ಜಿಯೋ ಬ್ರಾಡ್‌ಬ್ಯಾಂಡ್ ಸೇವೆಗೂ ಯಾರು ಸಾಟಿ ಇಲ್ಲ!..ಸೆಕೆಂಡ್‌ಗೆ 1 ಜಿಬಿ ಡೌನ್‌ಲೋಡ್ !!

Written By:

ರಿಲಯನ್ಸ್ ಜಿಯೋ ಏನೇ ಮಾಡಿದರೂ ಟೆಲಿಕಾಂ ಮಾರುಕಟ್ಟೆಯಲ್ಲಿ ಒಂದು ದೊಡ್ಡ ಸಂಚಲನವೇ ಮೂಡುತ್ತದೆ.! ಇದಕ್ಕೆ ಹೊಸ ಸೇರ್ಪಡೆ ರಿಲಯನ್ಸ್ ಜಿಯೋ ಎಫ್‌ಟಿಟಿಹೆಚ್ ಬ್ರಾಂಡ್‌ ಬ್ಯಾಂಡ್‌ ಸೇವೆ .!! ಹೌದು. ಜಿಯೋ ಇದೀಗ ಹೈ ಸ್ಪೀಡ್ ಇಂಟರ್‌ನೆಟ್‌ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಕೇವಲ ಒಂದೇ ಒಂದು ಸೆಕೆಂಡ್‌ನಲ್ಲಿ ಪೂರ್ಣ ಸಿನಿಮಾ ಡೌನ್‌ಲೋಡ್‌ ಮಾಡಬಹುದು ಎನ್ನಲಾಗಿದೆ.

ಮಾಹಿತಿ ಪ್ರಕಾರ ಈಗಾಗಲೇ ಮುಂಬೈನಲ್ಲಿ ಈ ಸೇವೆ ಶುರುವಾಗಿದ್ದು, ನಗರದ ಹಲವೆಡೆ ಜಿಯೋ ಫೈಬರ್ ಕೇಬಲ್ ಲೈನ್ ಹಾಕಲಾಗಿದೆ. ಜಿಯೋ ಫೈಬರ್ ಕೇಬಲ್ ತಂತ್ರಜ್ಞಾನ ಮೂಲಕ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಎಫ್‌ಟಿಟಿಹೆಚ್ ನೆಟ್‌ವರ್ಕ್ ಮೂಲಕ 1 ಜಿಬಿಪಿಎಸ್‌ವರೆಗೆ ಇಂಟರ್‌ನೆಟ್ ಸ್ಪೀಡ್ ನೀಡಲಿದೆ.

ಜಿಯೋ ಬ್ರಾಡ್‌ಬ್ಯಾಂಡ್ ಸೇವೆಗೂ ಯಾರು ಸಾಟಿ ಇಲ್ಲ!.ಸೆಕೆಂಡ್‌ಗೆ 1ಜಿಬಿ ಡೌನ್‌ಲೋಡ್!

ಆಧಾರ್ ಇ-ಕೆವೈಸಿ ಸೇವೆ ಏಕೆ ಪಡೆಯಬೇಕು? ನಿಮ್ಮ ಭವಿಷ್ಯಕ್ಕೆ ಏನಿದರ ಕೊಡುಗೆ ತಿಳಿಯಿರಿ?

ಜಿಯೋ ಬ್ರಾಡ್‌ಬ್ಯಾಂಡ್‌ ಸೇವೆ ಸಹ ಮೂರು ತಿಂಗಳು ಉಚಿತವಾಗಿರುತ್ತದೆ ಎಂದು ಜಿಯೋ ಹೇಳಿದೆ. ಕೇವಲ ಎಫ್‌ಯುಪಿ ನೀತಿ ಅನ್ವಯ 4,500 ರೂಪಾಯಿಗಳನ್ನು ನೀಡಿ ಹೊಸ ಕನೆಕ್ಷನ್ ಹಾಗೂ ರೂಟರ್‌ ಪಡೆದುಕೊಳ್ಳಬೇಕಿದೆ. ಏರ್‌ಟೆಲ್‌ ಕೂಡ ಇದೇ ರೀತಿಯ ವಿ-ಫೈಬರ್‌ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಅಳವಡಿಸಿದ್ದು, 100 kbps ಸ್ಪೀಡ್‌ನಲ್ಲಿ ಡೇಟಾ ನೀಡುತ್ತಿದೆ.

ಜಿಯೋ ಬ್ರಾಡ್‌ಬ್ಯಾಂಡ್ ಸೇವೆಗೂ ಯಾರು ಸಾಟಿ ಇಲ್ಲ!.ಸೆಕೆಂಡ್‌ಗೆ 1ಜಿಬಿ ಡೌನ್‌ಲೋಡ್!

ಇನ್ನು ಒಂದು ವೇಳೆ ಕಂಪನಿ ನೀಡುತ್ತಿರುವ ಪ್ಲ್ಯಾನ್‌ ಗ್ರಾಹಕರಿಗೆ ಇಷ್ಟವಾಗದಿದ್ದರೆ ಜಿಯೋ ಸಂಪೂರ್ಣ ಹಣವನ್ನು ಹಿಂದಿರುಗಿಸಲಿದೆ ಎಂದು ಜಿಯೋ ಅಧಿಕಾರಿಗಳು ತಿಳಿಸಿದ್ದಾರೆ. ಏರ್‌ಟೆಲ್‌ ಕೂಡ ಇದೇ ರೀತಿಯಾಗಿ ಹೇಳಿತ್ತು.English summary
jio said to be a charge of Rs. 4,500 for installation and router. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot