ಅಬ್ಬಾ! ಬೆಲೆ ಇಷ್ಟೊಂದಾ.. ಭಾರತಕ್ಕೆ ಬಂದೇಬಿಡ್ತು Honor 200 Pro ಫೋನ್: ಆಫರ್‌ಗಳೇನು?
ದಿ ವೇಟ್ ಈಸ್ ಓವರ್..! ಇದುವೇ ಮೊಬೈಲ್ ಪ್ರಿಯರು ಕಾಯುತ್ತಿದ್ದ ಹಾರ್ಟ್ ಫೇವರಿಟ್ ಫೋನ್. ಅಂತೂ ಇಂತೂ ಹಾನರ್‌ನ (Honor) ಹೊಸ ಫೋನ್ ಭಾರತಕ್ಕೆ ಲಗ್ಗೆ ಇಟ್ಟಿದೆ. ಈ ಮೊಬೈಲ್‌ನ ಸ್ಟೈಲಿಶ್ ಲುಕ್, ಅದ್ಭುತ ಕ್ಯಾಮೆರಾ, ಅತ್ಯಾಕರ್ಷಕ ಫೀಚರ್ಸ್‌ಗಳು ಗ್ರಾಹಕರ ಕಣ್ಣು ಕುಕ್ಕುತ್ತಿವೆ. ಹೌದು, ನಾವು ಹೇಳುತ್ತಿರುವುದು ಹಾನರ್‌ನ ಹೊಸ Honor 200 Pro 5G ಸ್ಮಾರ್ಟ್‌ಫೋನ್ ಬಗ್ಗೆ. ಹಾನರ್ ಕಂಪನಿಯು ಇಂದು ತನ್ನ Honor 200 5G ಸರಣಿಯ ನೂತನ ಹಾನರ್ 200 ಪ್ರೊ Pro 5G ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಹಾನರ್ 200 ಪ್ರೊ 5G ಸ್ಮಾರ್ಟ್‌ಫೋನ್ 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, 100W ವೇಗದ ಚಾರ್ಜಿಂಗ್‌ಗೆ ಬೆಂಬಲ ಮತ್ತು 6.8-ಇಂಚಿನ AMOLED ಡಿಸ್ಪ್ಲೇ ಸೇರಿದಂತೆ ಹಲವು ಪ್ರಮುಖ ವಿಶೇಷತೆಗಳನ್ನು ಹೊಂದಿದೆ. ಈ ಫೋನ್ ಕೇವಲ ಒಂದು ಸ್ಟೋರೇಜ್ ವೇರಿಯಂಟ್‌ನಲ್ಲಿ ಲಾಂಚ್ ಆಗಿದೆ. ಈ ಹೊಸ ಹಾನರ್ ಫೋನಿನ ಬೆಲೆ ಎಷ್ಟು? ಆಫರ್‌ಗಳೇನು? ಮಾರಾಟ ಯಾವಾಗ? ಎಂಬಿತ್ಯಾದಿ ವಿವರಗಳನ್ನು ತಿಳಿಯಲು ಮುಂದೆ ಓದಿ.

Honor 200 Pro 5G ಬೆಲೆ ಎಷ್ಟು?
ಹಾನರ್ 200 ಪ್ರೊ 5G ಫೋನನ್ನು ಒಂದು ಸ್ಟೋರೇಜ್ ವೇರಿಯಂಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಓಷನ್ ಸಿಯಾನ್ ಮತ್ತು ಕಪ್ಪು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದರ 12GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ಮಾದರಿಯ ಬೆಲೆ 57,999 ರೂ. ಇದೆ. ಈ ಮೊಬೈಲ್ ಇದೇ ಜುಲೈ 20ರಿಂದ ಅಮೇಜಾನ್ 'ಪ್ರೈಮ್ ಡೇ ಸೇಲ್'ನಲ್ಲಿ ಮಾರಾಟವಾಗಲಿದೆ.
ಮೊದಲ ದಿನವೇ ಭರ್ಜರಿ ಆಫರ್‌ಗಳು!
ಈ ಸ್ಮಾರ್ಟ್‌ಫೋನ್ ಖರೀದಿ ಮೇಲೆ ಗ್ರಾಹಕರು, ಜುಲೈ 21 ರವರೆಗೆ 8,000 ರೂ.ಗಳ ಡಿಸ್ಕೌಂಟ್ ಪಡೆಯಬಹುದು. 2,000 ರೂ. ಕೂಪನ್ ರಿಯಾಯಿತಿ ಅಥವಾ ಉಚಿತ ಗಿಫ್ಟ್‌ಗಳಂತಹ ವಿಶೇಷ ಆಫರ್‌ಗಳನ್ನು ನೀಡಲಾಗುತ್ತದೆ. ಜೊತೆಗೆ ICICI ಬ್ಯಾಂಕ್ ಅಥವಾ SBI ಬ್ಯಾಂಕ್ ಕಾರ್ಡ್ ಬಳಸಿ ಈ ಫೋನ್ ಖರೀದಿಸಿದರೆ, 3,000 ರೂ. ಬ್ಯಾಂಕ್ ಆಫರ್ ನಿಮ್ಮದಾಗಿಸಿಕೊಳ್ಳಬಹುದು. ಇದನ್ನು Amazon ಮೂಲಕ, ನಿಮ್ಮ ಹತ್ತಿರದ ಪ್ರಮುಖ ಸ್ಟೋರ್‌ಗಳು ಅಥವಾ ಎಕ್ಸ್‌ಪ್ಲೋರ್ ಹಾನರ್ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು.
ಹಾನರ್ 200 ಪ್ರೊ 5G ವಿಶೇಷತೆಗಳು
ಡಿಸ್ಪ್ಲೇ: ಹಾನರ್ 200 ಪ್ರೊ 5G ಸ್ಮಾರ್ಟ್‌ಫೋನ್ 6.78-ಇಂಚಿನ AMOLED ಕ್ವಾಡ್-ಕರ್ವ್ ಫ್ಲೋಟಿಂಗ್ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ, 4000 nits ಗರಿಷ್ಠ ಬ್ರೈಟ್‌ನೆಸ್, 10 ಬಿಟ್ ಬಣ್ಣಗಳು, 1.5K ರೆಸಲ್ಯೂಶನ್ (1224 x 2700 ಪಿಕ್ಸೆಲ್‌ಗಳು) ಮತ್ತು 120Hz ರಿಫ್ರೆಶ್ ದರವನ್ನು ನೀಡುತ್ತದೆ.
ಪ್ರೊಸೆಸರ್: ಇದು 4nm ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8s Gen 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. 12GB RAM ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದು Android 14 ಆಧಾರಿತ MagicOS ನಲ್ಲಿ ಕೆಲಸ ನಿರ್ವಹಿಸುತ್ತದೆ.

ಕ್ಯಾಮೆರಾ ಸೆಟಪ್: ಹಾನರ್ 200 ಪ್ರೊ 5G ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50MP ಪ್ರಾಥಮಿಕ ಕ್ಯಾಮೆರಾ, 12MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 50MP ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿ ಕ್ಲಿಕ್ಕಿಸಲು ಇದು ಡ್ಯುಯಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 50MP ಪೋರ್ಟ್ರೇಟ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ, 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದು.
ಬ್ಯಾಟರಿ ಬ್ಯಾಕಪ್: ಈ ಸ್ಮಾರ್ಟ್‌ಫೋನ್ 163.3×75.2 × 8.2mm ಅಳತೆ ಮತ್ತು 199 ಗ್ರಾಂ ತೂಕ ಹೊಂದಿದೆ. ಬ್ಯಾಟರಿಗೆ ಸಂಬಂಧಿಸಿದಂತೆ, ಈ ಸ್ಮಾರ್ಟ್‌ಫೋನ್ 5,200mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 66W ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ.
ಕನೆಕ್ಟಿವಿಟಿ ಸೌಲಭ್ಯ: ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್, 5G, ಡ್ಯುಯಲ್ 4G VoLTE, Wi-Fi 6, NFC, Bluetooth v5.3, GPS, ಮತ್ತು USB ಟೈಪ್-C ಪೋರ್ಟ್ ನಂತಹ ಸೌಲಭ್ಯಗಳನ್ನು ಹೊಂದಿದೆ. ಇದಲ್ಲದೆ, ಸ್ಟಿರಿಯೊ ಸ್ಪೀಕರ್‌ಗಳನ್ನು ಪಡೆಯುತ್ತದೆ. ಐಆರ್ ಬ್ಲಾಸ್ಟರ್ ಮತ್ತು IP55 ರೇಟ್ ಪಡೆದಿದೆ.


Click it and Unblock the Notifications








