"ಹಾನರ್ 6ಎಕ್ಸ್" ಎಸ್‌ಕ್ಲೂಸಿವ್ ಸೇಲ್ ಇಂದು 12 ಗಂಟೆಗೆ..!!
ಅತ್ಯಂತ ಹೆಚ್ಚು ಫೀಚರ್ ಒಳಗೊಂಡು ಬರುತ್ತಿರುವ ಹುವಾವೆಯ ಸರಣಿ ಸ್ಮಾರ್ಟ್‌ಫೋನ್ "ಹಾನರ್ 6ಎಕ್ಸ್" ಕಡಿಮೆ ಬೆಲೆ ಹೊಂದಿರುವುದರಿಂದ ಸ್ಮಾರ್ಟ್‌ಫೋನ್ ಪ್ರಿಯರು ಖರೀದಿಸಲು ಕಾತುರರಾಗಿದ್ದಾರೆ.
ಸ್ಮಾರ್ಟ್‌ಫೋನ್ ಪ್ರಿಯರು ಖರೀದಿಸಲು ಕಾತರಿಸುತ್ತಿರುವ ಹುವಾವೆಯ "ಹಾನರ್ 6ಎಕ್ಸ್" ಸ್ಮಾರ್ಟ್‌ಫೋನ್ ಜನವರಿ 24 ರಂದು 12 ಗಂಟೆಗೆ ಅಮೇಜಾನ್‌ನಲ್ಲಿ ಮಾರಟಕ್ಕಿದೆ.!! ಈ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಲು ರೆಡಿಯಾಗಿದೆ.!!
ಅತ್ಯಂತ ಹೆಚ್ಚು ಫೀಚರ್ ಒಳಗೊಂಡು ಬರುತ್ತಿರುವ ಹುವಾವೆಯ ಸರಣಿ ಸ್ಮಾರ್ಟ್‌ಫೋನ್ "ಹಾನರ್ 6ಎಕ್ಸ್" ಕಡಿಮೆ ಬೆಲೆ ಹೊಂದಿರುವುದರಿಂದ ಸ್ಮಾರ್ಟ್‌ಫೋನ್ ಪ್ರಿಯರು ಖರೀದಿಸಲು ಕಾತುರರಾಗಿದ್ದಾರೆ.
ಜಿಯೋ ಬ್ರಾಡ್‌ಬ್ಯಾಂಡ್ ಸೇವೆಗೂ ಯಾರು ಸಾಟಿ ಇಲ್ಲ!..ಸೆಕೆಂಡ್‌ಗೆ 1 ಜಿಬಿ ಡೌನ್‌ಲೋಡ್ !!
ಗೋಲ್ಡ್, ಸಿಲ್ವರ್, ಗ್ರೇ ಮತ್ತು ಬ್ಲೂ ಕಲರ್‌ಗಳಲ್ಲಿ "ಹಾನರ್ 6ಎಕ್ಸ್" ಬಿಡುಗಡೆಯಾಗುತ್ತಿದ್ದು, ಇಂದು 12 ಗಂಟೆಗೆ ಅಮೇಜಾನ್‌ನಲ್ಲಿ ಎಸ್‌ಕ್ಲೂಸಿವ್ ಮಾರಟಕ್ಕಿದೆ. ಹಾಗಾಗಿ, "ಹಾನರ್ 6ಎಕ್ಸ್" ಸ್ಮಾರ್ಟ್‌ಫೋನ್ ಹೊಂದಿರುವ ಫೀಚರ್ ಏನು? ಬೆಲೆ ಎಷ್ಟು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ರೆಸ್ಯುಲೇಶನ್
"ಹಾನರ್ 6ಎಕ್ಸ್" 5.5 ಇಂಚ್ ಸ್ಪೋರ್ಟಿಂಗ್ ಐಪಿಎಸ್ ಡಿಸ್‌ಪ್ಲೇ ಜೊತೆಗೆ 2.5D ಕರ್ವಡ್ ಗ್ಲಾಸ್ ಪ್ರೊಟೆಕ್ಷನ್ ಹೊಂದಿದೆ.ಮತ್ತು 1080*1920 ಪಿಕ್ಸೆಲ್ ರೆಸ್ಯುಲೇಶನ್ ಹೊಂದಿದ್ದು, ಹೆಚ್‌ಡಿ ಗುಣಮಟ್ಟದ ವಿಡಿಯೋಗಳು ಅತ್ಯುತ್ತಮವಾಗಿ ಮೂಡಿಬರಲಿವೆ.

ಒಎಸ್ ಮತ್ತು ಪ್ರೊಸೆಸರ್ ಯಾವುದು?
ಹಾನರ್ 6ಎಕ್ಸ್ ಇಎಮ್‌ಯುಐ 4.1 ಆಪರೇಟಿಂಗ್ ಸಿಸ್ಟಮ್ ಮತ್ತು ಕಿರಿನ್ ಆಕ್ಟ-ಕೋರ್ (4 cores at 2.1GHz + 4 cores at 1.7GHz) ಪ್ರೊಸೆಸರ್ ಹೊಂದಿದ್ದು, ಉಪಯೋಗಕ್ಕೆ ಅತ್ಯದ್ಬುತ ಫೀಲ್ ನೀಡಲಿದೆ. ಜೊತೆಗೆ ಹೈಬ್ರಿಡ್ ಡ್ಯುವೆಲ್ ಸಿಮ್ ಕಾರ್ಡ್ ಸ್ಲಾಟ್ ಹೊಂದಿದೆ

12 ಮತ್ತು 8 ಮೆಗಾಪಿಕ್ಸೆಲ್ ಕ್ಯಾಮೆರಾ!
ಹಾನರ್ ಸೀರಿಸ್ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ಎಂದರೆ ಅತ್ಯುತ್ತಮ ಎನ್ನುವ ಅನುಭವ ಬರುತ್ತದೆ. ಕಡಿಮೆ ಮೆಗಾಪಿಕ್ಸೆಲ್ ಕ್ಯಾಮೆರಾ ಆದರೂ ಇದಕ್ಕಿಂತ ಉತ್ತಮ ಚಿತ್ರಗಳನ್ನು ಇದೇ ಸರಣಿಯ ಯಾವ ಸ್ಮಾರ್ಟ್‌ಫೋನ್‌ಗಳು ತೆಗೆಯಲಾರವು.

RAM ಮತ್ತು ROM
3GB RAM/ 32GB ಸಂಗ್ರಹಣಾ ಸಾಮರ್ಥ್ಯ,4GB RAM/ 32GBಸಂಗ್ರಹಣಾ ಸಾಮರ್ಥ್ಯ, ಮತ್ತು 4GB RAM/ 64GB ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಹಾನರ್ 6ಎಕ್ಸ್ ಸ್ಮಾರ್ಟ್‌ಫೋನ್‌ಗಳು ಹೊರಬರುತ್ತಿವೆ

ಬೆಲೆ ಎಷ್ಟು?
3GB RAM/ 32GB ಸಂಗ್ರಹಣಾ ಸಾಮರ್ಥ್ಯದ ಹಾನರ್ 6ಎಕ್ಸ್ ಸ್ಮಾರ್ಟ್‌ಫೋನ್ ಬೆಲೆ 9,999 ರೂಗಳಾದರೆ 4GB RAM/ 64GB ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಹಾನರ್ 6ಎಕ್ಸ್ ಸ್ಮಾರ್ಟ್‌ಫೋನ್ ಬೆಲೆ 12,999 ರೂಗಳಾಗಿವೆ.


Click it and Unblock the Notifications








