ಬೆಸ್ಟ್ ಬ್ಯಾಟರಿ ಸ್ಮಾರ್ಟ್‌ಫೋನ್‌ ಪಟ್ಟಿಯಲ್ಲಿ ಹಾನರ್ 7X ಬೆಸ್ಟ್: ಯಾಕೆ ಅಂದ್ರಾ..?

|

ಜಾಗತಿಕ ಮಾರುಕಟ್ಟೆಯಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪನಿಗಳ ನಿದ್ದೆಗೇಡಿಸಿರುವ ಹುವಾವೆ ಕಂಪನಿ, ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿರುವ ಹಾನರ್ ಕಂಪನಿಯ ಮತ್ತೊಂದು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಅದುವೇ ಹಾನರ್ 7X ಸ್ಮಾರ್ಟ್‌ಫೋನ್.

ಬೆಸ್ಟ್ ಬ್ಯಾಟರಿ ಸ್ಮಾರ್ಟ್‌ಫೋನ್‌ ಪಟ್ಟಿಯಲ್ಲಿ ಹಾನರ್ 7X ಬೆಸ್ಟ್: ಯಾಕೆ ಅಂದ್ರಾ.

ಓದಿರಿ: ಶಿಯೋಮಿ ಅಲೆ ಅಳಿಸಲಿದೆ 10.or D ಸ್ಮಾರ್ಟ್‌ಪೋನ್‌: ರೂ.5000ಕ್ಕೆ ಎಷ್ಟೇಲ್ಲಾ ನೀಡುತ್ತಿದೆ ಗೊತ್ತಾ..?

ರೂ.12,999ಕ್ಕೆ ಲಾಂಚ್ ಆಗಿರುವ ಹಾನರ್ 7X ಸ್ಮಾರ್ಟ್‌ಫೋನ್ ಉತ್ತಮವಾಗಿದ್ದು, ಕೊಡುವ ಬೆಲೆಗೆ ಉತ್ತಮ ವಿಶೇಷತೆಗಳನ್ನು ಒಳಗೊಂಡಿದೆ ಎನ್ನಲಾಗಿದೆ. ಮಧ್ಯಮ ಸರಣಿಯ ಆಂಡ್ರಾಯ್ಡ್‌ನಲ್ಲಿ ಇದು ಉತ್ತಮ ಫೋನ್ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಇರುವ ಎಲ್ಲಾ ಟ್ರೆಂಡ್ ವಿನ್ಯಾಸಗಳನ್ನು ಈ ಹಾನರ್ 7X ಸ್ಮಾರ್ಟ್‌ಫೋನ್‌ನಲ್ಲಿ ಕಾಣಬಹುದಾಗಿದೆ.

3,340mAh ಬ್ಯಾಟರಿ; ಭಾರೀ ಬಾಳಿಕೆಯ ಬ್ಯಾಟರಿ:

3,340mAh ಬ್ಯಾಟರಿ; ಭಾರೀ ಬಾಳಿಕೆಯ ಬ್ಯಾಟರಿ:

ಬ್ಯಾಟರಿ ಸಾಲುತ್ತಿಲ್ಲ ಎನ್ನುವವರಿಗೆ ಉತ್ತಮವಾದ ಫೋನ್ ಎಂದರೆ ಹಾನರ್ 7X ಸ್ಮಾರ್ಟ್‌ಫೋನು. ಇದರಲ್ಲಿ ದೊಡ್ಡದಾದ 3,340mAh ಬ್ಯಾಟರಿ ಅಳವಡಿಸಲಾಗಿದೆ. ಇದು 18:9 ಅನುಪಾತದ ದೊಡಡ ಸ್ಕ್ರಿನ್ ಹೊಂದಿದರೂ ಸಹ ಬ್ಯಾಟರಿ ಬಾಳಿಕೆ ಒಂದು ದಿನಕ್ಕಿಂತ ಹೆಚ್ಚು ಬರಲಿದೆ.

ಆಲ್ಟ್ರಾ ಪವರ್ ಸೇವೆವಿಂಗ್ ಮೋಡ್:

ಆಲ್ಟ್ರಾ ಪವರ್ ಸೇವೆವಿಂಗ್ ಮೋಡ್:

ಬ್ಯಾಟರಿ ಬಾಳಿಕೆಯನ್ನು ಹೆಚ್ಚು ಮಾಡುವ ಸಲುವಾಗಿಯೇ ಹಾನರ್ 7X ಸ್ಮಾರ್ಟ್‌ಫೋನ್‌ನಲ್ಲಿ ಆಲ್ಟ್ರಾ ಪವರ್ ಸೇವೆವಿಂಗ್ ಮೋಡ್ ಅನ್ನು ಹಾನರ್ ನೀಡಿದೆ ಎನ್ನಲಾಗಿದೆ. ಇದರಿಂದಾಗಿ ನಿಮ್ಮ ಸ್ಮಾರ್ಟ್‌ಪೋನ್‌ ಬ್ಯಾಟರಿ ಬೇಗನೇ ಕಾಲಿಯಾಗುವುದಿಲ್ಲ ಎನ್ನಲಾಗಿದೆ. ಇದಕ್ಕಾಗಿಯೇ ಕಿರನ್ 659 ಚಿಪ್‌ಸೆಟ್‌ಅನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ.

ಆಪ್‌ ಪವರ್ ಸೇವಿಂಗ್:

ಆಪ್‌ ಪವರ್ ಸೇವಿಂಗ್:

ಇದಲ್ಲದೇ ಈ ಪೋನ್ ಹಿಂಭಾಗದಲ್ಲಿ ಕಾರ್ಯನಿರ್ವಹಿಸುವ ಆಪ್‌ಗಳನ್ನು ಬೇಗನೇ ಕಾರ್ಯಚರಣೆ ಸ್ಥಗಿತಗೊಳಿಸುವಂತೆ ಮಾಡುವುದಲ್ಲದೇ, ಬ್ಯಾಟರಿ ಬಾಳಿಕೆಯನ್ನು ಹೆಚ್ಚು ಮಾಡಲಿದೆ ಎನ್ನಲಾಗಿದೆ. ಇದಕ್ಕಾಗಿಯೇ ಈ ಫೋನಿನ ಸ್ಮಾರ್ಟ್‌ಫೋನಿನಲ್ಲಿ ಹೊಸ ಮಾದರಿಯ ವಿನ್ಯಾಸವನ್ನು ಮಾಡಲಾಗಿದೆ.

ಬ್ಯಾಟರಿ ಉಳಿಸುವ ಸ್ಮಾರ್ಟ್‌ ಸ್ಕ್ರಿನ್‌:

ಬ್ಯಾಟರಿ ಉಳಿಸುವ ಸ್ಮಾರ್ಟ್‌ ಸ್ಕ್ರಿನ್‌:

ಹಾನರ್ 7X ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಿರುವ ದೊಡ್ಡ ಸ್ಕ್ರಿನ್ ಬ್ಯಾಟರಿಯನ್ನು ಕಡಿಮೆ ಬಳಕೆ ಮಾಡಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಟಾಪ್‌ ಎಂಡ್‌ ಫೋನ್‌ಗಳಲ್ಲೂ ಕಾಣಲು ಸಾಧ್ಯವಾಗದ ಶ್ರೇಷ್ಠತೆ ಎನ್ನಲಾಗಿದೆ.

ಬ್ಯಾಟರಿ ಟೆಸ್ಟ್‌ ನಲ್ಲಿ ಕಾಣಿಸಿದ್ದೇನು?

ಬ್ಯಾಟರಿ ಟೆಸ್ಟ್‌ ನಲ್ಲಿ ಕಾಣಿಸಿದ್ದೇನು?

ಹಾನರ್ 7X ಸ್ಮಾರ್ಟ್‌ಫೋನ್‌ ಅನ್ನು 100% ಬ್ಯಾಟರಿ ಚಾರ್ಜ್ ಮಾಡಿ, ನಂತರದಲ್ಲಿ 90, ನಿಮಿಷಗಳ FHD ವಿಡಿಯೋವನ್ನು ವೈ-ಫೈ ಮೂಲಕ ಪ್ಲೇ ಮಾಡಲಾಯಿತು. ಆದರೆ ಬ್ಯಾಟರಿ ಇಳಿಕೆಯಾಗಿದ್ದು, ಕೇವಲ 18% ಮಾತ್ರವೇ ಎನ್ನಲಾಗಿದೆ. ಅಲ್ಲದೇ ಬೇರೆ ಫೋನ್‌ಗಳಿಗೆ ಹೋಲಿಕೆ ಮಾಡಿಕೊಂಡರೆ ಇದು ಬೆಸ್ಟ್ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ.

ಉಪಸಂಹಾರ:

ಉಪಸಂಹಾರ:

ಸ್ಮಾರ್ಟ್‌ಫೋನ್‌ ಬ್ಯಾಟರಿ ಸಾಲುವುದಿಲ್ಲ ಎನ್ನುವ ದಿನಗಳಲ್ಲಿ 3340mAh ಬ್ಯಾಟರಿಯನ್ನು ಹೊಂದಿರುವ ಹಾನರ್ 7X ಸ್ಮಾರ್ಟ್‌ಫೋನ್‌ ವಿಭಿನ್ನವಾಗಿದ್ದು, ದೊಡ್ಡ ಬ್ಯಾಟರಿ ಆದರೂ ಉತ್ತಮ ಬ್ಯಾಕಪ್ ನೀಡಲಿದೆ ಎನ್ನಲಾಇದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಬೆಸ್ಟ್ ಸ್ಮಾರ್ಟ್‌ಫೋನ್.

Best Mobiles in India

English summary
Honor 7X’s high-performance battery delivers long-lasting battery backup. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X