ಸೆಲ್ಫಿ ಪ್ರಿಯರೇ ಇಲ್ಲಿ ನೋಡಿ 24MP ಸೆಲ್ಪಿ ಕ್ಯಾಮೆರಾ ಫೋನ್ ಲಾಂಚ್ ಆಗಿದೆ.!!

Written By:

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ವಿವೋ ಸ್ಮಾರ್ಟ್‌ಫೋನ್ ಕಂಪನಿಯೂ ಹೊಸದೊಂದು ಫುಲ್‌ ಡಿಸ್‌ಪ್ಲೇ ಮತ್ತು 24MP ಸೆಲ್ಪಿ ಕ್ಯಾಮೆರಾ ಇರುವ ಫೋನ್ ವೊಂದನ್ನು ಲಾಂಚ್ ಮಾಡಿದ್ದು, ವಿವೋ V7+ ಹೆಸರಿನ ಈ ಫೋನ್ ರೂ.21.990ಕ್ಕೆ ಮಾರಾಟವಾಗಲಿದೆ.

ಸೆಲ್ಫಿ ಪ್ರಿಯರೇ ಇಲ್ಲಿ ನೋಡಿ 24MP ಸೆಲ್ಪಿ ಕ್ಯಾಮೆರಾ ಫೋನ್ ಲಾಂಚ್ ಆಗಿದೆ.!!

ಓದಿರಿ: BSNL ನೆಟ್‌ವರ್ಕ್ ಸಿಗಲ್ಲ ಎನ್ನಬೇಡಿ: ಜಿಯೋದಲ್ಲೂ ಇಲ್ಲದ ವೇಗದ ಡೇಟಾಕ್ಕಾಗಿ ಶೀಘ್ರವೇ 5G ಲಾಂಚ್..!

ವಿವೋ ಬಿಡುಗಡೆ ಮಾಡುತ್ತಿರುವ ಫುಲ್‌ಸ್ಕ್ರಿನ್ ಡಿಸ್‌ಪ್ಲೇಯ ಮೊದಲ ಫೋನ್ 18:9 ಅನುಪಾತದ ಡಿಸ್‌ಪ್ಲೇಯನ್ನು ಹೊಂದಿದೆ. ವಿವೋ V7+ ಟಾಪ್ ಎಂಡ್ ಮಾದರಿಯ ಫೋನ್ ಆಗಿದೆ. ಇತ್ತೀಚೆಗೆ ಬಿಡುಗಡೆಯಾದ ಮೈಕ್ರೋ ಮಾಕ್ಸ್ ಕ್ಯಾನ್‌ವಾಸ್ ಇನ್‌ಫಿನಿಟಿ, ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ಮತ್ತು LG G6 ಸ್ಮಾರ್ಟ್‌ಪೋನಿನಲ್ಲಿ ಈ ಮಾದರಿಯ ಡಿಸ್‌ಪ್ಲೆಯನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿನ್ಯಾಸ ಮತ್ತು ಡಿಸ್‌ಪ್ಲೇ:

ವಿನ್ಯಾಸ ಮತ್ತು ಡಿಸ್‌ಪ್ಲೇ:

ವಿವೋ V7+ ಯೂನಿಬಾಡಿ ಡಿಸೈನ್ ಹೊಂದಿದ್ದು, ವಿನ್ಯಾಸವು ನೋಟವನ್ನು ಸೆಳೆಯುವ ಮಾದರಿಯಲ್ಲಿದೆ. ಈ ಫೋನ್ ಭಾರತದಲ್ಲಿ ಎರಡು ಬಣ್ಣದಲ್ಲಿ ದೊರೆಯಲಿದೆ ಎನ್ನಲಾಗಿದೆ. 5.99 ಇಂಚಿನ ಡಿಸ್‌ಪ್ಲೇ ಇದ್ದು, ಫುಲ್‌ ಸ್ಕ್ರಿನ್ ಡಿಸ್‌ಪ್ಲೇ ಇದಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ವಿವೋ V7+ ಸ್ಮಾರ್ಟ್‌ಫೋನಿನಲ್ಲಿ 24MP ಮೂನ್‌ಲೈಟ್ ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದಾಗಿದೆ. ಲೋ ಲೈಟಿನಲ್ಲಿಯೂ ಉತ್ತಮ ಫೋಟೊವನ್ನು ಸೆರೆಹಿಡಯಬಹುದಾಗಿದೆ. ಅಲ್ಲದೇ ನಿಮ್ಮ ಫೋಟೊವನ್ನು ಮಷ್ಟು ಸುಂದರಗೊಳಿಸಲು ಫೆಸ್‌ಬ್ಯುಟಿ ಆಪ್ ಅನ್ನು ನೀಡಲಾಗಿದೆ. ಹಿಂಭಾಗದಲ್ಲಿ 16 MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಫೇಸ್‌ ಆನ್‌ಲಾಕ್ ಆಯ್ಕೆಯನ್ನು ನೀಡಲಾಗಿದೆ.

ಪ್ರೋಸೆಸರ್ ಮತ್ತು ವೇಗ:

ಪ್ರೋಸೆಸರ್ ಮತ್ತು ವೇಗ:

ವಿವೋ V7+ ಸ್ಮಾರ್ಟ್‌ಫೋನಿನಲ್ಲಿ ಆಕ್ಟಾ-ಕೋರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ಕಾಣಬಹುದಾಗಿದೆ. ಅಲ್ಲದೇ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ:

ಬ್ಯಾಟರಿ ಮತ್ತು ಇತರೆ:

ಈ ಫೋನಿನಲ್ಲಿ 3225mAh ಬ್ಯಾಟರಿಯನ್ನು ನೀಡಲಾಗಿದ್ದು, ಇದರೊಂದಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ನೀಡಲಾಗಿದೆ. ಇದಲ್ಲದೇ ಹೈಪೈ ಆಡಿಯೋ ಇಂಜಿನ್ ಅನ್ನು ನಿಡಲಾಗಿದೆ.

Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ "ನೋಕಿಯಾ 6"!!
ಬೆಲೆ:

ಬೆಲೆ:

ಇಂದಿನಿಂದ ಈ ಫೋನ್ ಅನ್ನು ಪ್ರೀಬುಕ್ ಮಾಡಬಹುದಾಗಿದೆ. ಸೆಪ್ಟೆಂಬರ್ 15 ರಿಂದ ಈ ಪೋನ್ ಮಾರುಕಟ್ಟೆಯಲ್ಲ ದೊರೆಯಲಿದ್ದು, ಬೆಲೆ ರೂ.21,990 ಆಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
As expected, the Vivo V7+ has been officially launched in India at an event held in New Delhi today. The smartphone is priced at Rs. 21,990 and comes with several exciting features. to know more visit kananda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot