ಬಳಕೆದಾರರ ಎಲ್ಲಾ ಮಾಹಿತಿ ಕದಿಯುತ್ತಿದೆ ಚೀನಾದ 'ಒನ್‌ಪ್ಲಸ್' ಮೊಬೈಲ್ ಕಂಪೆನಿ!!
ಒನ್‌ಪ್ಲಸ್ ಮೊಬೈಲ್ ಕಂಪೆನಿ ತನ್ನ ಗ್ರಾಹಕರ ಡೇಟಾವನ್ನು ಕದಿಯುತ್ತಿದೆ ಎನ್ನುವ ಬಹುದೊಡ್ಡ ಆರೋಪಕ್ಕೆ ಗುರಿಯಾಗಿದೆ.!!
ಭಾರತದಲ್ಲಿ ಅತ್ಯದಿಕ ಸೇಲ್ ಆಗುತ್ತಿರುವ ಪ್ರೀಮಿಯರ್ ಫೋನ್‌ಗಳ ಮಾರಾಟಗಾರ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಒನ್‌ಪ್ಲಸ್ ತನ್ನ ಗ್ರಾಹಕರ ಡೇಟಾವನ್ನು ಕದಿಯುತ್ತಿದೆಯೇ? ಹೌದು ಎನ್ನುತ್ತಿದೆ ಒಂದು ವರದಿ.!! ಒನ್‌ಪ್ಲಸ್ ಮೊಬೈಲ್ ಕಂಪೆನಿ ತನ್ನ ಗ್ರಾಹಕರ ಡೇಟಾವನ್ನು ಕದಿಯುತ್ತಿದೆ ಎನ್ನುವ ಬಹುದೊಡ್ಡ ಆರೋಪಕ್ಕೆ ಗುರಿಯಾಗಿದೆ.!!
ಒನ್‌ಪ್ಲಸ್ ತನ್ನ ಆಕ್ಸಿಜನ್ ಒಎಸ್ ಮೂಲಕ ಗ್ರಾಹಕರ IMEI ಸಂಖ್ಯೆ, MAC ವಿಳಾಸ, ಮೊಬೈಲ್ ನೆಟ್ವರ್ಕ್ ಹೆಸರು, Wi-Fi SSIDಗಳು ಮತ್ತು ಫೋನ್ ಸರಣಿ ಸಂಖ್ಯೆಗಳನ್ನು ಕದಿಯುತ್ತಿದೆ ಎಂದು ಹೇಳಲಾಗಿದೆ.! ಈ ಬಗ್ಗೆ ಒನ್‌ಪ್ಲಸ್ 2 ಬಳಕೆದಾರನಾದ ಕ್ರಿಸ್-ಡಿ-ಮೋರ್ ಎಂಬ ವ್ಯಕ್ತಿಯೋರ್ವ ಮಾಹಿತಿ ನೀಡಿ ಗಮನ ಸೆಳೆದಿದ್ದಾನೆ.!!

ಒನ್‌ಪ್ಲಸ್ 2 ಬಳಕೆದಾರನಾದ ಕ್ರಿಸ್-ಡಿ-ಮೋರ್ ಅವರು ತನ್ನ ಸ್ಮಾರ್ಟ್‌ಫೋನ್‌ಗೆ ಡೇಟಾದ ಒಳಹರಿವು ಮತ್ತು ಹೊರಹರಿವು ತಿಳಿಸುವ ಸೆಕ್ಯುರಿಟಿ ಟೂಲ್ ಅಳವಡಿಸಿಕೊಂಡಿದ್ದಾರೆ. ಆದರೆ, ಈ ಸೆಕ್ಯುರಿಟಿ ಟೂಲ್ ತೆರೆಯಲು ಒನ್‌ಪ್ಲಸ್ 2 ಕೊರಿಕೊಳ್ಳುತ್ತಿದೆ. ಜೊತೆಗೆ ಸ್ಮಾರ್ಟ್‌ಫೋನ್ ಸೀರಿಯಲ್ ನಂಬರ್ ಮೂಲಕ, ಮೊಬೈಲ್ ಲಾಕ್ ಮತ್ತು ಅನ್‌ಲಾಕ್ ಅನ್ನು ಟ್ರಾಕ್ ಮಾಡುತ್ತಿದೆ ಎಂದು ಅವರು ಟ್ವಿಟ್ ಮಾಡಿದ್ದಾನೆ.!!
ಇನ್ನು ಈ ಬಗ್ಗೆ ಕಂಪನಿ ಹೇಳಿಕೆ ನೀಡಿದ್ದು, HTTPS ಮೂಲಕ ನಾವು ಸುರಕ್ಷಿತವಾಗಿ ಎರಡು ವಿಭಿನ್ನ ಸ್ಟ್ರೀಮ್‌ಗಳಲ್ಲಿ ಅಮೆಜಾನ್ ಪರಿಚಾರಕಕ್ಕೆ ಸಂವಹನಗಳನ್ನು ರವಾನಿಸುತ್ತೇವೆ ಮೊದಲ ಸ್ಟ್ರೀಮ್ ಬಳಕೆಯ ವಿಶ್ಲೇಷಣೆಗಾದರೆ, ಎರಡನೆಯ ಸ್ಟ್ರೀಮ್ ಸಾಧನದ ಮಾಹಿತಿಯನ್ನು ನಾವು ಮಾರಾಟದ ನಂತರ ಉತ್ತಮ ಬೆಂಬಲವನ್ನು ಒದಗಿಸಲು ಸಂಗ್ರಹಿಸುತ್ತೇವೆ ಎಂದು ಹೇಳಿದೆ.!!
ಇನ್ನು ಬಳಕೆದಾರರ ನಡವಳಿಕೆಯು ಬಳಕೆಯ ಚಟುವಟಿಕೆಗಳ ಈ ಪ್ರಸರಣವನ್ನು 'ಸೆಟ್ಟಿಂಗ್ಗಳು -> ಅಡ್ವಾನ್ಸಡ್-> 'ಬಳಕೆದಾರ ಅನುಭವದ ಪ್ರೋಗ್ರಾಂಗೆ' ನ್ಯಾವಿಗೇಟ್ ಮಾಡುವ ಮೂಲಕ ಆಫ್ ಮಾಡಬಹುದು ಎಂದು ಹೇಳಿದೆ. ಆದರೆ, ಭವಿಷ್ಯದ ನವೀಕರಣಗಳಲ್ಲಿ ಇದನ್ನು ಸರಿಪಡಿಸಲು ಯಾವುದೇ ಯೋಜನೆಯನ್ನು ಕಂಪನಿಯು ಘೋಷಿಸಿಲ್ಲ.!!
ಓದಿರಿ: 'ಹಾನರ್ ಆಫ್ ಕಿಂಗ್ಸ್' ಗೇಮ್ ಆಡುವ ಹುಚ್ಚಿಗೆ ಕಣ್ಣು ಕಳೆದುಕೊಂಡ ಯುವತಿ!!


Click it and Unblock the Notifications








