Subscribe to Gizbot

ಜಿಎಸ್‍ಎಮ್‍ಕೆ ಕ್ರಿಪ್ಟೊಫೋನ್ ಎಲ್ಲಕ್ಕಿಂತ ಸುರಕ್ಷಿತ: ಏಕೆ ಅವಶ್ಯಕ, ಉಪಯೋಗಿಸಿದ ತಂತ್ರಜ್ಞಾನ ಮತ್ತು ಇತ್ಯಾದಿ

ಕ್ರಿಪ್ಟೊಫೋನ್ ಬಿಡುಗಡೆಯಾಗುವ ಮುಂಚೆ ಮಾತುಗಳು ಕೇಳಿಸದಂತಿರಲು ಕಾಲ್ಸ್ ಗಳನ್ನು ಅಡ್ಡಾದಿಡ್ಡಿ ಮಾಡುವ ಫೋನ್ ಕೇವಲ ಜೇಮ್ಸ್ ಬಾಂಡ್ ಸಿನೆಮಾಗಳಲ್ಲಿ ಮಾತ್ರ ಕಾಣ ಸಿಗುತ್ತಿತ್ತು.

ನಂಬಲು ಸಾಧ್ಯವೇ ಈ ಫೋನಿನ ಗುಪ್ತಗಾರಿಕೆ ಮಾಡಲು ಸಾಧ್ಯವಿಲ್ಲವೆಂದು ?

ಜನರ ಬೇಡಿಕೆಯಂತೆ ಮುಖ್ಯವಾಗಿ ಅಮೇರಿಕಾದ ರಾಜ್ಯದ ಮುಖ್ಯರ ಇಚ್ಛೆಯ ಮೇರೆಗೆ ಗುಪ್ತಗಾರಿಕೆ ಮಾಡಲು ಸಾಧ್ಯವಾಗದ ಫೋನಿನ ಬೇಡಿಕೆ ಹುಟ್ಟಿತ್ತು. ಆಗ ಗೊಲ್ಡ್‍ಸ್ಮಿತ್ ಎನ್ನುವ ಲಾಸ್ ವೆಗಾಸ್ ಮೂಲದ ತಯಾರಕರು ಅತಿ ದುಬಾರಿ $3500 ಸುಮಾರು ಬೆಲೆಯ ಜಿಎಸ್‍ಎಮ್‍ಕೆ ಕ್ರಿಪ್ಟೊಫೋನ್ ಡಿವೈಜ್ ನೊಂದಿಗೆ ಬಂದಿತು. ಕಂಪನಿ ಆಂಡ್ರೊಯಿಡ್ ಒಎಸ್ ಉಪಯೋಗಿಸುತ್ತದೆ ಜರ್ಮನಿ ಕಂಪನಿಯ ಜಿಎಸ್‍ಎಮ್‍ಕೆ ಲೈಸೆನ್ಸ್ ನೊಂದಿಗೆ. ಆಂಡ್ರೊಯಿಡ್ ನ ಈ ವರ್ಷನ್ ಹೆಚ್ಚು ಸುರಕ್ಷಿತವಾಗಿದೆ ಕಾಲ್ ನಲ್ಲಿ ಎನ್‍ಕ್ರಿಪ್ಷನ್ ಮತ್ತು ಭದ್ರತೆಯಲ್ಲಿ ಇರುವ ಲೋಪಗಳನ್ನು ಸರಿಪಡಿಸಿ ಅಳವಡಿಸಲಾಗಿದೆ.

ಓದಿರಿ: ಈ-ಸಿಗರೇಟ್ ಬಳಸುವವರೇ ಹುಷಾರ್..! ಒಮ್ಮೆ ಈ ಶಾಕಿಂಗ್ ವಿಡಿಯೋ ನೋಡಿ

ಈ ಡಿವೈಜ್‍ಗಳ ವ್ಯಾಪಾರ ತುಂಬಾ ಚೆನ್ನಾಗಿತ್ತು ಸುಮಾರು 1 ಲಕ್ಷದಷ್ಟು ಡಿವೈಜ್‍ಗಳು ಮಾರಾಟವಾದವು ಪ್ರಪಂಚದಾದ್ಯಂತ ಕೇವಲ ಕೆಲವೇ ತಿಂಗಳಿನಲ್ಲಿ . ಹಾಗೆ ನೋಡೊದಾದ್ರೆ ಸುರಕ್ಷಾ ಫೋನ್‍ಗಳು ಸಂಪೂರ್ಣವಾಗಿ ಹೊಸದೇನಲ್ಲಾ. ಹಿಂದೆ 1970 ರಲ್ಲಿ ಎಮ್‍ಎಸ್‍ಎ ಸುರಕ್ಷಾ ಫೋನಿನೊಂದಿಗೆ ಬಂದಿತು ಒಂದು ಸಾಮಾನ್ಯ ಒತ್ತುವ ಬಟನ್ ಹೊಂದಿದ ದೂರವಾಣಿಯಾಗಿದ್ದು ಅಡ್ಡಾದಿಡ್ಡಿ ಮಾಡುವ ಕ್ರೇಟ್ ಗಾತ್ರದ ಸ್ಕ್ರ್ಯಾಂಬ್ಲರ್ ನೊಂದಿಗೆ ಕನೆಕ್ಟ್ ಆಗಿರುತ್ತಿತ್ತು ಸುರಕ್ಷತೆಗಾಗಿ.

ನಾವೀಗ ಕ್ರಿಪ್ಟೊಫೋನ್ ನಲ್ಲಿರುವ ಕೆಲ ಲಕ್ಷಣಗಳು ಮತ್ತು ತಂತ್ರಜ್ಞಾನವನ್ನು ನೋಡೊಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ನೂಪಿಂಗ್ ಮತ್ತು ಇಂಟರ್‍ಸೆಪ್ಷನ್ ಕಾರಣ

ಸ್ನೂಪಿಂಗ್ ಮತ್ತು ಇಂಟರ್‍ಸೆಪ್ಷನ್ ಕಾರಣ

ಇಂದಿನ ದಿನಮಾನದಲ್ಲಿ, ಸ್ಮಾರ್ಟ್‍ಫೋನ್ಸ್ ಗಳನ್ನು ಮಾಲ್‍ವೇರ್ ಗಳ ಮೂಲಕ ಬಗ್ಸ್ ಸೇರಿಸುತ್ತಾರೆ ಕಾಲ್ಸ್, ಡಿವೈಜ್ ಲೊಕೆಷನ್, ಡಾಟಾ ಇತ್ಯಾದಿ ಮೂಲಕ. ಟೆಲಿಕಮ್ಯುನಿಕೇಷನ್ ಇಂಟರ್‍ಸೆಪ್ಷನ್ ಕಾನೂನಾತ್ಮಕ ಇಂಟರ್‍ಸೆಪ್ಷನ್ ಆಗಿದ್ದು ಸರ್ಕಾರಿ ಕೆಲಸಕ್ಕೆ ಉಪಯೋಗಿಸಲಾಗುತ್ತದೆ. ಆದರೆ ಇದು ಬೇರೆ ಅವಶ್ಯಕ ವಿಷಯಗಳಿಗೆ ಉಪಯೋಗಿಸುವುದನ್ನು ಅಡ್ಡಿಪಡಿಸುವುದಿಲ್ಲಾ. ಬಹಳಷ್ಟು ಸಮಯದ ಕಾಲ್ ವಿವರಗಳ ಸಂಗ್ರಹ ಮತ್ತು ಟ್ರಾಫಿಕ್ ಡಾಟಾ ಇರುವುದು ಒಳ್ಳೆಯದಲ್ಲಾ ಮತ್ತು ಇದು ಹತ್ತಾರು ವರ್ಷಗಳಿಂದ ಹಲವಾರು ದೇಶಗಳಲ್ಲಿ ಆಗುತ್ತಿದೆ. ಹೀಗಾಗಿ ಮಾಹಿತಿ ಗುಪ್ತವಾಗಿ ಇಡಲು ಎನ್‍ಕ್ರಿಪ್ಷನ್ ಒಂದೇ ಇದಕ್ಕೆ ದಾರಿ ಮತ್ತು ಉತ್ತಮ ಆಯ್ಕೆಯು ಹೌದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಡಿಯೊ ಕಂಪ್ರೆಷನ್

ಆಡಿಯೊ ಕಂಪ್ರೆಷನ್

ಕ್ರಿಪ್ಟೊಫೋನ್ ಆಡಿಯೊ ಕಂಪ್ರೆಷನ್ ಉಪಯೋಗಿಸುತ್ತದೆ, ಇದು ಬಹಳಷ್ಟು ನೆಟ್‍ವರ್ಕ್ ತಂತ್ರಜ್ಞಾನವನ್ನು ಸಪೊರ್ಟ್ ಮಾಡುವ ಉಚ್ಛ ಮಟ್ಟದ ಒಪ್ಟಿಮೈಜ್ಡ್ ವಾಯಸ್ ಕೊಡ್ಸ್ ಉಪಯೋಗಿಸುತ್ತದೆ.

ಟ್ರಾನ್ಸ್‍ಪೊರ್ಟ್ ತಂತ್ರಜ್ಞಾನ

ಟ್ರಾನ್ಸ್‍ಪೊರ್ಟ್ ತಂತ್ರಜ್ಞಾನ

ಕ್ರಿಪ್ಟೊಫೋನ್ ಬಳಕೆದಾರರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತದೆ ಕ್ಲಾಸಿಕಲ್ ಸಕ್ರ್ಯುಟ್ ಸ್ವಿಚ್ಡ್ ಡಾಟಾ ಕನೆಕ್ಷನ್ಸ್ ಮತ್ತು ಕರೆಂಟ್ ಜನರೇಷನ್ ಇಂಟರ್‍ನೆಟ್ ಪ್ರೊಟೊಕಾಲ್ ಬೇಸ್ಡ್ ಕಮ್ಯುನಿಕೇಷನ್ ಗಳ ನಡುವೆ ಯಾವುದಾದರು ಆಯ್ಕೆ ಮಾಡಲು. ಟ್ರಾನ್ಸ್‍ಪೊರ್ಟ್ ತಂತ್ರಜ್ಞಾನ ಆಯ್ಕೆ ಮಾಡಲು ಇರುವ ಸಾಮಥ್ರ್ಯ ಬಳಕೆದಾರರಿಗೆ ಕಂಪ್ಲೀಟ್ ರೇಂಜ್ ಆಫ್ ಕಮ್ಯುನಿಕೇಷನ್ ನೆಟ್‍ವಕ್ರ್ಸ್ ನ ಕೊಡುಗೆ ನೀಡುತ್ತದೆ ಅನಲೊಗ್ ಟೆಲಿಫೋನ್ ಲೈನ್ಸ್ ನಿಂದ ಹಿಡಿದು 3ಜಿ/ಯುಎಮ್‍ಟಿಎಸ್ ಹೈ ಬ್ಯಾಂಡ್‍ವಿಡ್ತ್ ಕನೆಕ್ಷನ್ ತನಕ.

ಎನ್‍ಕ್ರಿಪ್ಷನ್ ಎಂಜಿನ್

ಎನ್‍ಕ್ರಿಪ್ಷನ್ ಎಂಜಿನ್

ಎಲ್ಲಾ ಕ್ರಿಪ್ಟೊಫೋನ್ ಮಾಡೆಲ್‍ಗಳು ಸಿಂಗಲ್ ಎನ್‍ಕ್ರಿಪ್ಷನ್ ಎಂಜಿನ್ ಉಪಯೋಗಿಸುತ್ತದೆ, ಇದು ಪೊರ್ಟೆಬಲ್ ಮಲ್ಟಿ ಪ್ಲಾಟ್‍ಫಾವರ್i ಕ್ರಿಪ್ಟೊಗ್ರಾಫಿಕ್ ಮೊಡ್ಯುಲ್ ಆಗಿದ್ದು ಆಥೆಂಟಿಕೇಷನ್, ಎನ್‍ಕ್ರಿಪ್ಷನ್, ಕೀ ಎಕ್ಸ್‍ಚೇಂಜ್, ಸೆಕ್ಯುರ್ ಮೆಮೊರಿ ಅಬ್‍ಸ್ಟ್ರಾಕ್ಷನ್ ಮತ್ತು ಮೆಸೆಜ್ ಇಂಟಿಗ್ರಿಟಿ ವೆರಿಫಿಕೇಷನ್ ಸೇವೆ ನೀಡುತ್ತದೆ. ಈ ಫೋನ್‍ಗಳು ಶಕ್ತಿಯುತವಾದ ಎನ್‍ಕ್ರಿಪ್ಷನ್ ಅಲ್ಗೊರಿದಮ್ ಮತ್ತು ಉದ್ದವಾದ ಕೀ ಹೊಂದಿದ್ದು ವಸ್ತುವಿಗೆ ಬೇಕಾದಷ್ಟು ಭದ್ರತೆ ನೀಡುತ್ತದೆ

ಸಾಫ್ಟ್‍ವೇರ್ ಆರ್ಕಿಟೆಕ್ಚರ್

ಸಾಫ್ಟ್‍ವೇರ್ ಆರ್ಕಿಟೆಕ್ಚರ್

ಈ ಫೋನಿನ ರೂಪರೇಷೆ ಹೇಗೆ ವಿನ್ಯಾಸಗೊಳಿಸಲಾಗಿದೆಯೆಂದರೆ ಇದು 360 ಡಿಗ್ರಿಯಲ್ಲಿ ಸುರಕ್ಷತೆ ನೀಡುತ್ತದೆ ಕೇವಲ ಸಂದೇಶ ಮತ್ತು ಕಾಲ್‍ಗಳಿಗಲ್ಲದೆ ಡಿವೈಜ್ ಮೇಲಾಗುವ ದಾಳಿಯ ಮೇಲೆ ಕೂಡ. ಈ ಫೋನ್ ಮಜಬೂತಾದ ಒಎಸ್, ವಾಯಸ್ ಮತ್ತು ಮೆಸೆಜ್ ಎನ್‍ಕ್ರಿಪ್ಷನ್ ಮತ್ತು ಸೆಕ್ಯುರಿಟಿ ಸ್ಟೊರೆಜ್ ನೀಡುತ್ತದೆ.

ಕ್ರಿಪ್ಟೊಗ್ರಾಫಿಕ್ ಕೀ ಅವಶ್ಯಕ

ಕ್ರಿಪ್ಟೊಗ್ರಾಫಿಕ್ ಕೀ ಅವಶ್ಯಕ

ನೆನಪಿಡಿ, ಸುರಕ್ಷಿತ ಕಾಲ್ ಕೆಲಸ ಮಾಡುತ್ತದೆ ಕ್ರಿಪ್ಟೊಫೋನ್ ನಿಂದ ಕ್ರಿಫ್ಟೊಫೋನ್ ಗೆ ಕಾಲ್ ಮಾಡಿದಾಗ ಮಾತ್ರ. ಅತಿ ಸುರಕ್ಷಿತ ಕನೆಕ್ಷನ್ ನಿರ್ಮಿಸಲು ಎರಡೂ ಹ್ಯಾಂಡ್‍ಸೆಟ್‍ಗಳು ಕ್ರಿಪ್ಟೊಗ್ರಾಫಿಕ್ ಕೀ ತಯಾರಿಸುತ್ತವೆ ರಾಂಡಮ್ ಬ್ಯಾಕ್‍ಗ್ರೌಂಡ್ ನಾಯಸ್ ಆಧಾರದ ಮೇಲೆ. ಈ ಎಲ್ಲಾ ಚಟುವಟಿಕೆಗಳು ನಡೆಯುತ್ತವೆ ಕ್ರಿಪ್ಟೊಫೋನ್ ನಲ್ಲಿಯೇ ಆಗುತ್ತದೆ ಯಾವುದೆ ಅಸುರಕ್ಷಿತ ಮಾಹಿತಿ ಡಿವೈಜ್ ನಿಂದ ಹೊರ ಹೋಗದಂತೆ ಖಚಿತ ಪಡಿಸಿ.

ದುಬಾರಿ ಆದರೆ ಸಾಮಾನ್ಯ ಬಳಕೆದಾರರಿಗಲ್ಲಾ

ದುಬಾರಿ ಆದರೆ ಸಾಮಾನ್ಯ ಬಳಕೆದಾರರಿಗಲ್ಲಾ

ಕ್ರಿಪ್ಟೊಫೋನ್ ನ ಬೆಲೆ $3500 ತುಂಬಾ ದುಬಾರಿ, ಆದರೆ ಇದು 3 ವರ್ಷದ ಸರ್ವಿಸ್ ಒಳಗೊಂಡಿದೆ ಕಾಲ್ ಚಾರ್ಜ್ ಅಲ್ಲಾ. ಈ ಫೋನ್ ಸಾಮಾನ್ಯರಿಗೆ ಮತ್ತು ಚಿಕ್ಕ ವ್ಯಾಪಾರಕ್ಕಲ್ಲಾ. ಇದರ ಜೊತೆಗೆ ಸಧ್ಯಕ್ಕೆ ಜನ ಇನ್ನೂ ಸುರಕ್ಷತೆಯ ಹಿಂದೆ ಬಿದ್ದಿಲ್ಲಾ. ಬಹುಶಃ ಭವಿಷ್ಯದಲ್ಲಿ ಜನರು ಸುರಕ್ಷಾ ಫೋನಿನ ಕಡೆ ಗಮನ ಹರಿಸಬಹುದು ಆನ್‍ಲೈನ್ ನಲ್ಲಿ ಯಾರು ಗುಪ್ತಚಾರಿಕೆ ಮಾಡದಿರಲು. ಈಗ ಮಾತ್ರ, ಸಹಾಯ ಮಾಡುತ್ತಿರುವ ಆಪ್ ಗಳು ಸೆಲ್ಫ್ ಡಿಸ್ಟ್ರಕ್ಟಿಂಗ್ ಮೆಸೆಜ್ ಅಥವಾ ಯಾವುದಾದರು ಬುಲೆಟಿನ್ ಬೋರ್ಡ್ ನಿಂದ ಜನರು ತೃಪ್ತಿ ಪಟ್ಟುಕೊಳ್ಳುತ್ತಿದ್ದಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you aren't aware, CryptoPhone is the most secure smartphone that exist right now. It is based on a version of Android OS that is secure with call encryption and other security related features. Take a look at the technolgies used behind the development of this phone from here.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot