Home
ಮೊಬೈಲ್

ಐಫೋನಿಗೆ ಸೆಡ್ಡು ಹೊಡೆಯುತ್ತಾ ಗೂಗಲ್ ಪಿಕ್ಸೆಲ್ ಫೋನ್‌ಗಳು..?

ಕಳೆದ ವರ್ಷ ಬಿಡುಗಡೆ ಮಾಡಿದ್ದ ಗೂಗಲ್ ಪಿಕ್ಸೆಲ್ ಮತ್ತು ಪಿಕ್ಸಲ್ XLನ ಮುಂದುವರೆದ ಭಾಗ ಈ ಹೊಸ ಫೋನ್ ಗಳಾಗಿದ್ದು, ಈ ಫೋನ್ ಗಳು ಸಹ ಬ್ರೆಜಿಲ್ ಫ್ರಿ ಡಿಸೈನ್ ಹೊಂದಿದ್ದು, ಗ್ಯಾಲೆಕ್ಸಿ 58 ಮಾದರಿಯ ವಿನ್ಯಾಸದ ಮಾದರಿಯಲ್ಲಿಯೇ ಇದೆ.

By Srinidhi

ಭಾರಿ ಕುತೂಹಲವನ್ನು ಕೆರಳಿಸಿದ್ದ ಸರ್ಚ್ ಇಂಜಿನ್ ದೈತ್ಯ ಗೂಗಲ್ ಫೋನ್‌ಗಳಾದ ಗೂಗಲ್ ಪಿಕ್ಸೆಲ್ 2 ಮತ್ತು ಪಿಕ್ಸಲ್ 2 XL ಲಾಂಚ್ ಆಗಿದ್ದು, ಇದನ್ನು ಸ್ವತಃ ಗೂಗಲ್ ವಿನ್ಯಾಸ ಮಾಡಿದ್ದು, ತನ್ನದೇ ಬ್ರಾಂಡಿನಡಿಯಲ್ಲಿ ನಿರ್ಮಿಸಿದೆ ಎನ್ನಲಾಗಿದೆ.

ಐಫೋನಿಗೆ ಸೆಡ್ಡು ಹೊಡೆಯುತ್ತಾ ಗೂಗಲ್ ಪಿಕ್ಸೆಲ್ ಫೋನ್‌ಗಳು..?

ಓದಿರಿ: ವಾಟ್ಸ್‌ಆಪ್ ಬಳಕೆದಾರರಿಗೆ ಆಪಲ್ ಮಾದರಿಯ ಹೊಸ ಎಮೋಜಿಗಳು..!!

ಕಳೆದ ವರ್ಷ ಬಿಡುಗಡೆ ಮಾಡಿದ್ದ ಗೂಗಲ್ ಪಿಕ್ಸೆಲ್ ಮತ್ತು ಪಿಕ್ಸಲ್ XLನ ಮುಂದುವರೆದ ಭಾಗ ಈ ಹೊಸ ಫೋನ್ ಗಳಾಗಿದ್ದು, ಈ ಫೋನ್ ಗಳು ಸಹ ಬ್ರೆಜಿಲ್ ಫ್ರಿ ಡಿಸೈನ್ ಹೊಂದಿದ್ದು, ಗ್ಯಾಲೆಕ್ಸಿ 58 ಮಾದರಿಯ ವಿನ್ಯಾಸದ ಮಾದರಿಯಲ್ಲಿಯೇ ಇದೆ.

ಗೂಗಲ್ ಪಿಕ್ಸೆಲ್ 2

ಗೂಗಲ್ ಪಿಕ್ಸೆಲ್ 2

ಗೂಗಲ್ ಪಿಕ್ಸೆಲ್ 2 ಸ್ಮಾರ್ಟ್‌ಫೋನಿನಲ್ಲಿ 5 ಇಂಚಿನ ಅಮೊಲೈಡ್ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, 2.5D ಕಾರ್ನಿಂಗ್ ಗೊರಿಲ್ಲ ಗ್ಲಾಸ್ 5 ಸುರಕ್ಷತೆಯನ್ನು ಹೊಂದಿವೆ. ಈ ಸ್ಮಾರ್ಟ್‌ಫೋನಿನಲ್ಲಿ 2.35GHz + 1.9GHz ವೇಗದ 64ಬಿಟ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಇದ್ದು, 4G RAM ಮತ್ತು 540 GPU ಸಹ ಇದೆ. ಈ ಫೋನಿನಲ್ಲಿ 2700mAh ಬ್ಯಾಟರಿಯನ್ನು ಕಾಣಬಹುದಾಗಿದ್ದು, ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಈ ಫೋನಿನ ಹಿಂಭಾಗದಲ್ಲಿ 12.2MP ಕ್ಯಾಮೆರಾ, ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಗೂಗಲ್ ಪಿಕ್ಸಲ್ 2 XL

ಗೂಗಲ್ ಪಿಕ್ಸಲ್ 2 XL

ಗೂಗಲ್ ಪಿಕ್ಸಲ್ 2 XL ಫೋನಿನಲ್ಲಿ 6 ಇಂಚಿನ QHD ಗುಣಮಟ್ಟದ OLED ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಇದರ ಮೇಲ್ಭಾಗದಲ್ಲಿ 3D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆಯನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನಿನಲ್ಲಿ 2.35GHz + 1.9GHz ವೇಗದ 64ಬಿಟ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಇದ್ದು, 4G RAM ಮತ್ತು 540 GPU ಸಹ ಇದೆ. ಅಲ್ಲದೇ ಈ ಫೋನಿನ ಹಿಂಭಾಗದಲ್ಲಿ 12.2MP ಕ್ಯಾಮೆರಾ, ಮುಮಭಾಗದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ 3530 mAh ಬ್ಯಾಟರಿಯೂ ಇದೆ. ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಿಸಲಿದೆ.

ಎರಡು ಫೋನುಗಳ ವಿಶೇಷತೆಗಳು:

ಎರಡು ಫೋನುಗಳ ವಿಶೇಷತೆಗಳು:

ಗೂಗಲ್ ಪಿಕ್ಸೆಲ್ 2 ಮತ್ತು ಪಿಕ್ಸಲ್ 2 XL ಸ್ಮಾರ್ಟ್‌ಫೋನ್‌ಗಳು ಅಲ್ಯುಮಿನಿಯಮ್ ಹೊರ ಕವಚವನ್ನು ಹೊಂದಿದ್ದು, ಎರಡು ಆವೃತ್ತಿಗಳಲ್ಲಿ ದೊರೆಯಲಿದೆ. 64GB ಮತ್ತು 128GB. ಅಲ್ಲದೇ ಉತ್ತಮ ಕರೆ ಮಾಡುವುದಕ್ಕಾಗಿ ಮೂರು ಮೈಕ್‌ಗಳನ್ನು ಹೊಂದಿವೆ. ಇದಲ್ಲದೇ ಈ ಫೋನುಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳು ತೀರಾ ವಿಶೇಷವಾಗಿದ್ದು, ಡ್ಯುಯಲ್ ಪಿಕ್ಸಲ್ ತಂತ್ರಜ್ಞಾನವನ್ನು ಹೊಂದಿವೆ.

ಬೆಲೆ?:

ಬೆಲೆ?:

ಗೂಗಲ್ ಪಿಕ್ಸೆಲ್ 2 64GB ಆವೃತ್ತಿಯ ಬೆಲೆ ಭಾರತೀಯ ರೂಪಾಯಿಗಳಲ್ಲಿ 42,233 ಆಗಲಿದ್ದು, ಬ್ಲಾಕ್, ಬ್ಲೂ ಮತ್ತು ವೈಟ್ ಬಣ್ಣದಲ್ಲಿ ದೊರೆಯಲಿದೆ. ಗೂಗಲ್ ಪಿಕ್ಸೆಲ್ 2 XL 64GB ಆವೃತ್ತಿಯ ಬೆಲೆ ಭಾರತೀಯ ರೂಪಾಯಿಗಳಲ್ಲಿ 55,248 ಆಗಲಿದ್ದು, ಬ್ಲಾಕ್ ಮತ್ತು ವೈಟ್-ಬ್ಲಾಕ್ ನಲ್ಲಿ ದೊರೆಯಲಿದೆ.

ದೊರೆಯುವುದು ಯಾವಾಗ?

ದೊರೆಯುವುದು ಯಾವಾಗ?

ಈ ಫೋನ್‌ಗಳನ್ನು ಇಂದಿನಿಂದಲೇ ಪ್ರೀ ಬುಕಿಂಗ್ ಮಾಡಬಹುದಾಗಿದೆ. ಆಕ್ಟೋಬರ್ 19ಕ್ಕೆ ಲಭ್ಯವಿರಲಿದ್ದು, ಮೊದಲಿಗೆ ಭಾರತ, ಆಸ್ಟೇಲಿಯಾ, ಕೆನೆಡಾ, ಜರ್ಮನಿ, ಯುಕೆ, ಯುಎಸ್‌ ನಲ್ಲಿ ಈ ಫೋನ್ ದೊರೆಯಲಿದೆ ಎನ್ನಲಾಗಿದೆ.

Best Mobiles in India

English summary
When Pixel was introduced in the market it more or less took the mobile world by storm last year. It was basically the first Android phones that Google actually designed and put its own branding on. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+