ಹಾನರ್ ನಿಂದ ಟೆಲಿ ಲೈನ್ಸ್ ಹೊಂದಿರುವ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಶೀಘ್ವವೇ..!
ಜಾಗತೀಕ ಮಾರುಕಟ್ಟೆಯಲ್ಲಿ ಹುವಾವೆ ಸ್ಮಾರ್ಟ್ ಫೋನ್ ಕಂಪನಿಯೂ ಹೆಚ್ಚು ಸದ್ದು ಮಾಡುತ್ತಿದ್ದು, ಭಾರತದಲ್ಲಿ ಹಾನರ್ ಬ್ರಾಂಡಿನ ಅಡಿಯಲ್ಲಿ ತನ್ನ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಸಾಕಷ್ಟು ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಹಾನರ್, ಮತ್ತೊಂದು ಬೊಂಬಾಟ್ ಸ್ಮಾರ್ಟ್ ಫೋನ್ ಅನ್ನು ಇದೇ ಮಾರ್ಚ್ 12 ರಂದು ಬಿಡುಗಡೆ ಮಾಡಲಿದೆ.

ಮೂಲಗಳ ಪ್ರಕಾರ ಹಾನರ್ 7C ಸ್ಮಾರ್ಟ್ ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಈ ಕುರಿತು ಯಾವುದೇ ಮಾಹಿತಿಯನ್ನು ಹಾನರ್ ಬಿಡುಗಡೆ ಮಾಡಿಲ್ಲ. ಹಾನರ್ 7C ಸ್ಮಾರ್ಟ್ ಫೋನ್ ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಆಗಿದ್ದು, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕುವ ಲಕ್ಷಣಗಳನ್ನು ಹೊಂದಿದೆ.
ಹಾನರ್ 7C ಸ್ಮಾರ್ಟ್ ಫೋನ್ ನಲ್ಲಿ 5.99 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಡ್ಯುಯಲ್ ಕ್ಯಾಮೆರಾ ಸೆಟಪ್ ನೊಂದಿಗೆ ಕಾಣಿಸಿಕೊಳ್ಳಲಿದೆ. ಅಲ್ಲದೇ ಸೆಲ್ಫಿಗಾಗಿ ಬ್ಯೂಟಿ ಮೋಡ್ ಸಹ ಇದರಲ್ಲಿ ಇರಲಿದೆ. ಡ್ಯುಯಲ್ ಸಿಮ್ ಸಪೋರ್ಟ್ ಮಾಡುವ ಈ ಸ್ಮಾರ್ಟ್ ಫೋನ್ ನಲ್ಲಿ ಉತ್ತಮ ಬ್ಯಾಟರಿಯನ್ನ ಕಂಪನಿ ಅಳವಡಿಸಲಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಹಾನರ್ 7C ಸ್ಮಾರ್ಟ್ ಫೋನ್ ನಲ್ಲಿ 18:9 ಅನುಪಾತದ ಡಿಸ್ ಪ್ಲೇಯನ್ನು ನೀಡಲಾಗಿದ್ದು, ಇದು HD ಪ್ಲಸ್ ಗುಣಮಟ್ಟದಾಗಿದ್ದು, ವೀಡಿಯೊ ನೋಡಲು ಮತ್ತು ಗೇಮ್ ಆಡಲು ಹೇಳಿ ಮಾಡಿಸಿದಂತಿದೆ. ಅಲ್ಲದೇ ಈ ಸ್ಮಾರ್ಟ್ ಫೋನಿನಲ್ಲಿ 1.8GHz ವೇಗ ಆಕ್ಟಾಕೋರ್ ಪ್ರೋಸೆಸರ್ ಕಾಣಬಹುದಾಗಿದ್ದು, 3GB/4GB RAM ನೀಡುವ ಸಾಧ್ಯತೆಗಳಿದೆ.
ಓದಿರಿ: ಏರ್‌ಟೆಲ್-ಜಿಯೋಗೆ ಸೆಡ್ಡು: ಜೂನ್ 30ರವರೆಗೂ ಉಚಿತ ಸೇವೆ ನೀಡಿದ ವೊಡಾಫೋನ್..!
ಇದಲ್ಲದೇ ಹಾನರ್ ಮೊದಲ ಬಾರಿಗೆ ಟೆಲಿ ಲೈನ್ಸ್ ಗಳನ್ನು ತನ್ನ ಸ್ಮಾರ್ಟ್ ಫೋನ್ ನಲ್ಲಿ ಪರಿಚಯ ಮಾಡುತ್ತಿದ್ದು, 20 MP + 13MP ಡ್ಯುಯಲ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ನೀಡುತ್ತಿದೆ. ಇದರೊಂದಿಗೆ 8MP ಸೆಲ್ಪೀ ಕ್ಯಾಮೆರಾವನ್ನು ಬಳಕೆದಾರರಿಗೆ ನಿಡಲಿದೆ. ರೂ.16000ದ ಆಸುಪಾಸಿನಲ್ಲಿ ಈ ಕ್ಯಾಮೆರಾ ಫೋನ್ ಲಾಂಚ್ ಆಗುವ ಸಾಧ್ಯತೆ ಇದೆ.


Click it and Unblock the Notifications