Subscribe to Gizbot

ಗೂಗಲ್ ಪಿಕ್ಸಲ್ 2 ಫೋನ್‌ನಲ್ಲಿದೆ ಅತ್ಯದ್ಬುತವಾದ ಒಂದು ತಂತ್ರಜ್ಞಾನ!!..ಏನದು ಗೊತ್ತಾ?

Written By:

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬೆಳವಣಿಗೆಗೆ ಸಾಕಷ್ಟು ಶ್ರಮಿಸುತ್ತಿರುವ ಗೂಗಲ್ ಈಗಾಗಲೇ ಹಲವು ತಂತ್ರಜ್ಞಾನಗಳನ್ನು ಪರಿಚಯಿಸಿರುವುದು ನಿಮಗೆಲ್ಲಾ ಗೊತ್ತೇ ಇದೆ. ಅಲ್ಲವೇ? ಅಂತಹ ಕೆಲವೊಂದು ಸಣ್ಣ ತಂತ್ರಜ್ಞಾನಗಳನ್ನು ಗೂಗಲ್ ತನ್ನ ಎರಡನೆ ಪೀಳಿಗೆಯ ಹೊಸ ಪಿಕ್ಸಲ್ 2 ಸ್ಮಾರ್ಟ್‌ಫೋನ್‌ಗಳಲ್ಲಿ ತಂದಿದೆ ಎನ್ನಲಾಗಿದೆ.!!

ಹೌದು, ಗೂಗಲ್‌ನ ಎರಡನೆ ಪೀಳಿಗೆಯ ಹೊಸ ಪಿಕ್ಸಲ್‌ ಸ್ಮಾರ್ಟ್‌ಫೋನ್‌ಗಳು ವಾಹನದಲ್ಲಿ ಚಾಲನೆ ಮಾಡುವಾಗ ಸ್ವಯಂ 'ಡು ನಾಟ್ ಡಿಸ್ಟರ್ಬ್‌' ಆಯ್ಕೆಗೆ ಜಾರಲಿದೆ ಎಂದು ಆಂಡ್ರಾಯ್ಡ್ ಪೊಲೀಸ್ ಹೇಳಿದೆ. ಇನ್ನು ಈ ತಂತ್ರಜ್ಞಾನಕ್ಕಾಗಿ ಸ್ಮಾರ್ಟ್‌ಫೋನ್‌ನಲ್ಲಿ ಒಂದು ವಿಶೇಷವಾದ ಸೆನ್ಸಾರ್ ಸಹ ಅಳವಡಿಕೆ ಮಾಡಲಾಗಿದೆ ಎನ್ನಲಾಗಿದೆ.!!

ಗೂಗಲ್ ಪಿಕ್ಸಲ್ 2 ಫೋನ್‌ನಲ್ಲಿದೆ ಅತ್ಯದ್ಬುತವಾದ ಒಂದು ತಂತ್ರಜ್ಞಾನ!!..ಏನದು?

ಆಂಡ್ರಾಯ್ಡ್ ಪೊಲೀಸ್‌ ವರದಿ ಮಾಡಿರುವ ಪ್ರಕಾರ, ಪಿಕ್ಸಲ್ ಎಂಬಿಯೆಂಟ್ ಸರ್ವೀಸಸ್ ಆಪ್ ಅನ್ನು ಪಿಕ್ಸಲ್‌ ಫೋನ್‌ ಜೊತೆಗೆ ನೀಡಲಾಗಿದ್ದು, ಆಪ್‌ನ ಸ್ಕ್ರೀನ್‌ಶಾಟ್‌ನಲ್ಲಿ ಆಟೊಮ್ಯಾಟಿಕ್ ಸೆಟ್ಟಿಂಗ್ ತೋರಿಸಲಾಗಿದೆ. ಇದರಿಂದಾಗಿ ಡ್ರೈವಿಂಗ್‌ ಮಾಡುವ ಸಂದರ್ಭದಲ್ಲಿ ಡಿಎನ್‌ಡಿ ಮೋಡ್‌ ಆನ್‌ ಸಕ್ರಿಯ ಆಗುತ್ತದೆ ಎಂದು ಹೇಳಿದೆ.!!

ಗೂಗಲ್ ಪಿಕ್ಸಲ್ 2 ಫೋನ್‌ನಲ್ಲಿದೆ ಅತ್ಯದ್ಬುತವಾದ ಒಂದು ತಂತ್ರಜ್ಞಾನ!!..ಏನದು?

ಪಿಕ್ಸಲ್ 2 ಮತ್ತು ಪಿಕ್ಸಲ್‌ 2 ಎಕ್ಸಲ್ ಸ್ಮಾರ್ಟ್‌ಫೋನ್‌ ಮತ್ತು ಡ್ರೆಡೀಮ್ ವ್ಯೂ ವರ್ಚುವಲ್‌ ರಿಯಾಲಿಟಿ ಹೆಡ್‌‌ಸೆಟ್‌ಗಳು ನವಂಬರ್‌ನಿಂದ ಮಾರುಕಟ್ಟೆಗೆ ಎಂಟ್ರಿ ನಿಡಲಿದ್ದು, ಪಿಕ್ಸಲ್‌ ಡಿವೈಸ್‌‌ಗಳಲ್ಲಿ ಬೇರೆ ಏನೆಲ್ಲಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಲಭ್ಯವಿದೆಯೋ ನೋಡಬೇಕು.!!

ಓದಿರಿ: ಬಳಕೆದಾರರ ಎಲ್ಲಾ ಮಾಹಿತಿ ಕದಿಯುತ್ತಿದೆ ಚೀನಾದ 'ಒನ್‌ಪ್ಲಸ್' ಮೊಬೈಲ್ ಕಂಪೆನಿ!!

English summary
Smartphone makers such as Apple and Samsung also introduced their own "DND" mode while driving features this year.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot