ವಾಟ್ಸ್‌ಆಪ್‌ನಲ್ಲಿ ಕೇವಲ ಚಾಟಿಂಗ್ ಅಲ್ಲ, ದುಡ್ಡು ಮಾಡಿ..! ಹೇಗೆ..?

|

ಫೇಸ್‌ಬುಕ್ ಮಾಲೀಕತ್ವದ ವಾಟ್ಸ್ಆಪ್ ಕೇವಲ ಚಾಟಿಂಗ್ ಮಾಡುಲು ಮಾತ್ರವೇ ಸೀಮಿತವಾಗಿಲ್ಲ. ಬದಲಿಗೆ ಹಣ ಸಂಪಾದನೆಯ ಮಾರ್ಗವನ್ನು ತೋರಿಸಿಕೊಟ್ಟಿದೆ. ಇದಕ್ಕಾಗಿಯೇ ತನ್ನ ಬಳಕೆದಾರರಿಗೆ ಹೊಸ ಆಪ್ ವೊಂದನ್ನು ಪರಿಚಯ ಮಾಡಿದ್ದು, ಕಳೆದ ವಾರ ಜಾಗತಿಕವಾಗಿ ಈ ಆಪ್ ಲಾಂಚ್ ಆಗಿದ್ದ ವಾಟ್ಸ್‌ಆಪ್ ಬಿಸ್ನೆಸ್ ಆಪ್‌, ಇಂದಿನಿಂದ ಭಾರತದಲ್ಲಿಯೂ ಬಳಕೆಗೆ ಲಭ್ಯವಿದೆ.

ವಾಟ್ಸ್‌ಆಪ್‌ನಲ್ಲಿ ಕೇವಲ ಚಾಟಿಂಗ್ ಅಲ್ಲ, ದುಡ್ಡು ಮಾಡಿ..! ಹೇಗೆ..?

ಈ ಆಪ್ ಉಪಯೋಗವೇನು ಮತ್ತು ವಾಟ್ಸ್‌ಆಪ್ ಬಿಸ್ನೆಸ್ ಆಪ್‌ ಬಳಕೆಯಿಂದ ಯಾವ ರೀತಿಯಲ್ಲಿ ಲಾಭವಾಗಲಿದೆ. ಜೊತೆಗೆ ಈ ಆಪ್ ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ. ಈ ಆಪ್ ನ ಸರಿಯಾದ ಬಳಕೆಯಿಂದ ನೀವು ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು.

ಓದಿರಿ: 400 MP ಕ್ಯಾಮೆರಾ, ಒಂದು ಫೋಟೋ ಗಾತ್ರ 2.5GB: ಬೆಲೆ ಊಹಿಸಲು ಆಗಲ್ಲ...!

ಸದ್ಯ ಆಂಡ್ರಾಯ್ಡ್‌ಗೆ ಮಾತ್ರ:

ಸದ್ಯ ಆಂಡ್ರಾಯ್ಡ್‌ಗೆ ಮಾತ್ರ:

ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ವಾಟ್ಸ್‌ಆಪ್ ಬಿಸ್ನೆಸ್ ಆಪ್‌ ಭಾರತದಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಪ್ಲೇಸ್ಟೋರಿನಲ್ಲಿ ವಾಟ್ಸ್‌ಆಪ್ ಬಿಸ್ನೆಸ್ ಆಪ್‌ ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡಿಕೊಳ್ಳಬಹುದಾಗಿದೆ. ಸಾಮಾನ್ಯ ವಾಟ್ಸ್‌ಆಪ್ ಮತ್ತು ವಾಟ್ಸ್‌ಆಪ್ ಬಿಸ್ನೆಸ್ ಆಪ್‌ ನಡುವೆ ಹೆಚ್ಚಿನ ವ್ಯತ್ಯಾಸವಿದೆ.

ಯಾರಿಗೆ ಉಪಯೋಗ:

ಯಾರಿಗೆ ಉಪಯೋಗ:

ಸಣ್ಣ ಪ್ರಮಾಣದ ವ್ಯಾಪಾರಗಾರರಿಗೆ ಮತ್ತು ಹೊಸದಾಗಿ ವ್ಯಾಪಾರವನ್ನು ಆರಂಭಿಸುವವರಿಗೆ ವಾಟ್ಸ್‌ಆಪ್ ಬಿಸ್ನೆಸ್ ಆಪ್‌ ಸಹಾಯಕಾರಿಯಾಗಿದೆ. ಅಲ್ಲದೇ ಮನೆಯಲ್ಲಿಯೇ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡುವವರಿಗೆ ವಾಟ್ಸ್‌ಆಪ್ ಬಿಸ್ನೆಸ್ ಆಪ್‌ ಒಳ್ಳೆಯ ವೇದಿಕೆಯಾಗಲಿದೆ. ಇಲ್ಲಿ ಹೆಚ್ಚಿನ ಜನರನ್ನು ತಲುಪುವ ಸಾಧ್ಯತೆ ಇದೆ.

ಗ್ರಾಹಕರೊಂದಿಗೆ ಒಡನಾಟ:

ಗ್ರಾಹಕರೊಂದಿಗೆ ಒಡನಾಟ:

ಇದಲ್ಲದೇ ವಾಟ್ಸ್‌ಆಪ್ ಬಿಸ್ನೆಸ್ ಆಪ್‌ ಮೂಲಕ ಮಾರಾಟಗಾರರು ತಮ್ಮ ಗ್ರಾಹಕರೊಂದಿಗೆ ನೇರವಾಗಿ ಸಂವಹನ ನಡೆಸಬಹುದಾಗಿದೆ. ಇದರಿಂದಾಗಿ ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಉತ್ತಮ ಬಾಂಧವ್ಯವು ಬೆಳೆಯಲಿದೆ ಎನ್ನಲಾಗಿದೆ. ಇದು ಉತ್ತಮ ವೇದಿಕೆಯನ್ನು ಗ್ರಾಹಕರಿಗೆ ಮತ್ತು ಮಾರಾಟಗಾರರಿಗೆ ಕಲ್ಪಿಸಲಿದೆ.

How to save WhatsApp Status other than taking screenshots!! Kannada
ಸಾಮಾಹಿಕ ಜಾಲತಾಣ:

ಸಾಮಾಹಿಕ ಜಾಲತಾಣ:

ವಾಟ್ಸ್‌ಆಪ್ ಬಿಸ್ನೆಸ್ ಆಪ್ ನಲ್ಲಿ ಬಳಕೆದಾರರು ಈ ಹಿಂದೆಯೇ ಕ್ರಿಯೇಟ್ ಮಾಡಿರುವ ತಮ್ಮ ಫೇಸ್‌ಬುಕ್ ಪೇಜ್‌ ಲಿಂಕ್ ಅನ್ನು ಶೇರ್ ಮಾಡಬಹುದಾಗಿದೆ. ಈ ಮೂಲಕ ಹೆಚ್ಚಿನ ಜನರನ್ನು ತಲುಪಬಹುದಾಗಿದೆ. ಅಲ್ಲದೇ ಇಲ್ಲಿನ ಗ್ರಾಹಕರಿಗೂ ಅಲ್ಲಿನ ಚಿತ್ರಣವನ್ನು ತೋರಿಸಬಹುದಾಗಿದೆ.

ವ್ಯಾಪಾರದ ಸಂಫೂರ್ಣ ಚಿತ್ರಣ:

ವ್ಯಾಪಾರದ ಸಂಫೂರ್ಣ ಚಿತ್ರಣ:

ನಿಮ್ಮ ವ್ಯಾಪಾರದ ಕುರಿತು ಎಲ್ಲಾ ಮಾಹಿತಿಯನ್ನು ವಾಟ್ಸ್‌ಆಪ್ ಬಿಸ್ನೆಸ್ ಆಪ್ ನಲ್ಲಿ ತರೆದು ಇಡಬಹುದಾಗಿದೆ. ಅಂಗಡಿ ಅಥವಾ ವ್ಯಾಪಾರದ ಸಮಯ, ಯಾವ ಮಾದರಿಯ ವಸ್ತುಗಳ ಮಾರಾಟ, ಅಲ್ಲದೇ ಯಾವ ಯಾವ ವಸ್ತುಗಳು ಗ್ರಾಹಕರಿಗೆ ಲಭ್ಯವಿರಲಿದೆ ಎಂಬುದರ ಸಂಪೂರ್ಣ ವಿವರವನ್ನು ಪ್ರೋಫೈಲ್ನಲ್ಲಿಯೇ ಶೇರ್ ಮಾಡಬಹುದಾಗಿದೆ.

Best Mobiles in India

English summary
WhatsApp Business App Now Available in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X