಣಕ್ಕೆ ಐಫೋನ್ X ಪ್ರೋಡಕ್ಷನ್ ನಿಲ್ಲಲಿದೆ.

ಓದಿರಿ: ವಾಟ್ಸ್‌ಆಪ್‌ನಲ್ಲಿ ಕೇವಲ ಚಾಟಿಂಗ್ ಅಲ್ಲ, ದುಡ್ಡು ಮಾಡಿ..! ಹೇಗೆ..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
18 ಮಿಲಿಯನ್ ಫೋನ್ ಮಾರಾಟ:

18 ಮಿಲಿಯನ್ ಫೋನ್ ಮಾರಾಟ:

ಈಗಾಗಲೇ ಮಾರುಕಟ್ಟೆಯಲ್ಲಿ ಐಫೋನ್ X ಬೇಡಿಕೆ ಹೆಚ್ಚಾಗಿದ್ದರೂ ಸಹ ಆಪಲ್ ನಿರೀಕ್ಷೆಯಂತೆ ಫೋನ್ ಮಾರಾಟವಾಗಿಲ್ಲ ಎನ್ನುವುದು ಒಂದು ಫೋನ್ ನಿರ್ಮಾಣವನ್ನು ನಿಲ್ಲಿಸಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಈಗಾಗಲೇ 18 ಮಿಲಿಯನ್ ಫೋನ್ ಮಾರಾಟವಾಗಿದೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಇದರ ಬೇಡಿಕೆಯೂ ಇಳಿಕೆಯಾಗಲಿದೆ ಎನ್ನುವುದು ಆಪಲ್ ಲೆಕ್ಕಚಾರವಾಗಿದೆ. ಈ ಹಿನ್ನಲೆಯಲ್ಲಿ ಹೊಸ ಫೋನ್ ಉತ್ಪಾದನೆಯಾಗುವುದಿಲ್ಲ ಎನ್ನಲಾಗಿದೆ.

2018 ರ ಮಧ್ಯಭಾಗ:

2018 ರ ಮಧ್ಯಭಾಗ:

ಈಗಾಗಲೇ ಉತ್ಪಾದನೆಗೊಂಡಿರುವ ಐಫೋನ್ X ಮಾತ್ರವೇ ಜಾಗತಿಕವಾಗಿ ಮಾರಾಟವಾಗಲಿದ್ದು, ಸ್ಟಾಕ್ ಕೊನೆಯಾದ ನಂತರದಲ್ಲಿ ಇಲ್ಲವೇ 2018 ರ ಮಧ್ಯಭಾಗದಲ್ಲಿ ಐಫೋನ್ X ಮಾರುಕಟ್ಟೆಯಿಂದ ನಾಪತ್ತೆಯಾಗಲಿದೆ ಎನ್ನಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಈ ಪೋನ್ ಆಫರ್ ನಲ್ಲಿ ಲಭ್ಯವಿದೆ. ಖರೀದಿಸಲು ಇದೇ ಸುಸಮಯವಾಗಿದೆ.

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ಆಪಲ್‌ಗೆ ಲಾಸ್‌ ಇಲ್ಲ:

ಆಪಲ್‌ಗೆ ಲಾಸ್‌ ಇಲ್ಲ:

2018 ರ ಮಧ್ಯಭಾಗದಲ್ಲಿ ಐಫೋನ್ X ಮಾರಾಟವನ್ನು ನಿಲ್ಲಿಸಿದರೂ ಸಹ ಆಪಲ್‌ಗೆ ಯಾವುದೇ ಲಾಸ್ ಆಗುವುದಿಲ್ಲ ಎನ್ನಲಾಗಿದೆ. ಆದರೆ ನಿರೀಕ್ಷಿಸಿದ ಪ್ರಮಾಣದಲ್ಲಿ ಲಾಭಾಂಶ ದೊರೆಯುವುದಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಐಫೋನ್ X ಸ್ಟಾಪ್ ಮಾಡಿ, ಹೊಸ ಐಫೋನ್ ಲಾಂಚ್ ಮಾಡುವ ಪ್ರಯತ್ನವನ್ನು ಮಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Say goodbye to Apple iPhone X: End of life. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot