Home
ಮೊಬೈಲ್

ಭಾರತದಲ್ಲಿ Google Pixel 9a ಬಿಡುಗಡೆ; ಬ್ಯಾಟರಿ, ಕ್ಯಾಮೆರಾ ಸೂಪರ್.. 3000 ಕ್ಯಾಶ್‌ಬ್ಯಾಕ್.. ಬೆಲೆ ಎಷ್ಟು?

ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 9a (Google Pixel 9a) ಅಧಿಕೃತವಾಗಿ ಬಿಡುಗಡೆಯಾಗಿದೆ. ಇದು ಗೂಗಲ್ ಪಿಕ್ಸೆಲ್ 9 ಸರಣಿಯ ಕೈಗೆಟುಕುವ ಸ್ಮಾರ್ಟ್‌ಫೋನ್ ಆಗಿದೆ. ಕಂಪನಿಯು ಈ ಬಾರಿ ಹೊಸ ಫೋನ ಅತೀ ಬೇಗನೇ ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ 'a' ಸರಣಿಯನ್ನು ಮೇ ತಿಂಗಳಲ್ಲಿ ಪರಿಚಯಿಸಲಾಗುತ್ತದೆ. ಆದರೆ, ನೂತನ ಗೂಗಲ್ ಪಿಕ್ಸೆಲ್ 9a ಮೊಬೈಲ್ ಹಳೆಯ ಮಾದರಿಗಳನ್ನು ಹೋಲುತ್ತದೆ. ಆದಾಗ್ಯೂ, ಇತ್ತೀಚಿನ ವಿಭಿನ್ನ ವಿನ್ಯಾಸದೊಂದಿಗೆ ಬರುತ್ತದೆ. ವಿಶೇಷವೆಂದರೆ, ಈ ಫೋನಿನ ಕ್ಯಾಮೆರಾ ಮಾಡ್ಯೂಲ್ ಅನ್ನು ಬದಲಾಯಿಸಲಾಗಿದೆ. ಈ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಕಂಪನಿಯು ಗೂಗಲ್ ಪಿಕ್ಸೆಲ್ 9a ಅನ್ನು ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ. ಈ ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು ಗೂಗಲ್ ಟೆನ್ಸರ್ G4 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಈ ಪಿಕ್ಸೆಲ್ 9a ಸ್ಮಾರ್ಟ್‌ಫೋನ್ 6.3 ಇಂಚಿನ ಡಿಸ್ಪ್ಲೇ ಹೊಂದಿದೆ. ಹಾಗೆಯೇ ಇದು 5,100mAh ಸಾಮರ್ಥ್ಯದ ಬ್ಯಾಟರಿಮತ್ತು 33W ವೈರ್ಡ್ ಚಾರ್ಜಿಂಗ್ ಒಳಗೊಂಡಿದೆ. ಇದು ಹಲವು ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದರಲ್ಲಿ ಕೆಲವು ಆಡ್ ಮಿ, ಫೇಸ್ ಅನ್‌ಬ್ಲರ್, ಮ್ಯಾಜಿಕ್ ಎಡಿಟರ್ ಮತ್ತು ಎರೇಸರ್ ಮತ್ತು ಬೆಸ್ಟ್ ಟೇಕ್ ಫೀಚರ್ ಲಭ್ಯವಿದೆ.

ಭಾರತದಲ್ಲಿ Google Pixel 9a ಬಿಡುಗಡೆ; 3000 ಕ್ಯಾಶ್‌ಬ್ಯಾಕ್.. ಬೆಲೆ ಎಷ್ಟು?

ಗೂಗಲ್ ಪಿಕ್ಸೆಲ್ 9a ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಗೂಗಲ್ ಪಿಕ್ಸೆಲ್ 9a ಸ್ಮಾರ್ಟ್‌ಫೋನ್ 6.3 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 2,424 × 1,080 ಪಿಕ್ಸೆಲ್‌ ರೆಸಲ್ಯೂಶನ್‌ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, ಎಚ್‌ಡಿಆರ್ ಬೆಂಬಲ, 1800 ನಿಟ್ಸ್‌ ಎಚ್‌ಡಿಆರ್ ಮತ್ತು 2,700 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಗೂಗಲ್ ಪಿಕ್ಸೆಲ್ 9a ಫೋನ್ ಗೂಗಲ್ ಟೆನ್ಸರ್ G4 ಪ್ರೊಸೆಸರ್ ಹೊಂದಿದೆ. ಇದು ಗೂಗಲ್ ಪಿಕ್ಸೆಲ್ 9 ಸರಣಿಯಲ್ಲಿಯೂ ಲಭ್ಯವಿದೆ. ಇದನ್ನು ಟೈಟಾನ್ M2 ಭದ್ರತಾ ಪ್ರೊಸೆಸರ್ ಜೊತೆಗೆ ಚಿಪ್‌ನೊಂದಿಗೆ ಜೋಡಿಸಲಾಗಿದೆ. ಇದು ಆಂಡ್ರಾಯ್ಡ್‌ 15 ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ. ಏಳು ವರ್ಷಗಳ ಓಎಸ್, ಭದ್ರತೆ ಮತ್ತು ಪಿಕ್ಸೆಲ್ ಡ್ರಾಪ್ ನವೀಕರಣಗಳೊಂದಿಗೆ ಬರುತ್ತದೆ.

ಕ್ಯಾಮೆರಾ ಸೆಟಪ್

ಗೂಗಲ್ ಪಿಕ್ಸೆಲ್ 9a ಮೊಬೈಲ್ OIS ಬೆಂಬಲದೊಂದಿಗೆ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದರೊಂದಿಗೆ 13 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್‌ಫೋನ್ 8x ವರೆಗೆ ಸೂಪರ್ ರೆಸಲ್ಯೂಷನ್ ಜೂಮ್, 0.5 ನಲ್ಲಿ ಆಪ್ಟಿಕಲ್ ಗುಣಮಟ್ಟ, 4K ವಿಡಿಯೋ ರೆಕಾರ್ಡಿಂಗ್‌ನೊಂದಿಗೆ ಬರುತ್ತದೆ.

ಭಾರತದಲ್ಲಿ Google Pixel 9a ಬಿಡುಗಡೆ; 3000 ಕ್ಯಾಶ್‌ಬ್ಯಾಕ್.. ಬೆಲೆ ಎಷ್ಟು?

ಬ್ಯಾಟರಿ ಮತ್ತು ಚಾರ್ಜಿಂಗ್

ಗೂಗಲ್ ಪಿಕ್ಸೆಲ್ 9a ಸ್ಮಾರ್ಟ್‌ಫೋನ್ 5,100mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 33W ವೈರ್ಡ್ ಮತ್ತು 7.5W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಗೂಗಲ್ ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಹಾಗೆಯೇ ಸ್ಟೀರಿಯೊ ಸ್ಪೀಕರ್‌ಗಳು, ಕಾರು ಅಪಘಾತ ಪತ್ತೆ ವೈಶಿಷ್ಟ್ಯಗ ಒಳಗೊಂಡಿದೆ. ಇದರೊಂದಿಗೆ ವೈ-ಫೈ 6E, ಎನ್‌ಎಫ್‌ಸಿ ಮತ್ತು eSIM ಬೆಂಬಲವನ್ನು ಸಹ ಪಡೆದಿದೆ.

Take a Poll

ಗೂಗಲ್ ಪಿಕ್ಸೆಲ್ 9a ಬೆಲೆ ಮತ್ತು ಲಭ್ಯತೆ

ಗೂಗಲ್ ಪಿಕ್ಸೆಲ್ 9a ಮೊಬೈಲ್ 8GB RAM + 128GB ಸ್ಟೋರೇಜ್ ಮತ್ತು 256GB ಸ್ಟೋರೇಜ್ ಆಯ್ಕೆ ಹೊಂದಿದೆ. ಮೂಲ ಮಾದರಿಯ ಬೆಲೆ 49,999 ರೂ.ನಿಂದ ಪ್ರಾರಂಭವಾಗುತ್ತದೆ. ಇದು ಮೂರು ಬಣ್ಣಗಳಲ್ಲಿ ಬರುತ್ತದೆ. ನೀವು ಅಬ್ಸಿಡಿಯನ್, ಪಿಂಗಾಣಿ ಮತ್ತು ಐರಿಸ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು. ಈ ಗೂಗಲ್ ಪಿಕ್ಸೆಲ್ 9a ಮೊಬೈಲ್ ಏಪ್ರಿಲ್‌ ತಿಂಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದರ ಮಾರಾಟವು ಲೈವ್ ಆಗಲಿದೆ.

ಕಂಪನಿಯು ಗೂಗಲ್ ಪಿಕ್ಸೆಲ್ 9a ಖರೀದಿಯ ಮೇಲೆ ಕೆಲವು ಆಫರ್ ಘೋಷಿಸಿದೆ. ನೀವು 3,000 ರೂ.ಗಳ ಕ್ಯಾಶ್‌ಬ್ಯಾಕ್ (ಸೀಮಿತ ಅವಧಿ) ಆಫರ್ ಪಡೆಯಬಹುದು. ಇದರೊಂದಿಗೆ 24 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆಯ ಪ್ರಯೋಜನ ಪಡೆಯಬಹುದು. ಇದು ಎಚ್‌ಡಿಎಫ್‌ಸಿ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್ ಮತ್ತು ಬಜಾಜ್ ಫಿನ್‌ಸರ್ವ್ ಸೇರಿದಂತೆ ಆಯ್ದ ಬ್ಯಾಂಕಿಂಗ್ ಮೇಲೆ ಲಭ್ಯವಿದೆ.

Best Mobiles in India

English summary
Google Pixel 9a with Tensor G4 SoC and 5100mAh battery Launched in India: check price, specifications, features and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+