ಟಾಪ್‌ಎಂಡ್ ಸ್ಮಾರ್ಟ್‌ಫೋನ್ ನಿದ್ದೆಗೇಡಿಸಿದ ಹಾನರ್ 7X: ಈ ಫೋನಿನಲ್ಲಿ ಏನಿಲ್ಲ..? ಎಲ್ಲಾ ಇದೆ..!
ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್-ಆಪಲ್ ಕಂಪನಿಗಳಿಗೆ ಸೆಡ್ಡು ಹೊಡೆಯುತ್ತಿರುವ ಚೀನಾ ಮೂಲಕ ಹುವಾವೆ ಭಾರತೀಯ ಮಾರುಕಟ್ಟೆಗೆ ಹೊಸದೊಂದು ಪ್ರೀಮಿಯಮ್ ಫೋನ್‌ನನ್ನು ಲಾಂಚ್ ಮಾಡಿದೆ. ಹಾನರ್ 7X ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಇತರೆ ಸ್ಮಾರ್ಟ್‌ಫೋನ್ ತಯಾರಕರ ನಿದ್ದೆಗೇಡಿಸಿದೆ.

ಓದಿರಿ: ಬಜೆಟ್‌ನಲ್ಲಿ ಬೊಂಬಾಟ್ ಆಪರ್ ಕೊಟ್ಟ BSNL: ಜಿಯೋಗೂ ಸೆಡ್ಡು
ಹಾನರ್ 7X ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ಎಲ್ಲಾ ವಿಶೇಷತೆಗಳನ್ನು ಒಳಗೊಂಡಿರುವ ಪವರ್ ಪ್ಯಾಕ್ ಆಗಿದ್ದು, ಡ್ಯುಯಲ್ ಕ್ಯಾಮೆರಾ, ಫುಲ್‌ಸ್ಕ್ರಿನ್ ಡಿಸ್‌ಪ್ಲೇ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿರುವ ಹಿನ್ನಲೆಯಲ್ಲಿ ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿತ್ತು. ಬೆಲೆಯೂ ತೀರಾ ಹೆಚ್ಚಿನಲ್ಲದ ಕಾರಣ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಸೃಷ್ಠಿಸಿಕೊಳ್ಳಲಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:
ಹಾನರ್ 7X ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದು, 32GB ಆವೃತ್ತಿಯ ಫೋನ್ ರೂ. 12,999ಕ್ಕೆ ದೊರೆಯಲಿದ್ದು, ಇದೇ ಮಾದರಿಯಲ್ಲಿ 64GB ಆವೃತ್ತಿಯೂ ರೂ. 15,999ಕ್ಕೆ ಮಾರಾಟವಾಗಲಿದೆ ಎನ್ನಲಾಗಿದೆ.

ಡಿಸೆಂಬರ್ 7 ರಿಂದ ಮಾರಾಟ:
ಹಾನರ್ 7X ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಡಿಸೆಂಬರ್ 7 ರಿಂದ ಮಾರಾಟವಾಗಲಿದೆ. ಬ್ಲಾಕ್, ಬ್ಲೂ ಮತ್ತು ಗೋಲ್ಡ್ ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ಕಾಣಿಸಿಕೊಳ್ಳಲಿದೆ. ಅಮೆಜಾನ್‌ನಲ್ಲಿ ಮಾತ್ರವೇ ಎಕ್ಸ್‌ಕ್ಲೂಸಿವ್ ಆಗಿ ಸೇಲ್ ಆಗಲಿದೆ.

ಹಾನರ್ 7X ವಿಶೇಷತೆಗಳು:
ಹಾನರ್ 7X ಆಂಡ್ರಾಯ್ಡ್ 7.0 ನ್ಯಾಗಾ ಹಾಘೂ EMUI 5.1ನಲ್ಲಿ ಕಾರ್ಯನಿರ್ವಹಿಸಲಿದ್ದು, 18:9 ಅನುಪಾತದ 5.93 ಇಂಚಿನ FHD ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, 4GB RAM ಅನ್ನು ಈ ಫೋನಿನಲ್ಲಿ ಕಾಣಬಹುದು. ಅಲ್ಲದೇ ವೇಗದ ಪ್ರೋಸೆಸರ್ ಅನ್ನು ಇದರಲ್ಲಿ ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ:
ಹಾನರ್ 7X ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. 16 MP + 2MP ಕ್ಯಾಮೆರಾವನ್ನು ಹಿಂಭಾಗದಲ್ಲಿ ನೀಡಲಾಗಿದ್ದು, ಜೊತೆಗ LED ಫ್ಲಾಷ್ ಲೈಟ್ ಅನ್ನು ಅಳವಡಿಸಲಾಗಿದೆ. ಅಲ್ಲದೇ ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಈ ಫೋನಿನಲ್ಲಿ ಸೆಲ್ಫಿಗಾಗಿ ನೀಡಲಾಗಿದೆ.


Click it and Unblock the Notifications