ಮಿಡ್ ರೇಂಜ್ ಬೆಲೆಯಲ್ಲಿ 'ಪಿಕ್ಸಲ್ 3a' ಸ್ಮಾರ್ಟ್‌ಫೋನ್ ರಿಲೀಸ್‌ಗೆ ಸಜ್ಜಾದ 'ಗೂಗಲ್'!
ವಿಶ್ವದ ಟೆಕ್ ದೈತ್ಯ ಗೂಗಲ್ ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಈಗಾಗಲೇ 'ಗೂಗಲ್ ಪಿಕ್ಸಲ್' ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ತನ್ನ ಗೂಗಲ್ ಪಿಕ್ಸಲ್ ಸ್ಮಾರ್ಟ್‌ಫೋನ್ ಸರಣಿಯನ್ನು ಮುಂದುವರಿಸಲೂ ಮತ್ತೆ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದ್ದು, ಮೊಬೈಲ್ ಮಾರುಕಟ್ಟೆಯಲ್ಲಿ ಕುತೂಹಲ ಮೂಡಿಸಿದೆ.

ಹೌದು, ಗೂಗಲ್ ಸಂಸ್ಥೆಯು ಗೂಗಲ್ ಪಿಕ್ಸಲ್ 3a ಮತ್ತು ಗೂಗಲ್ ಪಿಕ್ಸಲ್ 3a XL ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದೆ ಎಂಬ ಸುದ್ದಿ ವೈರಲ್ ಆಗಿದೆ. ಈಗೀರುವ ಗೂಗಲ್ ಪಿಕ್ಸಲ್ ಸ್ಮಾರ್ಟ್‌ಫೋನ್‌ಗಳು ಹೈ ಎಂಡ್ ಬೆಲೆಯ ಬೆಲೆಯನ್ನು ಹೊಂದಿದ್ದು, ಆದರೆ ಈ ಹೊಸ ಸ್ಮಾರ್ಟ್‌ಫೋನ್‌ಗಳ ಮೂಲಕ ಈ ಭಾರಿ ಗೂಗಲ್ ಮಿಡ್ ರೇಂಜ್ ಬೆಲೆಯ ಗ್ರಾಹಕರನ್ನು ಸೆಳೆಯಲು ಮುಂದಾಗಲಿದೆ ಎನ್ನಲಾಗುತ್ತಿದೆ.

ಬ್ಲ್ಯಾಕ್, ವೈಟ್ ಮತ್ತು ಐರಿಶ್ ಕಲರ್ ಸೇರಿದಂತೆ ಮೂರು ಕಲರ್ ವೇರಿಯಂಟ್ ಆಯ್ಕೆಗಳನ್ನು ಹೊಂದಿರಲಿರುವ ಗೂಗಲ್ ಈ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ನೂತನ ಆಂಡ್ರಾಯ್ಡ್ Q ಬೀಟಾ ಓಎಸ್ ಕಾರ್ಯನಿರ್ವಹಿಸಲಿದೆ ಎನ್ನಲಾಗುತ್ತಿದೆ. ಹಾಗಾದರೇ ಲೀಕ್ ಮಾಹಿತಿಯಂತೆ ಗೂಗಲ್ ಪಿಕ್ಸಲ್ 3a ಮತ್ತು ಗೂಗಲ್ ಪಿಕ್ಸಲ್ 3a XL ಸ್ಮಾರ್ಟ್‌ಫೋನ್‌ಗಳು ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿವೆ ಎಂಬುದನ್ನು ನೋಡೋಣ ಬನ್ನಿರಿ.

ಡಿಸ್‌ಪ್ಲೇ
ಗೂಗಲ್ ಪಿಕ್ಸಲ್ 3a ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಫೋನ್ ಆಗಲಿದ್ದು, 5.6 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಗೂಗಲ್ ಪಿಕ್ಸಲ್ 3a XL ಸ್ಮಾರ್ಟ್‌ಫೋನ್ 6 ಇಂಚಿನ OLED ಸಾಮರ್ಥ್ಯದ ಫುಲ್ ಹೆಚ್‌ಡಿ ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಪ್ರೊಸೆಸರ್
'ಪಿಕ್ಸಲ್ 3a' ಸ್ಮಾರ್ಟ್‌ಫೋನ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 670 ಪ್ರೊಸೆಸರ್ ಅನ್ನು ಒಳಗೊಂಡಿರಲಿದ್ದು, ಇದರೊಂದಿಗೆ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ. ಹಾಗೇ 'ಪಿಕ್ಸಲ್ 3a XL' ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 710 SoC ಪ್ರೊಸೆಸರ್ ಹೊಂದಿರಲಿದ್ದು, 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ.

ಕ್ಯಾಮೆರಾ
ಗೂಗಲ್ ಪಿಕ್ಸಲ್ 3a ಮತ್ತು ಗೂಗಲ್ ಪಿಕ್ಸಲ್ 3a XL ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ 12 ಮೆಗಾಪಿಕ್ಸಲ್ ಸಾಮರ್ಥ್ಯದ ರೇರ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸಲ್ ಕ್ಯಾಮೆರಾ ನೀಡುವ ಸಾಧ್ಯತೆಗಳಿದ್ದು, ಇದರೊಂದಿಗೆ LED ಫ್ಲ್ಯಾಶ್ ಇರಲಿದೆ. ಹೆಚ್‌ಡಿ ವಿಡಿಯೊ ಕಾಲಿಂಗ್ ಸೌಲಭ್ಯ ಸಹ ಇರಲಿದೆ ಎನ್ನಲಾಗುತ್ತಿದೆ.

ಬ್ಯಾಟರಿ
ಗೂಗಲ್ ಪಿಕ್ಸಲ್ 3a ಸ್ಮಾರ್ಟ್‌ಫೋನ್ ಸುಮಾರು 3,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒದಗಿಸಲಿದೆ ಎಂದು ಹೇಳಲಾಗುತ್ತಿದ್ದು, ಇನ್ನೂ ಪಿಕ್ಸಲ್ 3a XL ಸ್ಮಾರ್ಟ್‌ಪೋನ್‌ಗೆ ಪಿಕ್ಸಲ್ 3a ಸ್ಮಾರ್ಟ್‌ಫೋನ್‌ಗಿಂತ ಅತ್ಯುತ್ತಮ ಬಾಳಿಕೆಯ ಸಾಮರ್ಥ್ಯ ಬ್ಯಾಟರಿಯನ್ನು ಒದಗಿಸಲಾಗುವುದು ಎಂದು ಲೀಕ್ ಮಾಹಿತಿಯಿಂದ ತಿಳಿದುಬಂದಿದೆ.


Click it and Unblock the Notifications








