Home
ಮೊಬೈಲ್

Google Pixel 10 ಸರಣಿಯಲ್ಲಿ 4 ಫೋನ್‌ಗಳು ಬಿಡುಗಡೆ: ಸಂಪೂರ್ಣ ಮಾಹಿತಿ ಇಲ್ಲಿದೆ!

ಟೆಕ್ ದೈತ್ಯ ಗೂಗಲ್ ಬುಧವಾರ ರಾತ್ರಿ ಆಯೋಜಿಸಿದ್ದ 'ಮೇಡ್ ಬೈ ಗೂಗಲ್' ಈವೆಂಟ್‌ನಲ್ಲಿ ಹೊಸ Pixel 10 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಜಾಗತಿಕವಾಗಿ ಬಿಡುಗಡೆ ಮಾಡಿದೆ. ಈ ಹೊಸ ಸರಣಿಯಲ್ಲಿ Pixel 10, Pixel 10 pro, Pixel 10 pro XL ಮತ್ತು Pixel 10 pro ಫೋಲ್ಡ್ ಮಾದರಿಗಳನ್ನು ಪರಿಚಯಿಸಲಾಗಿದೆ. ಈ ಎಲ್ಲಾ ಫೋನ್‌ಗಳು ಗೂಗಲ್‌ನ ಇನ್-ಹೌಸ್ ಟೆನ್ಸರ್ ಜಿ5 ಚಿಪ್‌ಸೆಟ್ ಮತ್ತು ಹೆಚ್ಚುವರಿ ಭದ್ರತೆಗಾಗಿ ಟೈಟಾನ್ ಎಂ2 ಭದ್ರತಾ ಚಿಪ್ ಹೊಂದಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಒದಗಿಸುತ್ತವೆ. ಈ ಫೋನ್‌ಗಳಲ್ಲಿ ಬಹುನಿರೀಕ್ಷಿತ Pixel 10 pro Fold ಫೋನಿನ ಕುರಿತು ನಾವು ಹಿಂದಿನ ಲೇಖನದಲ್ಲಿ ಮಾಹಿತಿಯನ್ನು ಒದಗಿಸಿದ್ದೇವೆ. ಇದೀಗ Pixel 10, Pixel 10 pro ಮತ್ತು Pixel 10 pro XL ಫೋನ್‌ಗಳು ಹೇಗಿವೆ ಎಂಬುದನ್ನು ನೋಡೋಣ ಬನ್ನಿ.

ಭಾರತದಲ್ಲಿ ಬೆಲೆ, ಲಭ್ಯತೆ
ಭಾರತದಲ್ಲಿ ಬೇಸ್ Pixel 10 ಫೋನ್‌ನ 256GB ಆವೃತ್ತಿಗೆ ₹79,999 ಬೆಲೆ ನಿಗದಿಪಡಿಸಲಾಗಿದೆ. ಇದು ಇಂಡಿಗೋ, ಫ್ರಾಸ್ಟ್, ಲೆಮನ್‌ಗ್ರಾಸ್ ಮತ್ತು ಅಬ್ಸಿಡಿಯನ್ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು, Pixel 10 pro ಬೆಲೆ ₹1,09,999 ಮತ್ತು Pixel 10 pro XL ಬೆಲೆ ₹1,24,999 ಗಳಾಗಿವೆ. ಈ ಎರಡೂ ಫೋನ್‌ಗಳು ಜೇಡ್, ಮೂನ್‌ಸ್ಟೋನ್ ಮತ್ತು ಅಬ್ಸಿಡಿಯನ್ ಬಣ್ಣಗಳ ಜೊತೆಗೆ, Pixel 10 pro ಹೆಚ್ಚುವರಿ ಪೋರ್ಸಲೇನ್ ರೂಪಾಂತರದಲ್ಲಿಯೂ ಲಭ್ಯವಿದೆ. ಈ ಎಲ್ಲಾ Pixel ಫೋನ್‌ಗಳು ಫ್ಲಿಪ್‌ಕಾರ್ಟ್ ಮೂಲಕ ಮಾರಾಟಕ್ಕೆ ಬರಲಿವೆ.

ಗೂಗಲ್ Pixel 10: ಪ್ರಮುಖ ವೈಶಿಷ್ಟ್ಯಗಳು
ಬೇಸ್ Pixel 10 ಮಾದರಿಯು 6.3-ಇಂಚಿನ ಪೂರ್ಣ-ಎಚ್‌ಡಿ+ (1,080x2,424 Pixel‌ಗಳು) OLED ಸೂಪರ್ ಆಕ್ಟುವಾ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 3,000 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ನೀಡುತ್ತದೆ. ಡಿಸ್ಪ್ಲೇ ಮತ್ತು ಹಿಂಭಾಗದ ಪ್ಯಾನೆಲ್ ಎರಡೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಪಡೆದಿವೆ. ಈ ಫೋನ್ IP68 ರೇಟಿಂಗ್‌ ಹೊಂದಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುತ್ತದೆ. ಮತ್ತು ಸುರಕ್ಷತೆಗಾಗಿ, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ನೀಡಲಾಗಿದೆ.

Google Pixel 10 ಸರಣಿಯಲ್ಲಿ 4 ಫೋನ್‌ಗಳು ಬಿಡುಗಡೆ: ಸಂಪೂರ್ಣ ಮಾಹಿತಿ ಇಲ್ಲಿದೆ!

ಕಾರ್ಯಕ್ಷಮತೆಗಾಗಿ, ಈ ಫೋನ್ 3nm ಟೆನ್ಸರ್ G5 SoC ಮತ್ತು ಟೈಟಾನ್ M2 ಸೆಕ್ಯುರಿಟಿ ಚಿಪ್‌ನಿಂದ ಚಾಲಿತವಾಗಿದ್ದು, 12GB RAM ಮತ್ತು 256GB ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಜೋಡಿಯಾಗಿದೆ. ಸಾಫ್‌ವೇರ್ ವಿಭಾಗದಲ್ಲಿ, ಈ ಫೋನ್ ಆಂಡ್ರಾಯ್ಡ್ 16 ನೊಂದಿಗೆ ಕಾರ್ಯನಿರ್ವಹಿಸಲಿದೆ ಮತ್ತು ಏಳು ವರ್ಷಗಳ OS ಮತ್ತು ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ಪಡೆಯುತ್ತದೆ. ಫೋನ್ ಗೂಗಲ್ ಜೆಮಿನಿಯನ್ನು ಬೆಂಬಲಿಸುತ್ತದೆ ಮತ್ತು ಮೆಟೀರಿಯಲ್ ಯೂ ಎಕ್ಸ್‌ಪ್ರೆಸಿವ್ ವಿನ್ಯಾಸ ವ್ಯವಸ್ಥೆಯನ್ನು ನೀಡುತ್ತದೆ

ಕ್ಯಾಮೆರಾ ವಿಭಾಗದಲ್ಲಿ, Pixel 10 ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 48-ಮೆಗಾPixel ಪ್ರಾಥಮಿಕ ಸಂವೇದಕ, 10.8-ಮೆಗಾPixel ಟೆಲಿಫೋಟೋ ಕ್ಯಾಮೆರಾ (5x ಜೂಮ್ ಬೆಂಬಲದೊಂದಿಗೆ), ಮತ್ತು 13-ಮೆಗಾPixel ಅಲ್ಟ್ರಾವೈಡ್ ಶೂಟರ್. ಸೆಲ್ಫಿಗಾಗಿ 10.5-ಮೆಗಾPixel ಫ್ರಂಟ್ ಕ್ಯಾಮೆರಾ ಇದೆ. ಈ ಫೋನ್ 30W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4,970mAh ಬ್ಯಾಟರಿ ಹೊಂದಿದೆ. eSIM, 5G, 4G, GPS, GNSS, Google Cast, ಬ್ಲೂಟೂತ್ 6, Wi-Fi, NFC ಮತ್ತು USB ಟೈಪ್-C ಸಂಪರ್ಕವನ್ನು ಬೆಂಬಲಿಸುತ್ತದೆ.

Google Pixel 10 ಸರಣಿಯಲ್ಲಿ 4 ಫೋನ್‌ಗಳು ಬಿಡುಗಡೆ: ಸಂಪೂರ್ಣ ಮಾಹಿತಿ ಇಲ್ಲಿದೆ!

Pixel 10 pro ಮತ್ತು Pixel 10 pro XL: ಪ್ರಮುಖ ವೈಶಿಷ್ಟ್ಯಗಳು

ಇತ್ತ Pixel 10 pro ಮತ್ತು pro XL ಎರಡೂ ಮಾದರಿಗಳು ದೊಡ್ಡ ಡಿಸ್ಪ್ಲೇ ಹೊಂದಿವೆ. Pixel 10 pro 6.3-ಇಂಚಿನ ಸೂಪರ್ ಆಕ್ಟುವಾ ಡಿಸ್ಪ್ಲೇ (1,280x2,856 Pixel‌ಗಳು) ಹೊಂದಿದ್ದರೆ, Pixel 10 pro XL 6.8-ಇಂಚಿನ ದೊಡ್ಡ ಪರದೆಯನ್ನು (1,344x2,992 Pixel‌ಗಳು) ಹೊಂದಿದೆ. ಎರಡೂ ಮಾದರಿಗಳು ಟೆನ್ಸರ್ ಜಿ5 ಚಿಪ್‌ಸೆಟ್ ಜೊತೆಗೆ 16GB RAM ಅನ್ನು ಒಳಗೊಂಡಿವೆ. ಇವು 50-ಮೆಗಾPixel ಮುಖ್ಯ ಸಂವೇದಕ, 48-ಮೆಗಾPixel 5x ಟೆಲಿಫೋಟೋ ಮತ್ತು 48-ಮೆಗಾPixel ಅಲ್ಟ್ರಾವೈಡ್ ಕ್ಯಾಮೆರಾಗಳ ಟ್ರಿಪಲ್ ರಿಯರ್ ಸೆಟಪ್ ಹೊಂದಿವೆ. ಸೆಲ್ಫಿಗಾಗಿ 42-ಮೆಗಾPixel ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ ಸಾಮರ್ಥ್ಯದಲ್ಲಿ, Pixel 10 pro 4,870mAh ಬ್ಯಾಟರಿ ಹೊಂದಿದ್ದರೆ, Pixel 10 pro XL 5,200mAh ಬ್ಯಾಟರಿ ಹೊಂದಿದೆ. pro XL 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 25W ವರೆಗೆ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಎಲ್ಲಾ ಫೋನ್‌ಗಳು 5G, Wi-Fi, ಬ್ಲೂಟೂತ್ 6 ಮತ್ತು NFC ನಂತಹ ಸಂಪರ್ಕ ಆಯ್ಕೆಗಳನ್ನು ಹೊಂದಿವೆ. ಗೂಗಲ್‌ನ ಹೊಸ Pixel 10 ಸರಣಿ ಫೋನ್‌ಗಳು ಅತ್ಯಾಧುನಿಕ ವೈಶಿಷ್ಟ್ಯಗಳು, ಶಕ್ತಿಶಾಲಿ ಪ್ರೊಸೆಸರ್ ಮತ್ತು ಅತ್ಯುತ್ತಮ ಕ್ಯಾಮೆರಾ ಸಾಮರ್ಥ್ಯಗಳೊಂದಿಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುವ ನಿರೀಕ್ಷೆಯಿದೆ.

Best Mobiles in India

English summary
The new Pixel 10 series lands in India with Tensor G5 and Gemini-powered camera innovations.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+