ಈ ವರ್ಷ ನಿಮ್ಮ ಕೈ ಸೇರಲಿರುವ '5G ಸ್ಮಾರ್ಟ್‌ಫೋನ್‌'ಗಳು ಯಾವುವು ಗೊತ್ತಾ.!?

|

4G ನೆಟವರ್ಕ್ ಸರಿಯಾಗಿ ಸೀಗುತ್ತಿಲ್ಲ ಎಂದು ಬೇಸತ್ತಿರುವ ಗ್ರಾಹಕರಗೆ ಪ್ರಸಕ್ತ ವರ್ಷ ಭಾರೀ ಸಂತಸ ತರಲಿದೆ. ಅತ್ಯುತ್ತಮ ಫೀಚರ್ಸ್‌ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಲಿದ್ದು, ಇದರೊಂದಿಗೆ ಗ್ರಾಹಕರ ಬಹುನಿರೀಕ್ಷಿತ '5G' ನೆಟವರ್ಕ್ ಕನಸು ನನಸಾಗುವ ಸಮಯವಿದು. ಹೌದು, ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2019 ರ ಕಾರ್ಯಕ್ರಮದಲ್ಲಿ ಈ ವರ್ಷ ಬರಲಿರುವ 5G ಸ್ಮಾರ್ಟ್‌ಫೋನ್‌ಗಳನ್ನು ಪ್ರದರ್ಶಿಸಲಾಗಿದೆ.

ಈ ವರ್ಷ ನಿಮ್ಮ ಕೈ ಸೇರಲಿರುವ '5G ಸ್ಮಾರ್ಟ್‌ಫೋನ್‌'ಗಳು ಯಾವುವು ಗೊತ್ತಾ.!?

ಈ ಹಿಂದೆಯೇ ಸ್ಯಾಮ್‌ಸಂಗ್, ಎಲ್‌ಜಿ, ಶಿಯೋಮಿ, ಹುವಾಯಿ, ZTE ಸ್ಮಾರ್ಟ್‌ಫೋನ್ ಕಂಪನಿಗಳು ಸೇರಿದಂತೆ ಕೆಲವು ಸ್ಮಾರ್ಟ್‌ಫೋನ್ ಕಂಪನಿಗಳು '5G' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದವು. ಅದಕ್ಕಿಗ ಕಾಲ ಕೂಡಿ ಬಂದಿದೆ. ಇದೀಗ ಈ ಕಂಪನಿಗಳ ತಯಾರಿಸಿರುವ '5G' ನೆಟವರ್ಕ್ ಬೆಂಬಲಿತ ಸ್ಮಾರ್ಟ್‌ಫೋನ್‌ಗಳು ರಿಲೀಸ್‌ಗೆ ಸಿದ್ಧವಾಗಿದ್ದು, ಈ ವರ್ಷವೇ ಗ್ರಾಹಕರ ಕೈ ಸೇರಲಿವೆ.

ಈ ವರ್ಷ ನಿಮ್ಮ ಕೈ ಸೇರಲಿರುವ '5G ಸ್ಮಾರ್ಟ್‌ಫೋನ್‌'ಗಳು ಯಾವುವು ಗೊತ್ತಾ.!?

ಗ್ರಾಹಕರಿಗೆ ವೇಗದ 5G ನೆಟವರ್ಕ್ ಅಗತ್ಯವಿದ್ದು, ಹೀಗಾಗಿ ಪ್ರಮುಖ ನೆಟವರ್ಕ್ ಸಂಸ್ಥೆಗಳಾದ ಏರಟೆಲ್, ಜಿಯೋ, ವಡಾಫೋನ್‌ಗಳು 5G ನೆಟವರ್ಕ್ ನೀಡಲು ಪ್ರಾಯೋಗಿಕ ಹಂತದಲ್ಲಿ ಕೆಲಸದಲ್ಲಿ ತೊಡಗಿಕೊಂಡಿವೆ. ಇನ್ನು ಗ್ರಾಹಕರ ಬಳಕೆಗೆ ಅತ್ಯುತ್ತಮ 5G ನೆಟವರ್ಕ್ ಲಭ್ಯವಾದರೇ, ಬಿಡುಗಡೆ ಆಗುವ 5G ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಲಿವೆ. ಹಾಗಾದರೇ ಈ ವರ್ಷ ರಿಲೀಸ್ ಆಗಲಿರುವ ಸ್ಮಾರ್ಟ್‌ಫೋನ್‌ಗಳು ಯಾವವು ಎಂಬುದನ್ನು ನೋಡೋಣ ಬನ್ನಿರಿ.

ಹುವಾಯಿ ಮೇಟ್ X

ಹುವಾಯಿ ಮೇಟ್ X

ಇದು ಮೊದಲ 'ಫೋಲ್ಡೆಬಲ್ 5G' ಸ್ಮಾರ್ಟ್‌ಫೋನ್ ಆಗಿದ್ದು, ಪೂರ್ಣತೆರೆದಾಗ 8 ಇಂಚಿನ ಡಿಸ್‌ಪ್ಲೇಯನ್ನು ಇರಲಿದೆ. ಮಡಚಿದಾಗ ಒಂದು ಬದಿ 4.6 ಇಂಚಿನ ಡಿಸ್‌ಪ್ಲೇ ಹಾಗೂ ಇನ್ನೊಂದು ಬದಿ 6.6 ಇಂಚಿನ ಡಿಸ್‌ಪ್ಲೇ ಕಾಣಿಸಲಿದೆ. ಇದರೊಂದಿಗೆ ಕಿರಿನ್ 980 ಪ್ರೊಸೆಸರ್, 4,5000mAh ಬ್ಯಾಟರಿ, 8GB RAM ಮತ್ತು 512GB ಇಂಟರ್ನಲ್ ಸ್ಟೋರೆಜ್ ಹೊಂದಿದೆ.

ಎಲ್‌ಜಿ ವಿ50 ThinQ

ಎಲ್‌ಜಿ ವಿ50 ThinQ

ಎಲ್‌ಜಿ ಕಂಪನಿಯ ಈ ಸ್ಮಾರ್ಟ್‌ಪೋನ್ ಡ್ಯುಯಲ್ ಸ್ಕ್ರೀನ್ ಹೊಂದಿದ್ದು, ಫೋಲ್ಡೆಬಲ್ ಮಾದರಿಯ ಫೋನ್ ಆಗಿದೆ. ಹ್ಯಾಂಡ್ ಬಯೋಮೆಟ್ರಿಕ್ ಸೆಕ್ಯುರಿಟಿ ಸೌಲಭ್ಯವನ್ನುದೊಂದಿಗೆ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಅನ್ನು ಒಳಗೊಂಡಿದೆ. 6GB RAM ಮತ್ತು 128GB ಸಂಗ್ರಹ ಸ್ಥಳಾವಕಾಶದೊಂದಿಗೆ 4,000mAh ಸಾಮರ್ಥ್ಯದ ಬ್ಯಾಟಿರಿ ಶಕ್ತಿಯನ್ನು ಒದಗಿಸಲಾಗಿದೆ.

ಸ್ಯಾಮ್‌ಸಂಗ್ 'ಫೋಲ್ಡ್'

ಸ್ಯಾಮ್‌ಸಂಗ್ 'ಫೋಲ್ಡ್'

ಸ್ಯಾಮ್‌ಸಂಗ್ 'ಫೋಲ್ಡ್‌' ಮೊದಲ 5G ಫೋನ್ ಆಗಿದ್ದು, 1536×2152 ಪಿಕ್ಸಲ್ ಸಾಮರ್ಥ್ಯದ 7.3 ಸೂಪರ್‌ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಹಾಗೂ 4,380mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಹೊಂದಿದೆ. 12GB ಶಕ್ತಿಯುತ RAM ಜತೆಗೆ 512GB ಆಂತರಿಕ ಸಂಗ್ರಹ ಸಾಮರ್ಥ್ಯ ಒದಗಿಸಲಾಗಿದೆ.

ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಸ್‌10 5G'

ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಸ್‌10 5G'

ಸ್ಯಾಮ್‌ಸಂಗ್ 'ಎಸ್‌ ಸರಣಿಯ' ಈ ಸ್ಮಾರ್ಟ್‌ಪೋನ್ 5G ಸೌಲಭ್ಯದೊಂದಿಗೆ ಬರಲಿದ್ದು, 1440×3040 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.7 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿಯ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಫೋನಿಗೆ ವೇಗ ಒದಗಿಸಲಿದೆ. 8GB RAM ಮತ್ತು ಆಂತರಿಕ ಸಂಗ್ರಹಕ್ಕೆ 256GB ನೀಡಲಾಗಿದೆ. 4,500mAh ಸಾಮರ್ಥ್ಯ ಬ್ಯಾಟರಿ ಹೊಂದಿದೆ.

ಶಿಯೋಮಿ 'MI MIX 3'

ಶಿಯೋಮಿ 'MI MIX 3'

ಶಿಯೋಮಿ ಕಂಪನಿಯು 5G ನೆಟ್‌ವರ್ಕ್ ಸ್ಮಾರ್ಟ್‌ಫೋನ್ ಇದಾಗಿದ್ದು, ಈ ಸ್ಮಾರ್ಟ್‌ಫೋನ್‌ ಎರಡು ಕ್ಯಾಮೆರಾಗಳನ್ನು ಹೊಂದಿದ್ದು, ಪ್ರತಿ ಸೆಕೆಂಡ್‌ಗೆ 960 ಫ್ರೆಮ್‌ನಲ್ಲಿ ಸ್ಲೋ ಮೋಷನ್ ವಿಡಿಯೋ ಚಿತ್ರಿಕರಣ ಮಾಡಬಹುದಾಗಿದೆ. ಇಲ್ಲೂ ಸಹ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಇದ್ದು, 3,800mAh ಬ್ಯಾಟರಿ ಶಕ್ತಿ ನೀಡಲಾಗಿದೆ. 6GB RAM ಮತ್ತು 64GB/128GB ಸಂಗ್ರಹ ಸಾಮರ್ಥ್ಯ ದೊರೆಯಲಿದೆ.

ZTE Axon 10 Pro 5G

ZTE Axon 10 Pro 5G

ಈ ಸ್ಮಾರ್ಟ್‌ಫೋನ್ ಫೋಲ್ಡೆಬಲ್ ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದ್ದು, 6.7 ಇಂಚಿನ ಡಿಸ್‌ಪ್ಲೇ ಇರಲಿದೆ. ತ್ರಿವಳಿ ಕ್ಯಾಮೆರಾ ಹೊಂದಿರುವ ಜತೆಗೆ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಸೆನ್ಸಾರ್ ಸೌಲಭ್ಯ ಸಹ ಇದೆ. ಈ ಫೋನಿನಲ್ಲೂ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ನೀಡಲಾಗಿದ್ದು, ಜತೆಗೆ 4,000mAh ಬ್ಯಾಟರಿ ಒದಗಿಸಿದ್ದಾರೆ. ಇನ್ನೂ ಈ ಫೋನ್ 6GB RAM ಮತ್ತು 128GB ಸಂಗ್ರಹ ಸಾಮರ್ಥ್ಯ ಹೊಂದಿದೆ.

ಒನ್‌ಪ್ಲಸ್ 7

ಒನ್‌ಪ್ಲಸ್ 7

ಜನಪ್ರಿಯ ಒನ್‌ಪ್ಲಸ್‌ ಕಂಪನಿಯು ಸಹ 5G ನೆಟವರ್ಕ್ ಪರಿಚಯಿಸುವುದಾಗಿ ಘೋಷಿಸಿದ್ದು, ಕಂಪನಿಯ ಬಹುನಿರೀಕ್ಷಿತ 'ಒನ್‌ಪ್ಲಸ್ 7' ಸ್ಮಾರ್ಟ್‌ಫೋನಿನಲ್ಲಿ ಗ್ರಾಹಕರಿಗೆ 5G ದೊರೆಯಲಿದೆ. 6.4 ಇಂಚಿನ್ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಮಲ್ಟಿಟಾಸ್ಕ್ ಕೆಲಸಗಳನ್ನು ನಿರ್ವಹಿಸಲು 6 GB RAM ಸಾಮರ್ಥ್ಯವನ್ನು ಒಳಗೊಂಡಿರಲಿದೆ. ತ್ರಿವಳಿ ಕ್ಯಾಮೆರಾ ಇರಲಿದ್ದು, ಈ ಕ್ಯಾಮೆರಾಗಳು ಕ್ರಮವಾಗಿ 24MP + 12MP + 8MP ಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರಲಿವೆ.

Best Mobiles in India

English summary
Mobile World Congress is underway, which means there are a handful of brand spankin’ new 5G phones hitting the market soon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X