Subscribe to Gizbot

ಮತ್ತೊಂದು ಬಜೆಟ್ ಫೋನ್ ಹಾನರ್ 6 ಪ್ಲೇ: ಬೆಲೆ ರೂ. 5,999

Written By:

ವಿಶ್ವದ ಎರಡನೇ ಅತೀ ಡೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರು ಹುವಾವೇ ಮತ್ತೊಂದು ಬಜೆಟ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ಹಾನರ್ 6 ಪ್ಲೇ ಸ್ಮಾರ್ಟ್‌ಫೋನ್ ರೂ.5,900ಕ್ಕೆ ಲಾಂಚ್ ಮಾಡಲಾಗಿದ್ದು, ಶೀಘ್ರವೇ ಭಾರತದಲ್ಲಿಯೂ ಲಾಂಚ್ ಆಗಲಿದೆ ಎನ್ನಲಾಗಿದೆ.

ಮತ್ತೊಂದು ಬಜೆಟ್ ಫೋನ್ ಹಾನರ್ 6 ಪ್ಲೇ: ಬೆಲೆ ರೂ. 5,999

ಓದಿರಿ: ಸೆಲ್ಫಿ ಪ್ರಿಯರೇ ಇಲ್ಲಿ ನೋಡಿ 24MP ಸೆಲ್ಪಿ ಕ್ಯಾಮೆರಾ ಫೋನ್ ಲಾಂಚ್ ಆಗಿದೆ.!!

4G VoLTE ಸಪೋರ್ಟ್ ಮಾಡಲಿರುವ ಈ ಸ್ಮಾರ್ಟ್‌ಫೋನ್ ಬೇರೆಲ್ಲಾ ಬಜೆಟ್ ಬೆಲೆ ಫೋನ್‌ಗಳಿಗೆ ಸ್ಪರ್ಧೆಯನ್ನು ನೀಡಲಿದ್ದು, ಸದ್ಯ ಚೀನಾದಲ್ಲಿ ಗುರುವಾರದಿಂದ ಮಾರಾಟಕ್ಕೆ ಲಭ್ಯವಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5 ಇಂಚಿನ ಡಿಸ್‌ಪ್ಲೇ ಇದರಲ್ಲಿದೆ:

5 ಇಂಚಿನ ಡಿಸ್‌ಪ್ಲೇ ಇದರಲ್ಲಿದೆ:

ಡ್ಯುಯಲ್ ಸಿಮ್ ಹಾಕಬಹುದಾದ ಈ ಫೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಇದರಲ್ಲಿ ಮಿಡಿಯಾ ಟೆಕ್ ಪ್ರೋಸೆಸರ್ ಇದ್ದು, 2GB RAM ಇದರಲ್ಲಿ ನೀಡಲಾಗಿದೆ. 16 GB ಇಂಟರ್ನಲ್ ಮೆಮೊರಿ ಸಹ ಇದೆ.

ಉತ್ತಮ ಕ್ಯಾಮೆರಾ:

ಉತ್ತಮ ಕ್ಯಾಮೆರಾ:

ಈ ಫೋನಿನ ಹಿಂಭಾಗದಲ್ಲಿ 8 MP ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು ಸಹ ಉತ್ತಮ ಫೋಟೊವನ್ನು ಕ್ಲಿಕಿಸಲು ಸಮರ್ಥವಾಗಿದೆ.

ಆಂಡ್ರಾಯ್ 6.0:

ಆಂಡ್ರಾಯ್ 6.0:

ಹಾನರ್ 6 ಪ್ಲೇ ಸ್ಮಾರ್ಟ್‌ಫೋನಿನಲ್ಲಿ ಆಂಡ್ರಾಯ್ಡ್ 6.0 ಅಳವಡಿಸಲಾಗಿದೆ. ಜೊತೆಗೆ EMUI 4.1 ಸಹ ಇದೆ. USB 2.0, ಬ್ಲೂಟೂತ್ 4.0 ಸೇರಿದಂತೆ ಹಲವು ಆಯ್ಕೆಗಳನ್ನು ಈ ಫೋನಿನಲ್ಲಿ ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
HuaweiTerminal brand Honor has also launched its affordable segment Honor 6 Play smartphone with 4G VoLTE support and a 3020mAh battery in China. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot