Subscribe to Gizbot

ಬಜೆಟ್‌ನಲ್ಲಿ ಬೊಂಬಾಟ್ ಆಪರ್ ಕೊಟ್ಟ BSNL: ಜಿಯೋಗೂ ಸೆಡ್ಡು

Written By:

ಸರ್ಕಾರಿ ಸ್ವಾಮ್ಯದ BSNL ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ದೈತ್ಯ ಟೆಲಿಕಾಂ ಕಂಪನಿಗಳಿಗೆ ಭಾರೀ ಸ್ಪರ್ಧೆಯನ್ನು ನೀಡುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ಹೊಸ ಹೊಸ ಆಫರ್ ಗಳನ್ನು ಬಿಡುಗಡೆ ಮಾಡುತ್ತಿದೆ. ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿ BSNL ಹೊಸದೊಂದು ಆಫರ್ ಅನ್ನು ಲಾಂಚ್ ಮಾಡಿದೆ.

ಬಜೆಟ್‌ನಲ್ಲಿ ಬೊಂಬಾಟ್ ಆಪರ್ ಕೊಟ್ಟ BSNL: ಜಿಯೋಗೂ ಸೆಡ್ಡು

ಓದಿರಿ: ಶಿಯೋಮಿ Mi A1 ಕೊಳ್ಳಲು ಬಂಪರ್ ಅವಕಾಶ: ಕೇವಲ ರೂ.12,999ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ..!

BSNL ಮಾರುಕಟ್ಟೆಗೆ ದಿನಕ್ಕೊಂದು ಆಫರ್ ಗಳನ್ನು ಲಾಂಚ್ ಮಾಡುತ್ತಿದೆ. ಇದೇ ಮಾದರಿಯಲ್ಲಿ ತನ್ನ ಗ್ರಾಹಕರಿಗೆ ಜೇಬಿಗೆ ಹೊರೆಯಾಗದ ಮಾದರಿಯಲ್ಲಿ ರೂ. 187 ಆಫರ್ ಅನ್ನು ನೀಡುತ್ತಿದೆ. ಇದರಲ್ಲಿ ಗ್ರಾಹಕರಿಗೆ ಅನ್‌ಲಿಮಿಟೆಡ್ ಡೇಟಾ ಮಾಡುವ ಅವಕಾಶವನ್ನು ಮಾಡಿಕೊಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
28 ದಿನಗಳ ಪ್ಲಾನ್:

28 ದಿನಗಳ ಪ್ಲಾನ್:

BSNL ಹೊಸದಾಗಿ ಬಿಡುಗಡೆ ಮಾಡಿರುವ ರೂ. 187 ಪ್ಲಾನ್‌ನಲ್ಲಿ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿ ದೊರೆಯಲಿದೆ. ಇದರೊಂದಿಗೆ 1 GB ಡೇಟಾ ಹೈಸ್ಪಿಡ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದಾದ ನಂತರದಲ್ಲಿ 40kbps ವೇಗದಲ್ಲಿ ಅನ್‌ಲಿಮಿಟೆಡ್ ಡೇಟಾ ಬಳಕೆಗೆ ಲಭ್ಯವಿರಲಿದೆ.

 ಅಲ್ಲದೇ ಅನ್‌ಲಿಮಿಟೆಡ್ ಕರೆಗಳು:

ಅಲ್ಲದೇ ಅನ್‌ಲಿಮಿಟೆಡ್ ಕರೆಗಳು:

ಇದಲ್ಲದೇ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ಕರೆಗಳನ್ನು ಮಾಡುವ ಅವಕಾಶವನ್ನು BSNL ಮಾಡಿಕೊಡಲಿದೆ ಎನ್ನಲಾಗಿದೆ. ಇದರಲ್ಲಿ ರೋಮಿಂಗ್ ಔಟ್ ಗೋಯಿಂಗ್ ಕರೆಗಳು ಸಹ ಉಚಿತವಾಗಿ ಮಾಡಬಹುದಾಗಿದೆ.

ಅನ್‌ಲಿಮಿಟೆಡ್ ಡೇಟಾ:

ಅನ್‌ಲಿಮಿಟೆಡ್ ಡೇಟಾ:

1 GB ಡೇಟಾ ಮುಗಿದ ನಂತರದಲ್ಲಿ ಯೂಟ್ಯೂಬ್ ನೋಡಲು ಸಾಧ್ಯವಾಗದೆ ಹೊದರೂ ಸಹ ವಾಟ್ಸ್‌ಆಪ್ ಮೇಸೆಜ್‌ಗಳನ್ನು ಮಾಡುವ ವೇಗದ ಇಂಟರ್ನೆಟ್ ಅನ್ನು ಪಡೆಯಬಹುದು ಎನ್ನಲಾಗಿದೆ. ಅಲ್ಲದೇ ಇದನ್ನು ಬಳಕೆ ಮಾಡಿಕೊಳ್ಳಲು ಯಾವುದೇ ಮಿತಿಯನ್ನು ವಿಧಿಸಲಾಗಿಲ್ಲ.

ಜಿಯೋ ದೊಂದಿಗೆ ಸ್ಪರ್ಧೆ:

ಜಿಯೋ ದೊಂದಿಗೆ ಸ್ಪರ್ಧೆ:

ಜಿಯೋದಲ್ಲಿಯೂ ಇದೇ ಮಾದರಿಯ ಆಫರ್ ಕಾಣಬಹುದು. ಆದರೆ ಅಲ್ಲಿ 1 GB ಮುಗಿದ ನಂತರದಲ್ಲಿ 64Kbps ವೇಗದ ಡೇಟಾವನ್ನು ಪಡೆಯಬಹುದಾಗಿದೆ. ಆದರೆ BSNLನಲ್ಲಿ ಕೊಂಚ ಕಡಿಮೆ ವೇಗದ ಡೇಟಾ ಬಳಕೆಗೆ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
BSNL Is Now Offering Unlimited Data With the Rs 187 Tariff Plan Countering Jio’s Rs 149 Plan; Sets After FUP Speed of 40 Kbps. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot