ಹಾನರ್ 6ಎಕ್ಸ್ ಬಿಡುಗಡೆ!..ಚಾಲೆಂಜ್ 10,000ದಲ್ಲಿ ಇದಕ್ಕಿಂತ ಬೇರೆ ಸ್ಮಾರ್ಟ್‌ಫೋನ್ ಇಲ್ಲ!!

Written By:

ಸ್ಮಾರ್ಟ್‌ಫೋನ್ ಪ್ರಿಯರು ಬಹುದಿನಗಳಿಂದ ಕಾಯುತ್ತಿದ್ದ ಡ್ಯುವೆಲ್ ರೀಯರ್ ಕ್ಯಾಮೆರಾ ಹೊಂದಿರುವ ಹುವಾವೆ ಹಾನರ್ 6ಎಕ್ಸ್ ಸ್ಮಾರ್ಟ್‌ಫೋನ್ ಇದೇ ತಿಂಗಳು 23 ನೇ ತಾರೀಖು ಬಿಡುಗಡೆಯಾಗುತ್ತಿದೆ.! ಅತ್ಯಂತ ಕಡಿಮೆ ಬೆಲೆಗೆ ಅತ್ಯಾಧುನಿಕ ಫೀಚರ್‌ ಒಳಗೊಂಡಿರುವ ಹುವಾವೆ ಹಾನರ್ 6ಎಕ್ಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿರುವುದಾಗಿ ಹುವಾವೆ ಕಂಪೆನಿ ಮಾಧ್ಯಮ ಮಿತ್ರರಿಗೆ ಆಹ್ವಾನ ನೀಡಿದೆ.

5.5 ಇಂಚ್‌ ಡಿಸ್‌ಪ್ಲೇ ಮತ್ತು ಕಂಪನಿಯ ಕಿರಿನ್ 655 ಪ್ರೊಸೆಸರ್‌ ಹೊಂದಿರುವ ಹುವಾವೆ ಹಾನರ್ 6ಎಕ್ಸ್ ಪ್ರಸ್ತುತ ಹೊಂದಿರಲಿರುವ ಫೀಚರ್‌ ಆಪಲ್‌ ಐಫೋನ್‌ಗಳಿಗೆ ಸರಿಸಾಟಿ ಎನ್ನಲಾಗಿದೆ. ಆದರೆ, ಬೆಲೆಯ ವಿಷಯದಲ್ಲಿ ಐಫೋನ್‌ಗೆ ಸಂಪೂರ್ಣ ವಿರೋಧವಾಗಿದ್ದು, ಕೇವಲ 10,000 ರೂಪಾಯಿಗಳಲ್ಲಿ ಹುವಾವೆ ಹಾನರ್ 6ಎಕ್ಸ್ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಡೌನ್‌ ಪೇಮೆಂಟ್‌ ಸ್ಕೀಮ್‌...! ಐಫೋನ್ 7 ಖರೀದಿಸಿ ಕೇವಲ 1700 ರೂ.ಗೆ!!

ಹಾಗಾಗಿ, ಹುವಾವೆ ಹಾನರ್ 6ಎಕ್ಸ್ ಸ್ಮಾರ್ಟ್‌ಫೋನ್‌ ಆಪಲ್‌ ಐಫೋನ್‌ಗಳಿಗೆ ಸೆಡ್ಡು ಹೊಡೆಯಬಹುದಾದ ಯಾವ ಯಾವ ಫೀಚರ್‌ಗಳನ್ನು ಹೊಂದಿದೆ. ಅವುಗಳ ವಿಶೇಷತೆಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ಪ್ರೊಸೆಸರ್.

ಡಿಸ್‌ಪ್ಲೇ ಮತ್ತು ಪ್ರೊಸೆಸರ್.

ಮೊದಲೇ ಹೇಳಿದ ಹಾಗೆ ಹುವಾವೆ ಹಾನರ್ 6ಎಕ್ಸ್ 5.5 ಇಂಚ್‌ ಡಿಸ್‌ಪ್ಲೇ ಮತ್ತು ಕಂಪನಿಯ ಕಿರಿನ್ 655 ಪ್ರೊಸೆಸರ್‌ಹೊಂದಿದ್ದು, ಅತ್ಯುತ್ತಮ ಕಾರ್ಯನಿರ್ವಹಣೆ ಅನುಭವವನ್ನು ನೀಡಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

RAM ಮತ್ತು ROM.

RAM ಮತ್ತು ROM.

ಇಷ್ಟು ಕಡಿಮೆ ಬೆಲೆಯಲ್ಲಿ ಪ್ರಸ್ತುತ ಇರುವ ಯಾವ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಹಾನರ್ 6ಎಕ್ಸ್ ಫೀಚರ್‌ ನಿಮಗೆ ಸಿಗಲಾರದು.! ಹೌದು, ಹಾನರ್ 6ಎಕ್ಸ್ 3/4GB RAM ಮತ್ತು 32/64GB ROM ಕೆಪಾಸಿಟಿಯನ್ನು ಹೊಂದಿದೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಹುವಾವೆ ಹಾನರ್ 6ಎಕ್ಸ್ 12 ಮೆಗಾಪಿಕ್ಸೆಲ್ ಹೊಂದಿರುವ ಎರಡು ಡ್ಯುವೆಲ್ ಕ್ಯಾಮೆರಾಗಳನ್ನು ಹೊಮದಿದೆ. ಇನ್ನು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ನಲ್ಲಿದೆ.

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

ಹಾನರ್ 6ಎಕ್ಸ್ ಅತ್ಯುತ್ತಮ ಎನ್ನುವಂತಹ 3340Mah ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಸಂಪೂರ್ಣ ಮೂರುದಿನಗಳ ಚಾರ್ಜನೀಜಿಡಲಿದೆ ಎನ್ನಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Honor 6X features dual rear camera setup and the device is expected to bear an affordable price . to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot